Chethan Gavi Gowda
ನಡುವೆ ಅಂತರವಿರಲಿ
ನಡುವೆ ಅಂತರವಿರಲಿ
Publisher - ಅವ್ವ ಪುಸ್ತಕಾಲಯ
- Free Shipping Above ₹400
- Cash on Delivery (COD) Available*
Pages - 112
Type - Paperback
Couldn't load pickup availability
ಭಾವಗಳನ್ನು ಒತ್ತೊತ್ತಾಗಿ ಸೆರೆಹಿಡಿದಿಟ್ಟಿರುವ ಸಂಕಲನ; 'ನಡುವೆ ಅಂತರವಿರಲಿ'.
ಇಲ್ಲಿನ ಕವಿತೆಗಳಲ್ಲಿ ಸಮಾಜಮುಖಿ ಚಿ೦ತನೆ ಮತ್ತು ವೈಯಕ್ತಿಕ ಭಾವನೆಗಳ ಸು೦ದರ ಸಮನ್ವಯವಿದೆ. 'ಸಂತೆ ಬೀದಿ' ಮತ್ತು 'ನಗರದ ಹೊಸ ಹಾದಿ' ಕವಿತೆಗಳು ಜನಸಾಮಾನ್ಯರ ಬದುಕಿನ ಜಂಜಾಟಗಳನ್ನು ಕಟ್ಟಿಕೊಟ್ಟರೆ, ಹೆಣ್ಣಿನ ಅಂತರಾಳದ ನೋವಿನ ಸಂಗತಿಯನ್ನು 'ಮೊಗ್ಗು' ಕವಿತೆಯ ಮೂಲಕ ಅತ್ಯಂತ ಮೃದುವಾಗಿ, ಸಾಂಕೇತಿಕವಾಗಿ ಚಿತ್ರಿಸಿದ್ದಾರೆ.
ಇಲ್ಲಿ ಬಳಸಿರುವ ರೂಪಕಗಳು ಗಮನಾರ್ಹ. ಕ್ಯಾಬ್ ಚಾಲಕನ ಬದುಕನ್ನು 'ಸಂಚಾರಿ ರಂಗಮಂದಿರ'ಕ್ಕೆ ಹೋಲಿಸಿರುವುದು ನಗರ ಜೀವನದ ಯಾಂತ್ರಿಕತೆಯನ್ನು ಪ್ರತಿಬಿಂಬಿಸುತ್ತದೆ. 'ಜಾತಿಗೋಡೆ' ಮತ್ತು 'ಹೊಲವನ್ನೇ ಮೇಯ್ದ ಬೇಲಿ' ಕವಿತೆಗಳು ಸಮಾಜದ ಕ್ರೂರ ವಾಸ್ತವ ಮತ್ತು ಶೋಷಣೆಯ ವಿರುದ್ಧ ಧ್ವನಿ ಎತ್ತುತ್ತವೆ. ಚಪ್ಪಲಿಗಳ ಅನಾಥ ಪ್ರಜ್ಞೆ ಅಥವಾ ವೇಶೈಯ ಅಸಹಾಯಕತೆಯನ್ನು ಚಿತ್ರಿಸುವಲ್ಲಿ ಕವಿಯ ಸಂವೇದನಾಶೀಲತೆ ಎದ್ದು ಕಾಣುತ್ತದೆ.
ಪ್ರೇಮ ಕವಿತೆಗಳಲ್ಲಿ ಲವಲವಿಕೆಯ ಜೊತೆಗೆ ವಿರಹದ ತೀವ್ರತೆಯೂ ಇದೆ. ಭಾಷೆ ಸರಳವಾಗಿದ್ದರೂ, ಅದು ತಲುಪಿಸುವ ಸ೦ದೇಶ ಆಳವಾಗಿದೆ. ಡಿಜಿಟಲ್ ಯುಗದ ಅವಿಷ್ಕಾರಗಳ ನಡುವೆ ಕಳೆದುಹೋಗುತ್ತಿರುವ ಮಾನವೀಯ ಸ್ಪರ್ಶ ಮತ್ತು ಅಂಚೆ ಡಬ್ಬಿಯಂತಹ ಹಳೆಯ ನೆನಪುಗಳ ಬಗೆಗಿನ ಹಂಬಲ ಈ ಸಂಕಲನದ ಮೌಲ್ಯವನ್ನು ಹೆಚ್ಚಿಸಿವೆ. ಒಟ್ಟಾರೆಯಾಗಿ, 'ನಡುವೆ ಅಂತರವಿರಲಿ' ಕೇವಲ ಶೀರ್ಷಿಕೆಯಲ್ಲ, ಅದು ಬದುಕಿನ ಏರಿಳಿತಗಳ ನಡುವೆ ಮನುಷ್ಯ ಕಾಪಾಡಿಕೊಳ್ಳಬೇಕಾದ ವಿವೇಚನೆಯ ಸಂಕೇತವಾಗಿದೆ.
ಈ ಕವಿತೆಗಳ ಮೂಲಕ ಚೇತನ್ ಗೆದ್ದೇ ಗೆಲ್ಲುತ್ತಾನೆ ಎನ್ನುವ ಭರವಸೆ ನನಗಿದೆ.
ಆತನಿಗೆ ಶುಭವಾಗಲಿ.. - ಅನಂತ ಕುಣಿಗಲ್
Share

Subscribe to our emails
Subscribe to our mailing list for insider news, product launches, and more.