Subscribe to our emails
Be the first to know about new collections and special offers.
ನಾಲ್ಕು ದಿಕ್ಕುಗಳಲ್ಲಿರುವ ನಾಲ್ಕು ಲಿಂಗ, ಅದರ ಸ್ಥಳವನ್ನು ಪತ್ತೆ ಮಾಡಲು ನಾಲ್ಕು ತುಂಡಾದ ಭೂಪಟ. ಒಂದೊಂದೇ ತುಂಡನ್ನು ಹುಡುಕುತ್ತಾ ಅಪಾಯವನ್ನು ಎದುರಿಸುತ್ತಾ ಸಾಗುವ ಕುತೂಹಲಕಾರಿ ಕಥೆಯು ಇಲ್ಲಿದೆ - ಐದನೇ ಲಿಂಗ ಎಲ್ಲಿದೆ? ಅದೇ ನಿರೀಕ್ಷೆಗೂ ಮೀರಿದ ಕುತೂಹಲ, ಪಂಚಭೂತ ಸಿದ್ಧಾಂತದಡಿ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಲಿಂಗಗಳ ಪ್ರತಿಷ್ಠಾಪನೆ ಮಾಡಿದವರು ಕನಿಷ್ಕ ಮಹರ್ಷಿಗಳು.
"ಅವಳು ನಡೆಯುತ್ತ ನಿಧಾನವಾಗಿ ಸಾಗಿದಳು. ಅವಳ ಕಾಲ ಗೆಜ್ಜೆಗಳ ನಾದಕ್ಕೆ ತಲೆದೂಗುವಂತೆ ಮರಗಳು ಅಲ್ಲಾಡಿದವು. ಮರಗಳಿಂದ ದಾರಿಯುದ್ದಕ್ಕೂ ಹೂಗಳು ಅವಳ ಕೋಮಲ ಪಾದಗಳು ಮಣ್ಣ ಮೇಲೆ ನೋಯದಂತೆ ಆ ಹೂಗಳು ತಮ್ಮನ್ನು ಹರಡಿಕೊಂಡವು. ಅಲ್ಲಿ ಅವಳು ನಡೆದ ದಾರಿಯೆಲ್ಲಾ ಅದ್ಯಾವುದೋ ಸುಗಂಧ, ಅವಳ ಆ ಕೇದಿಗೆಯ ನೋಟ ಅತ್ತಿತ್ತ ಸಾಗದೆ ಮುಂದೆ ಮಾತ್ರ ನೋಡುತ್ತಿತ್ತು".
ಇಂತಹ ಹಲವಾರು ವರ್ಣನೆಗಳು ಅಪರ್ಣ ಅವರ ಬರವಣಿಗೆಯ ಲೀಲಾಜಾಲ ಶೈಲಿಗೆ ಸಾಕ್ಷಿ. ನಿರರ್ಗಳವಾಗಿ ಓದಿಸಿಕೊಂಡು ಹೋಗುವ ಈ ಕಾದಂಬರಿಯನ್ನು ಉತ್ತಮ ನಿರ್ದೇಶಕರು ಯಾರಾದರೂ ನೋಡಿದರೆ ಇದನ್ನು ಒಂದು ಅದ್ದೂರಿ, ರೋಮಾಂಚಕ ಚಲನಚಿತ್ರ ಮಾಡುವ ಆಸೆಪಟ್ಟಾರು. ಚಲನಚಿತ್ರವಾಗಬಹುದಾದ ಎಲ್ಲಾ ಅರ್ಹತೆ ಈ ಕಾದಂಬರಿಗೆ ಇದೆ.
-ವಿ. ಮನೋಹರ್ (ಖ್ಯಾತ ಸಂಗೀತ ನಿರ್ದೇಶಕರು)
(ಮುನ್ನುಡಿಯಿಂದ)
Be the first to know about new collections and special offers.