ನಿಷ್ಕಾಮ

ನಿಷ್ಕಾಮ

ಮಾರಾಟಗಾರ
ಸೂರಾಲು ತಂತ್ರಿ
ಬೆಲೆ
Rs. 150.00
ಕೊಡುಗೆಯ ಬೆಲೆ
Rs. 150.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಯಜ್ಞವೃತ್ತಿಯಿಂದ ಸುರರ ಆಳಾಗಿರುವ ಈ ದೇವ ಬರಹಗಾರ ತನ್ನ ಈ ಸರ್ವಸುಂದರ ಬರಹದ ಪ್ರವೃತ್ತಿಯಿಂದ ಸುರರನ್ನೆ ಆಳಿರುವುದು, ಓದಿ ಅನುಭವಿಸಿದ ಈ ಅಹೋರಾತ್ರನಿಗೆ 'ಸೂರಾಲು ತಂತ್ರಿ ಎನ್ನುವ ಹೆಸರು ಸಾರ್ಥಕನಾಮವಾಗಿ ಕಂಡಿತು. ಓದುತ್ತಾ ಹೋದಂತೆಲ್ಲಾ ಈ ಮಹಾನುಭಾವ ಸಾಮಾನ್ಯ ಮಾನವನಲ್ಲ ಇದೊಂದು ಮಹಾ ಕಾರಣ ಜನ್ಮ ಎಂಬುದು ಅರಿವಾಗುತ್ತಾ ಹೋಯಿತು. ಈ ಬರಹ ಕೂಡಾ ಈ ಗಂಧರ್ವನ ಉಕ್ಕಿ ಹರಿದ ಜ್ಞಾನ ಪ್ರವಾಹದ ಉಕ್ಕಿದ ಭಾಗ ಮಾತ್ರ ಕಣಿ, ವೃತ್ತಿಯಿಂದ ಜನರ ಮನಸ್ಸು ಮತ್ತು ಶರೀರಗಳ, ಪಿತೃಲೋಕದಿಂದ, ಜನ್ಮಾಂತರದಿಂದ ಪೂರ್ವಪುಣ್ಯ, ಪ್ರಾರಬ್ದಾದಿ ಅನೇಕ ಕರ್ಮಗಳನ್ನು ಅಭ್ಯಾಸಮಾಡಿ ಅಷ್ಟಮಂಗಳ, ಆಗಮಗಳೇ ಮುಂತಾದ ಮೊದಲಾದ ಜ್ಯೋತಿರ್ವಿದ್ಯೆಗಳ ಸತತ ಅಧ್ಯಯನ ಪ್ರಯೋಗಗಳಿಂದ ಇವರ ವಿಜ್ಞಾನಮಯಕೋಶವು ಜಾಗೃತವಾಗಿರುವುದು ಈ ಬರಹರತ್ನತ್ರಯಗಳನ್ನು ಪರೀಕ್ಷಿಸಿದಾಗ ದಿಟವೆಂದರಿವಾಯಿತು.

ವಿಜ್ಞಾನಮಯಕೋಶದಲ್ಲಿರುವುದೇ ಜನ್ಮಾಂತರ ನೆನಪುಗಳು, ವ್ಯಾಸರ ಶ್ರೀಮದ್ಭಾಗವತವನ್ನು ಓದಿ ಕೇಳಿದ ಮಾತ್ರಕ್ಕೆ ಬರೆದ ಬರಹವಲ್ಲ ಮತ್ತು ಹಾಗೆ ಬರೆಯಲು ಸಾಧ್ಯವೂ ಇಲ್ಲ. ಅಂದಿನ ದಿನಗಳಲ್ಲಿ ಇದ್ದು ಸಾಕ್ಷಿಭಾವದಿ ವೀಕ್ಷಿಸಿದ ದಕ್ಷತನದ ಬರಹವಿದು. ಓದುವವರ ಎಲ್ಲ ಸಂದೇಹಗಳನ್ನು ನಿವಾರಿಸಿ ನಖಶಿಖಾಂತ ರೋಮಾಂಚನಗೊಳಿಸಿ ಸಂಮ್ಮೋಹನಕ್ಕೆ ಹೊತ್ತೊಯ್ಯುವ ಬರಹವೇ ಈ ಹೊತ್ತಗೆ.

ಅಹೋರಾತ್ರ

Customer Reviews

No reviews yet
0%
(0)
0%
(0)
0%
(0)
0%
(0)
0%
(0)