Gayathri Raj
ಒಲವೇ ವಿಸ್ಮಯ
ಒಲವೇ ವಿಸ್ಮಯ
Publisher - ಸಾಹಿತ್ಯ ಲೋಕ ಪ್ರಕಾಶನ
- Free Shipping Above ₹300
- Cash on Delivery (COD) Available
Pages - 152
Type - Paperback
Couldn't load pickup availability
ಜೀವ ಭಾವಗಳ ಅನುಸಂಧಾನ...!
ಅವಳೊಂದು ಭಾವವಾ, ಒಲವಾ..? ಎನ್ನಿಸಿಬಿಡುವಂತೆ ಪ್ರೀತಿಯ ಹರಿವನ್ನು ಸರಾಗವಾಗಿ ಲಹರಿಯಾಗಿಸಿರುವ ಗಾಯತ್ರಿ ರಾಜ್, ಇದನ್ನು ಬರೆದಿಲ್ಲ ಅನುಭವಿಸಿದ್ದಾರೆ.
ಅನುಭೂತಿ ಮತ್ತು ಸಾಹಿತ್ಯಗಳನ್ನು ಸಂಕರಗೊಳಿಸಬಹುದಾದ ಸಾಧ್ಯತೆಯನ್ನೇ ಲಹ- ರಿಯಾಗಿಸುವ ಮೂಲಕ ಭಾವಾನುಸಂಧಾನಗೊಳಿಸುವ ಲೇಖಕಿ, ಇವೆಲ್ಲ ಓದುಗ ತನ್ನದೇ ಬದುಕಿನ ಅನುಭವ ಎನ್ನಿಸುವಂತೆ ಚಿತ್ರಿಸಿದ್ದಾರೆ. ಅಷ್ಟೇ ವಾಸ್ತವ ಈ ಲಹರಿಗಳು. ಸಂಕೀರ್ಣ ಸಮಯಗಳ ಅನುಭವಕ್ಕೆ ಹೋಲಿಕೆಗೊಳಪಡಿಸುವಂತೆ ಪ್ರಸ್ತುತಪಡಿಸುವುದು ಮತ್ತು ಹಾಗೆ ನಂಬಿಸುವಂತೆ ಬರೆಯುವುದು ಗಾಯತ್ರಿಯ ವಿಶೇಷತೆ ಪೂರ್ವಾಪರ ಇಲ್ಲದ, ಉತ್ತರೋತ್ತರ ಚಿಂತನೆಗೆ ಎಳೆಸದ, ಆದರೆ ವಾಸ್ತವದಲ್ಲಿ ಇದೆಲ್ಲ ನನ್ನದಾಗಬಾರದಿತ್ತಾ ಎನ್ನಿಸುವಂತಹ ಪ್ರೇಮ ಕತೆಗಳು ಇಲ್ಲಿವೆ. ಬಗೆದಷ್ಟೂ ಹೊಸ ಹೊಸ ಆಯಾಮಗಳ ಮೂರ್ತರೂಪ ಕಟ್ಟಿಕೊಡುವಲ್ಲಿ ಶ್ರಮಿಸಿರುವ ಲೇಖಕಿ, ಅಲ್ಲಲ್ಲಿ ನಿರೂಪಣೆ ಬದಲಾಗಿ ಸ್ವತಃ ರಂಗಕ್ಕಿಳಿದಂತೆ ಅಕ್ಷರ ಕೆತ್ತಿದ್ದು ವಿಶೇಷತೆ.
ಲಹರಿಯ ರೂಪದಲ್ಲಿ ಸಾಹಿತ್ಯ ಪ್ರಸ್ತುತಿ ಹೊಸದಲ್ಲವಾದರೂ. ಅದನ್ನೇ ಮೂಲವಾಗಿರಿಸಿ ಕೊಂಡು, ಸಾಲುಸಾಲು ಕತೆಗಳನ್ನು ಕೊಟ್ಟು ಕಲರವ ಎಬ್ಬಿಸಿರುವ ಈ ಪುಸ್ತಕ ಒಲವು ಮಾತ್ರವಲ್ಲ, ಅನುಭವಕ್ಕೆ ದಕ್ಕಿದರೆ ಪ್ರತಿಯೊಬ್ಬರ ಬದುಕಿನ ಒಲವು, ಪ್ರೇಮ, ಕಾಮ, ವಾಂಛೆ, ಮುಗಿಯದ ಅಪಾರ ಆಸ್ಥೆಗಳ ಕವಕವ ಪ್ರೀತಿ ಪ್ರತಿಬಾರಿ ವಿಸ್ಮಯವೇ ಎನ್ನುವಂತೆ ಚಿತ್ರಿಸಿದ್ದಾರೆ. ವಿಭಿನ್ನ ವಸ್ತುಗಳ ಸಾಹಿತ್ಯ ಓದುಗರಿಗೆ ಅವರಿಂದ ಲಭ್ಯವಾಗುತ್ತಿರಲಿ ಎಂದು ಹಾರೈಸುತ್ತಾ.
-ಸಂತೋಷಕುಮಾರ ಮೆಹೆಂದಳೆ (ಕಾದಂಬರಿಕಾರ ಮತ್ತು ಅಂಕಣಗಾರ)
Share


Subscribe to our emails
Subscribe to our mailing list for insider news, product launches, and more.