Skip to product information
1 of 2

Gururaj Kodkani

ಪ್ರತಿಜ್ಞೆ

ಪ್ರತಿಜ್ಞೆ

Publisher -

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 204

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಅತಿವಾಸ್ತವದ ಕಲ್ಪನೆಯೂ ವಿಭಿನ್ನವಾಗಿ ಭಯ, ಪ್ರೀತಿ, ರೋಚಕತೆಯಂಥ ಹತ್ತು ಹಲವು ಭಾವಗಳನ್ನು ಓದುಗನಲ್ಲಿ ಮೂಡಿಸಲು ಸಾಧ್ಯವಾ ಎನ್ನಿಸಿದ್ದು ಸುಳ್ಳಲ್ಲ. ಕಿಂಗ್ನ ಬರಹಗಳಲ್ಲಿ ನಿಜಕ್ಕೂ ಒಂದು ಮಾಂತ್ರಿಕತೆಯಿದೆ. ಅವನ ಕಾದಂಬರಿ ಓದಿ ಮುಗಿಸುವ ಹೊತ್ತಿಗೆ ಕನ್ನಡದಲ್ಲಿಯೂ ಈ ಧಾಟಿಯ ಕತೆ ಇರಬಾರದಿತ್ತೇ ಎನ್ನುವ ಹಪಾಹಪಿ ನನಗೆ.

ಆ ಆಲೋಚನೆಯ ಹಿಂದೆಯೇ ನಾನೇಕೆ ಹೀಗೊಂದು ಕತೆಯನ್ನು, ನಮ್ಮದೇ ಮಣ್ಣಿನ ಸೊಗಡಿಗೆ ಹೊಂದಿಕೊಳ್ಳುವಂತೆ ಬರೆಯಲು ಪ್ರಯತ್ನಿಸಬಾರದು ಎಂಬ ಮತ್ತೊಂದು ಯೋಚನೆ. ಯೋಚನೆಯನ್ನು ಕಾರ್ಯರೂಪಕ್ಕಿಳಿಸಲು ಸಾಧ್ಯವಾಗಿದ್ದು ಮಾತ್ರ ಹತ್ತು ವರ್ಷಗಳ ನಂತರವೇ.

ಮೊದಲ ಬಾರಿಗೆ ಕತೆಯನ್ನು ಫೇಸ್ಟುಕ್ಕಿನಲ್ಲಿ ಪ್ರಕಟಿಸಿದಾಗ ಇದಕ್ಕೆ ಸಿಕ್ಕ ಪ್ರತಿಕ್ರಿಯೆ ಅಭೂತಪೂರ್ವ. ಮೂರನೇಯ ಕಂತಿನ ಹೊತ್ತಿಗಾಗಲೇ ಓದುಗ ಮಿತ್ರರರಲ್ಲೊಂದು ತೀವ್ರ ಕುತೂಹಲ, ಬೆಳಿಗ್ಗೆ ಮತ್ತು ಸಂಜೆ ಎಂದುಕೊಂಡು ದಿನಕ್ಕೆರಡು ಭಾಗಗಳನ್ನು ಪ್ರಕಟಿಸುತ್ತಿದ್ದೆ. ಕೊಂಚ ತಡವಾದರೂ ಸಾಕು, ಇನ್ಬಾಕ್ಸಿಗೆ ಸಂದೇಶ ಕಳಿಸುವ ಕೆಲವು ಸ್ನೇಹಿತರು, 'ಇನ್ನೂ ಯಾಕೆ ಇಂದಿನ ಕಂತು ಪ್ರಕಟವಾಗಿಲ್ಲ' ಎಂದು ಕೇಳುತ್ತಿದ್ದರು. ಒಂದಿಬ್ಬರಂತೂ 'ಇತ್ತೀಚೆಗೆ ತೀರ ತಡ ಮಾಡ್ತಿದ್ದೀರಿ. ಇಷ್ಟು ಆಲಸ್ಯ ಒಳ್ಳೆಯದಲ್ಲ' ಎಂದು ಪ್ರೀತಿಯಿಂದ ಗದರಿದ್ದೂ ಇದೆ.

View full details