ಅಂದಹಾಗೆ ಇದು ಪಾಕಶಾಸ್ತ್ರ ರೆಸಿಪಿ ಪುಸ್ತಕವಲ್ಲ. ಕೃಷಿ ಪುಸ್ತಕವೂ ಅಲ್ಲ. ಪ್ರಾತಿನಿಧಿಕ ಆಹಾರ ಸಂಪತ್ತುಗಳ ಮೂಲಕ ಅನ್ನಲೋಕದ ಪ್ರವೇಶ ಅಷ್ಟೇ. ಅವುಗಳ ಚಾರಿತ್ರಿಕತೆ, ಉತ್ಪನ್ನ, ರಸಪೂರಿತಗಳ ಕಿರುಪರಿಚಯ. 'ಹೊಟ್ಟೆ' ಎನ್ನುವ ವಿಶ್ವಕ್ಕೆ, ಪ್ರಕೃತಿ ಎನ್ನುವ ಬ್ರಹ್ಮಲೋಕ ನೀಡಿದ ಕೆಲವು ರೋಡುಗಳ ಕತೆ ನಮ್ಮ ಊಟಗಳ, ಕೆಲವು ಮೂಲದ್ರವ್ಯಗಳ ಕತೆ.