Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಈ ಪುಸ್ತಕದ ವ್ಯಾಪ್ತಿ ದೊಡ್ಡದು. ನಾನು ಸರಿಸುಮಾರು ಹತ್ತು ವರ್ಷ ಒಬ್ಬ ಪತ್ರಕರ್ತನಾಗಿ ಭೂಗತ ಲೋಕದಲ್ಲಿ ಕಂಡದ್ದನ್ನ, ಕೇಳಿದ್ದನ್ನ ಇಲ್ಲಿ ದಾಖಲಿಸಿದ್ದೇನೆ. ಕೋಳಿ ಫಯಾಜ್‌ನನ್ನು ಶಿವಾಜಿನಗರದ ಕಸಾಯಿ ಅಡ್ಡೆಯಲ್ಲಿ ಮಾತನಾಡಿಸಿದುದರಿಂದ ಆರಂಭವಾಗಿ, ಮುತ್ತಪ್ಪ ರೈಯನ್ನು ದುಬೈನಲ್ಲಿ ಭೇಟಿಯಾಗುವ ತನಕ ಪಾಪಿಗಳ ಲೋಕದ ನನ್ನ ಯಾತ್ರೆ ಸಾಗಿ ಬಂದಿದೆ. ಗ್ಯಾಂಗ್‌ವಾರ್‌ಗಳು, ಒಳಗೊಳಗೇ ನಡೆದ ಮಿತ್ರದ್ರೋಹಗಳು, ಪೊಲೀಸರ ಕಠೋರ ನಿರ್ಧಾರಗಳು, ಬದುಕು ಬದಲಿಸಿಕೊಂಡ ಮುಖವಾಡ ಧರಿಸಿಕೊಂಡೇ ಭೂಗತ ಜೀವನ ಮುಂದುವರೆಸಿದವರ ಕತೆಗಳು, ಅವರ ಭಯಗಳು, ಅವರ ಪುಕ್ಕಲು, ಅವರ ವೀರಾವೇಶ, ಅವರ ದುಃಖ-ಬಿಕ್ಕಳಿಕೆಗಳು, ಅವರ ಹತಾಶೆ-ನಿರಾಶೆಗಳು- ಎಲ್ಲವೂ ಈ ಪುಸ್ತಕದಲ್ಲಿ ದಾಖಲಾಗಿವೆ.
-ರವಿ ಬೆಳಗೆರೆ
Be the first to know about new collections and special offers.