Janakisuta Rangappa
ಆಪರೇಷನ್ ನೇತ್ರಾಣಿ
ಆಪರೇಷನ್ ನೇತ್ರಾಣಿ
Publisher - ಅವ್ವ ಪುಸ್ತಕಾಲಯ
- Free Shipping Above ₹400
- Cash on Delivery (COD) Available*
Pages - 100
Type - Paperback
Couldn't load pickup availability
ಕರ್ನಾಟಕದ ಪಶ್ಚಿಮ ಕರಾವಳಿಯ ನೇತ್ರಾಣಿ ದ್ವೀಪದ 'ಭೀಮನ ಕಿಂಡಿ' ಗುಹೆಯೊಳಗೆ ಶತಮಾನಗಳಿಂದ ಮೌನವಾಗಿ ಬೆಳೆದ ರಹಸ್ಯವೊಂದು ಇಂದು ಜಾಗತಿಕ ಸ್ಮಗ್ಲಿಂಗ್ ಜಾಲದ ಕಣ್ಣಿಗೆ ಬಿದ್ದಿದೆ! ಬಂಗಾರಕ್ಕಿಂತ ದುಬಾರಿಯಾದ ಅಪರೂಪದ 'ಸ್ಫಿಂಕ್ಸ್ ಲೈಟ್' ಪಕ್ಷಿಜಾತಿಯ ಭವಿಷ್ಯವನ್ನೇ ಲೂಟಿ ಮಾಡುತ್ತಿರುವ ಶಕ್ತಿಗಳ ವಿರುದ್ಧ ಸಾರಿದ ರಣಕಾಹಳೆಯೇ ಈ ಕಾದಂಬರಿ.
ನಿಗೂಢವಾಗಿ ಕಣ್ಮರೆಯಾದ ಪರಿಸರ ವಿಜ್ಞಾನಿ ತಂದೆಯ ಸಾವು-ಬದುಕಿನ ಸತ್ಯ ಹುಡುಕಲು ಹೊರಟ ಮಗಳು ಡಾ. ಅನಿತಾ; ಪ್ರಾಣದ ಹಂಗು ತೊರೆದು ಲೂಟಿಕೋರರ ಬೆನ್ನಟ್ಟಿದ ಧೈರ್ಯಶಾಲಿ ಪತ್ರಕರ್ತ ಅರವಿಂದ ನಾಯಕ್—ಇವರಿಬ್ಬರ ಸಾಹಸ, ಉಸಿರು ಗಟ್ಟಿಸುವ ತಿರುವುಗಳು ಮತ್ತು ಕಡಲ ಗರ್ಭದ ರೋಚಕ ಕಥೆಯೇ 'ಆಪರೇಷನ್ ನೇತ್ರಾಣಿ'.
ನೈಜತೆ ಮತ್ತು ಅದ್ಭುತ ಕಲ್ಪನಾ ಶಕ್ತಿಯ ಸಮ್ಮಿಲನದಲ್ಲಿ ಮೂಡಿಬಂದಿರುವ, ಜಾನಕಿಸುತ ರಂಗಪ್ಪನವರ ಲೇಖನಿಯಿಂದ ಮೂಡಿಬಂದ ಈ ಥ್ರಿಲ್ಲರ್ ಕೃತಿಯು ಕೊನೆಯ ಪುಟದವರೆಗೂ ಓದುಗರನ್ನು ಹಿಡಿದಿಟ್ಟುಕೊಳ್ಳುವ ಅಪರೂಪದ ಕಾದಂಬರಿಯಾಗಿದೆ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.