ಪ್ರಾಚೀನ ಕರ್ನಾಟಕದ ಮಹಿಳಾಲೋಕ

ಪ್ರಾಚೀನ ಕರ್ನಾಟಕದ ಮಹಿಳಾಲೋಕ

Rs. 299.00
Skip to product information
ಪ್ರಾಚೀನ ಕರ್ನಾಟಕದ ಮಹಿಳಾಲೋಕ
ಪ್ರಾಚೀನ ಕರ್ನಾಟಕದ ಮಹಿಳಾಲೋಕ
Dr. Sandhya. V.
Publisher - 
Type -
Pages -
- Free Shipping Above ₹400

- Cash on Delivery (COD) Available*
Rs. 299.00
Shipping calculated at checkout.

Pickup available at Harivu Books New Shop

Usually ready in 24 hours

View store information

ಪ್ರಾಚೀನ ಕರ್ನಾಟಕದ ಮಹಿಳಾಲೋಕ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171
ಯಾವುದೇ ಇತಿಹಾಸ ರಚಿಸುವಾಗ ಸಾಮಾನ್ಯವಾಗಿ ಪುರುಷ ಪ್ರಧಾನವಾದ ಇತಿಹಾಸಕ್ಕೇ ಒತ್ತು ನೀಡುತ್ತೇವೆ ರಾಜರು ಹಾಗೂ ಅವರ ಮಾಂಡಕರು ಹಾಕಿಸಿರುವ ಶಾಸನಗಳು, ಬರೆಸಿರುವ ಬರಹಗಳಲ್ಲಿ ಸ್ತ್ರೀ ಆಡಳಿತಗಾರರ ಬಗ್ಗೆ ಮಾಹಿತಿ ದೊರೆಯದಿರುವುದು. ಆಕರಸಾಮಗ್ರಿಯ ಕೊರತೆಯಾಗಿದೆ. ಡಾ. ಸಂಧ್ಯಾ ಅವರು ಅಂತಹ ಕಾಲದ ಸ್ತ್ರೀಯರು ಹೇಗೆ ಬಾಳಿ-ಬದುಕಿದರೆಂಬ ಬಗ್ಗೆ ಪ್ರಾಚೀನ ಕರ್ನಾಟಕದ ಮಹಿಳಾಲೋಕ ಕೃತಿಯಲ್ಲಿ ತೋರಿಸಲು ಶ್ರಮಿಸಿದ್ದಾರೆ. ಇದರಲ್ಲಿಯೂ ಚೆನ್ನಾಗಿ ಆಡಳಿತ ನಡೆಸಿದ, ರಾಜಕೀಯದಲ್ಲಿದ್ದ ಸ್ತ್ರೀಯರ ಉಲ್ಲೇಖವೇ ಹೆಚ್ಚಾಗಿದೆ. ಮಕ್ಕಳಿಲ್ಲದೆ ರಾಜ ಸತ್ತಾಗ ರಾಜ್ಯದ ಜವಾಬ್ದಾರಿ ಹೊತ್ತ ಮಹಿಳೆಯರು ಅಸ್ತಿತ್ವವನ್ನು ಉಳಿಸಲು ಪಟ್ಟ ಕಷ್ಟ-ನಷ್ಟಗಳನ್ನು, ಕರ್ನಾಟಕದಲ್ಲಿ ರಾಣಿಯರ ದತ್ತಕಗಳು ಅಧ್ಯಾಯದಲ್ಲಿ ವಿವರಿಸಿದ್ದಾರೆ. ಹಾಗೆಯೇ ಪೆಣ್ಣುಯ್ಯಲ್, ಸಂಗೀತ-ನೃತ್ಯಕಲೆಗಳಿಗೆ ಪ್ರಾಚೀನ ಅರಸಿಯರ ಕೊಡುಗೆ, ಮಹಿಳೆಯರ ಸಾಹಸ, ಧಾರ್ಮಿಕ ಕಾರ್ಯಗಳಲ್ಲಿ ಮಹಿಳೆಯರ ಪಾತ್ರ ಮೊದಲಾದ ಅಧ್ಯಾಯಗಳಲ್ಲಿ ಮಹಿಳೆಯರು ತಮ್ಮನ್ನು ಹೇಗೆ ತೊಡಗಿಸಿಕೊಂಡಿದ್ದರೆಂಬ ಬಗ್ಗೆ ವಿವರಿಸಿದ್ದಾರೆ. ಹೆಚ್ಚಿಗೆ ಶಾಸನಗಳನ್ನಾಧರಿಸಿ ಬರೆದಿರುವ ಈ ಲೇಖನಗಳ ಗುಚ್ಛ ಒಂದು ಅಧಿಕೃತ ಕೃತಿಯಾಗಿದೆ. ಇಲ್ಲಿ ಊಹಾ ಪೋಹಗಳಾಗಲೀ, ಕಲ್ಪತ ವಿಷಯಗಳಗಾಗಲೀ ಸ್ಥಳವಿಲ್ಲ. ಹೀಗಾಗಿ ಪ್ರಾಚೀನ ಕರ್ನಾಟಕದ ಮಹಿಳೆಯರ ಬಗ್ಗೆ ತಿಳಿದುಕೊಳ್ಳಲು ಇದೊಂದು ಅಧಿಕೃತ ಮಾಹಿತಿಯುಳ್ಳ ಗ್ರಂಥ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇಂತಹ ಅಧಿಕೃತ ಮಾಹಿತಿಯುಳ್ಳ ಗ್ರಂಥ ರಚಿಸಿದ ಶ್ರೀಮತಿ ಡಾ. ಸಂಧ್ಯಾ ಅವರು ಅಭಿನಂದನಾರ್ಹರು.

-ದೇವರಕೊಂಡಾರೆಡ್ಡಿ

You may also like

Subscribe to our emails

Be the first to know about new collections and special offers.