Skip to product information
1 of 2

timmanna bhat

ನಗುವಿನ ನರಸಿಂಹ

ನಗುವಿನ ನರಸಿಂಹ

Publisher - ಸಾಹಿತ್ಯ ಲೋಕ ಪ್ರಕಾಶನ

Regular price Rs. 135.00
Regular price Rs. 135.00 Sale price Rs. 135.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 96

Type - Paperback

ಎಂ.ಎಸ್.ಎನ್ ಎಂದೇ ಕನ್ನಡದ ಓದುಗರ ನಡುವೆ ಚಿರಪರಿಚಿತರಾಗಿರುವ ಎಂ.ಎಸ್. ನರಸಿಂಹಮೂರ್ತಿಯವರ ಗುಣವಿಶೇಷಗಳ ಪುಟ್ಟಪುಟ್ಟ ಕಥನಗಳ ಗೊಂಚಲೇ 'ನಗುವಿನ ನರಸಿಂಹ'. ತಮ್ಮ ಹಾಸ್ಯಲೇಖನಗಳು, ಸ್ವತಂತ್ರ ಕೃತಿಗಳು, ಟಿವಿ ಧಾರಾವಾಹಿಗಳಿಂದ ಮನೆಮಾತಾಗಿರುವ ಮೂರ್ತಿಯವರು ತಮ್ಮ ಸರಳ-ಸಜ್ಜನಿಕೆಗೂ ಪ್ರಸಿದ್ಧರು. ಅವರ ಹಾಸ್ಯಪ್ರಜ್ಞೆ, ಕನ್ನಡಪ್ರೀತಿ, ಸರಳ ನಡೆನುಡಿ, ನಿರ್ಮಾತ್ಸರ್ಯ, ಸ್ನೇಹಶೀಲತೆ, ಸಮಯಪ್ರಜ್ಞೆ, ಅನುಕಂಪ, ಸಹಾನುಭೂತಿ, ಪರೋಪಕಾರ ಪ್ರವೃತ್ತಿ, ಮಾನವೀಯತೆ, ಕಿರಿಯರನ್ನು ಪ್ರೋತ್ಸಾಹಿಸಿ ಮುನ್ನಡೆಸುವ ಗುಣ... ಹೀಗೆ ಅವರ ಹತ್ತುಹಲವು ವೈಶಿಷ್ಟ್ಯಗಳನ್ನು ಸ್ವಾರಸ್ಯಪೂರ್ಣ ಬರಹಗಳ ಮೂಲಕ ಸೊಗಸಾಗಿ ನಿರೂಪಿಸಿದ್ದಾರೆ ತಿಮ್ಮಣ್ಣ ಭಟ್ಟರು. ಈ ಲೇಖನಗಳು ಸರಳವಾಗಿಯೂ ಸಂಕ್ಷಿಪ್ತವಾಗಿಯೂ ಇರುವುದರಿಂದ ಒಂದೆರಡು ನಿಮಿಷಗಳಲ್ಲೇ ಒಂದೊಂದು ಲೇಖನವನ್ನು ಓದಿ ಮುಗಿಸಬಹುದು. ಈ ಕೃತಿ ಎಂ.ಎಸ್.ಎನ್ ಅವರ ಜೀವನಚರಿತ್ರೆಯ ಸಣ್ಣ ಇಣುಕುನೋಟದಂತೆಯೂ ಕಂಡರೆ ಅಚ್ಚರಿಯೇನಿಲ್ಲ. ಎಲ್ಲ ವಯೋಮಾನದವರಿಗೂ ಇಷ್ಟವಾಗಬಲ್ಲ ಈ ಕೃತಿಯನ್ನು ಕನ್ನಡದ ಓದುಗರು ಪ್ರೀತಿಯಿಂದ ಎತ್ತಿಕೊಳ್ಳಬಹುದು. ತಿಮ್ಮಣ್ಣ ಭಟ್ಟರಿಂದ ಇನ್ನಷ್ಟು ಕೃತಿಗಳು ಸಾಹಿತ್ಯಲೋಕಕ್ಕೆ ದೊರೆಯಲಿ. ಎಂ.ಎಸ್.ಎನ್ ರಂತಹ ವ್ಯಕ್ತಿತ್ವಗಳು ಇಂದಿನ ಯುವ ತಲೆಮಾರಿಗೆ ಆದರ್ಶವಾಗಲಿ.

-ಡಾ. ಸಿಬಂತಿ ಪದ್ಮನಾಭ (ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ತುಮಕೂರು ವಿಶ್ವವಿದ್ಯಾಲ)

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)