B. J. Parvati V. Sonare
ಓಡಿ ಹೋದಾಕಿ
ಓಡಿ ಹೋದಾಕಿ
Publisher - ವೀರಲೋಕ ಬುಕ್ಸ್
- Free Shipping Above ₹400
- Cash on Delivery (COD) Available*
Pages - 177
Type - Paperback
Couldn't load pickup availability
ಊರಗೌಡನ ಮಗಳನ್ನೇ ಪ್ರೀತಿಸಿರುತ್ತಾನೆ. ಅವಳೂ ಇವನನ್ನು ಪ್ರೀತಿಸುತ್ತಿರುತ್ತಾಳೆ. ಆದರೆ ಹಳ್ಳಿಗಾಡಿನಲ್ಲಿ ಸಾಮಾಜಿಕತೆಯ ಹೆಸರಲ್ಲಿ ಮೇಲುಕೀಳು ಎನ್ನುವ ನೈತಿಕ ಚೌಕಟ್ಟು ಅದೆಷ್ಟು ಗಟ್ಟಿಯಾಗಿದೆ ಎಂದರೆ ಅವರ
ಮದುವೆ ಯಾಗುವದೇ ಇಲ್ಲ. ಪ್ರೇಮಿಗಳು ಅಗಲುತ್ತಾರೆ. ಇದು ವಾಸ್ತವ. ಇಂತಹ ಅನೇಕ ವಾಸ್ತವಗಳ ಅನಾವರಣ ಈ ಕಾದಂಬರಿಯಲ್ಲಿ ಘಟಿಸುತ್ತವೆ. ನರಸವ್ವ ಯಾರನ್ನು ಮೆಚ್ಚಿ (ಜಿಗಜಿಣಗಿ ಗೌಡ) ಓಡಿ ಹೋಗಿರುತ್ತಾಳೊ ಆತ ಅವಳನ್ನು ತನ್ನ ತೋಟದ ಮನೆಯಲ್ಲಿ ಆಳಿನ ಹಾಗೆ ದುಡಿಸಿಕೊಳ್ಳುತ್ತ ಅವಳೊಂದಿಗೆ ಬಂದಿದ್ದ ಮಕ್ಕಳನ್ನು ಹೊರಹಾಕಿ ಕ್ರೌರ್ಯ ಮೆರೆಯುತ್ತಾನೆ. ಅಸಹಾಯಕತೆಯಿಂದ ನರಳುತ್ತಿದ್ದ ನರಸವ್ವಳಿಗೆ ತನ್ನ ಮಗನೇ ಮುಕ್ತಿ ಕೊಡುತ್ತಾನೆ.
ಕಾದಂಬರಿಯ ಹೆಸರು ಓಡಿ ಹೋದಾಕಿ ಎಂದಿದೆ ಆದರೆ ನನಗೆ ಇದು ಭವದ ಬವಣೆ ಎಂದಿರ ಬೇಕಿತ್ತು ಎನ್ನಿಸುತ್ತದೆ. ಅದಿರಲಿ ಕಾದಂಬರಿಯಲ್ಲಿ ಗ್ರಾಮೀಣರ ನುಡಿ ಬೆಡಗುಗಳು, ಗಾದೆ ಮಾತುಗಳು, ಸತ್ತಾಗ ಹೆಂಗಸರು ಅಳುವ ವೈಖರಿಗಳು, ಸಾಗುವ ಬದುಕಿಗೆ ರೂಪಕವಾಗಿ ಹರಿವ ಹಳ್ಳದ ವರ್ಣನೆ ಇವೆಲ್ಲ ಸಶಕ್ತವಾಗಿ ಬಂದಿವೆ. ಸಹೋದರಿ ಪಾರ್ವತಿ ಸೋನಾರೆ ಈ ಕಾದಂಬರಿ ಮೂಲಕ ತಾವೊಬ್ಬ ಸಶಕ್ತ ಲೇಖಕಿ ಎನ್ನುವದನ್ನು ತೋರಿಸಿಕೊಟ್ಟಿದ್ದಾರೆ.
-ಡಾ. ಬಾಳಾಸಾಹೇಬ ಲೋಕಾಪುರ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.