Skip to product information
1 of 2

Vishnu Sharma

ನಾಗಾಪಂಚಮಿ ವ್ರತ ಕಥೆ

ನಾಗಾಪಂಚಮಿ ವ್ರತ ಕಥೆ

Publisher - ಶ್ರೀನಿಧಿ ಪ್ರಕಾಶನ

Regular price Rs. 20.00
Regular price Rs. 20.00 Sale price Rs. 20.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 32

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ನಾಗಾಪಂಚಮಿ ವ್ರತ ಕಥೆ
ಹಿಂದೂ ಪುರಾಣಗಳ ರೀತ್ಯ ಬ್ರಹ್ಮಪುತ್ರನಾದ ಕಶ್ಯಪ ಮಹರ್ಷಿಯು ೪ ಪತ್ನಿಯಯರನ್ನು ಹೊಂದಿದ್ದು, ಮೊದಲನೆಯವಳು ದೇವತೆಗಳಿಗೆ ಜನ್ಮವಿತ್ತರೆ, ಎರಡನೆಯ ಪತ್ನಿಯು ಗರುಡದೇವನಿಗೂ, ಪಿತೃಲೋಕದ ನಾಗಜಾತಿಗೆ ಸೇರಿದ ಮೂರನೆಯವಳು ನಾಗರಿಗೂ ಮತ್ತು ನಾಲ್ಕನೆಯವಳು ರಾಕ್ಷರಿಗೂ ಜನ್ಮ ನೀಡುತ್ತಾಳೆ.

ಶ್ರೀ ಲಕ್ಷ್ಮೀನಾರಾಯಣರ ವಾಹನವಾದ ಶ್ರೀ ಗರುಡದೇವನು ಜನಿಸಿದ್ದು ಶ್ರಾವಣ ಶುದ್ಧ ಪಂಚಮಿಯಾದ್ದರಿಂದ ಈ ದಿನವನ್ನು ಗರುಡಪಂಚಮಿ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ.

ಮತ್ತೊಂದು ಕಥೆಯ ಪ್ರಕಾರ ಸರ್ಪದ ಕಡಿತದಿಂದ ಪರೀಕ್ಷಿತನು ಮರಣ ಹೊಂದಲು ಆತನ ಮಗನಾದ ಜನಮೇಜಯನು ದ್ವೇಷದಿಂದ ಸರ್ಪಗಳ ಜಾತಿಯನ್ನೇ ನಾಶಮಾಡಲು ಮಾಡುತ್ತಿದ್ದ ಯಜ್ಞವು ಅಸ್ತಿಕನೆಂಬ ದೇವತೆಯಿಂದ ನಿಲ್ಲಿಸಲ್ಪಟ್ಟಿದ್ದು ಶ್ರಾವಣ ಶುದ್ಧ ಪಂಚಮಿಯಾದ್ದರಿಂದ ಆ ದಿನವನ್ನು ನಾಗಪಂಚಮಿ ಎಂಬ ಹೆಸರಿನಿಂದಲೂ ಆಚರಿಸಲಾಗುತ್ತದೆ. ಇದನ್ನು ಫಣಿಗೌರಿ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ.

ವಿಶೇಷವಾಗಿ ಈ ದಿನ ವ್ರತವನ್ನು ಸ್ತ್ರೀಯರು ಆಚರಿಸಿ, ಸಹೋದರರನ್ನು ಆಹ್ವಾನಿಸಿ ಅವರಿಗೆ ಶುಭಕೋರುವ ಸಂಪ್ರದಾಯ ಆಚರಣೆಯಲ್ಲಿರುತ್ತದೆ

View full details