Skip to product information
1 of 2

B. G. Ramanath

ಪೂರ್ವಾಶ್ರಮ

ಪೂರ್ವಾಶ್ರಮ

Publisher - ಸಾಹಿತ್ಯ ಲೋಕ ಪ್ರಕಾಶನ

Regular price Rs. 495.00
Regular price Rs. 495.00 Sale price Rs. 495.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 416

Type - Paperback

ಇದು ಈ ಲೇಖಕರ ಪ್ರಥಮ ಕೃತಿಯೆಂದು ನನಗೆ ಯಾವ ಆಯಾಮದಲ್ಲಿಯೂ ಗೋಚರಿಸುತ್ತಿಲ್ಲ. ಕಥಾವಸ್ತು ಅಷ್ಟು ಆಳವಾಗಿದೆ, ಅಪರೂಪದ್ದಾಗಿದೆ. ನಿರೂಪಣೆಯಂತೂ ತನ್ನ ನೈಜತೆಯಿಂದ, ಪ್ರೌಢ ವರ್ಣನೆಯಿಂದ ಓದುಗರ ಜ್ಞಾನಶಕ್ತಿಯನ್ನು ಇನ್ನಷ್ಟು ವಿಸ್ತರಿಸುವುದಲ್ಲದೇ, ಒಂದರ್ಥದ ತಾದಾತ್ಮ್ಯತೆಯನ್ನೂ ತಂದುಕೊಡುತ್ತದೆ. ಓದಿ ಮುಗಿಸಿದ ನಂತರ ನೆನಪು, ಪುನರ್ನೆನಪುಗಳ ಮೂಲಕ ಒಂದಷ್ಟು ಕಾಲ ಮನಸ್ಸನ್ನು ಕಾಡುವಂತೆ ನೋಡಿಕೊಂಡಿರುವುದರಲ್ಲಿ ಕೃತಿಕಾರರ ಸಾಮರ್ಥ್ಯ ಅಡಗಿದೆ. ಅವರು ಬಳಸಿರುವ ಅಂತಹದೊಂದು ಶೃಂಗಾರ ವರ್ಣನೆಯನ್ನು ಈಗ ಸಾಕ್ಷೀರೂಪದಲ್ಲಿ ನಿಮ್ಮ ಮುಂದೆ ಯಥಾವತ್ ಮಂಡಿಸುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ. ಅದು ಇಂತಿದೆ:

ಮಾಣಿಕ್ಯ - ಗೋಮೇಧಿಕ - ನೀಲ - ಪುಷ್ಪರಾಗ - ಕೌಸ್ತುಭ – ಮುಕ್ತಾಮಣಿ - ವಜ್ರವೈಡೂರ್ಯ ಖಚಿತ ಸುವರ್ಣ ಕಿರೀಟವನ್ನು ಧರಿಸಿರುವ ಶಿರ, ವಿಶಾಲ ಲಲಾಟದ ಮಧ್ಯಭಾಗದಲ್ಲಿ ರೂಪಾಯಿ ನಾಣ್ಯದ ಗಾತ್ರದಲ್ಲಿ ಎದ್ದುಕಾಣುವ ಕುಂಕುಮ, ಕಪೋಲ ಭಾಗಗಳಲ್ಲಿ ಎರಡಂಗುಲ ಗಾತ್ರದಲ್ಲಿ ತೀಡಲ್ಪಟ್ಟ ಹರಿದ್ರಾ, ಕಾಮನ ಬಿಲ್ಲಿನಂತೆ ಬಾಗಿರುವ ಹುಬ್ಬುಗಳ ಕೆಳಗೆ ಕಪ್ಪು ಕಜ್ಜಲಾಲಂಕಾರದೊಂದಿಗೆ ಸಿಂಗಾರಗೊಂಡಿರುವ ನಕ್ಷತ್ರಕಾಂತಿಯ ನೇತ್ರದ್ವಯ. ಚಂಪಕ ಪುಷ್ಪದಂತಿರುವ ನಾಸಿಕದ ಎಡ ಹೊಳ್ಳೆಯ ಮೇಲಿರುವ ಮೂಗುತಿಯಲ್ಲಿ ಅರುಣೋದಯ ಕಾಲದ ಧೃವತಾರೆಯಂತೆ ಫಳಫಳ ಹೊಳೆಯುತ್ತಿರುವ ಕಡಲೆ ಗಾತ್ರದ ಬಿಳಿ ವಜ್ರದ ಹರಳು. ಪದ್ಮ ಕಮಲ ರಚನೆಯಲ್ಲಿರುವ ಕೆಂಪು ಹಸಿರು ಬಿಳಿಯ ವಜ್ರಗಳಿಂದ ನಿರ್ಮಿತವಾಗಿರುವ ಕರ್ಣಾಭರಣ, ಕಸ್ತೂರಿ ಕರ್ಪೂರ - ಮಲಯಜ - ಮೃಗನಾಭಿ - ಕೇಸರಗಳೇ ಮೊದಲಾದ ಸೌಂದರ್ಯವರ್ಧಕ ಗಂಧಗಳಿಂದ ಹದವಾಗಿ ಲೇಪನಗೊಂಡಂತಹ ಕ್ಷೀರವರ್ಣದ ದೇಹವನ್ನು ಮುಚ್ಚಿ ಅಲಂಕರಿಸಿರುವ ಶ್ವೇತವರ್ಣದ ಪಟ್ಟುವಸ್ತ್ರ. ಅದನ್ನು ಕಟಿಭಾಗದಲ್ಲಿ ಬಿಗಿಗೊಳಿಸಿರುವ ಮುತ್ತುಗಳಿಂದ ಹೆಣೆದು ಸಿದ್ಧಪಡಿಸಲ್ಪಟ್ಟ ಮಣಿಮೇಖಲಾ ಡಾಬು. ವಕ್ಷಸ್ಥಳವನ್ನು ಮುಚ್ಚಿರುವ ಹಸಿರು ಬಣ್ಣದ ಪೀತಾಂಬರದ ಕಂಚುಕವನ್ನು ಬಳಸಿ ಬೆನ್ನಿಗಿಳಿದು, ಆ ಪಟ್ಟುವಸ್ತ್ರದ ಮೇಲೆ ಮೇಲು ಹೊದ್ದಿಕೆಯಂತೆ ನಿತಂಬಭಾಗದವರೆಗೂ ಹರಡಿಕೊಂಡಿರುವ ನೀಲಮೇಖಲ ಕೇಶರಾಶಿ. ರಮಣೀಯ ಚತುರ್ಬಾಹುಗಳ ತೋಳಬಂಧಿಯಾಗಿ ವಜ್ರಖಚಿತ ಕಂಕಣವಲಯ, ಕೈಗಳ ಮಣಿಕಂಠ ಭಾಗದಲ್ಲಿ ಬಂಗಾರದ ಹಲವು ಕಡಗ, ಅಷ್ಟ ಬೆರಳುಗಳಿಗೆ ವೈಡೂರ್ಯದ ಉಂಗುರ. ಕೊರಳಿಗೆ ನವರತ್ನ ಖಚಿತ ಕಂಠೀಹಾರ, ಅದರ ಕೆಳಗೊಂದು ವಜ್ರಖಚಿತ ಮುಕ್ತಾಹಾರ, ತದನಂತರ ನೂರೆಂಟು ಕಾಸುಗಳ ಭಾರದಿಂದ ಕೆಳಕ್ಕೆ ಜಗ್ಗುತ್ತಿರುವ ವೈಜಯಂತೀ ಹಾರ, ಕೋಮಲ ಕುಸುಮದಂತಿರುವ ಪಾದದ್ವಯಗಳನ್ನು ಬೆಳಗುತ್ತಿರುವ ರಜತ ನೂಪುರ, ಮಂದಗತಿಯಿಂದ ಸುತ್ತಲೂ ಚಲಿಸುತ್ತಿರುವ ಕೆಂಪು ಕಣ್ಣುಗಳ ಹತ್ತಾರು ಹಾಲು ಹಂಸಗಳ ಮಧ್ಯದಲ್ಲಿ ಅರಳಿರುವ ಬೃಹತ್ ಕಮಲವೊಂದರ ಮೇಲೆ ಕುಳಿತಿರುವ ಉಜ್ವಲ ರೂಪದ, ನಗುಮುಖದ ವೀಣಾಪಾಣಿ ಸರಸ್ವತೀ ದೇವಿ! ಅವಳೀಗ ತನ್ನ ಬಲಗೈಯನ್ನು ಮೇಲೆತ್ತಿ, 'ನನಗೆ ನಿನ್ನ ಸಂಗೀತದ ಸೇವೆಯಾಗಬೇಕು. ಇದು ನಿರೀಕ್ಷೆಯಲ್ಲ; ಆಜ್ಞೆ' ಎಂದು ಆದೇಶಿಸಿ ಮರುಕ್ಷಣವೇ ಮಾಯವಾದಳು.

-ಡಾ. ಎಂ.ಕೆ. ವೆಂಕಟೇಶಮೂರ್ತಿ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)