Skip to product information
1 of 1

Translated : Dr. H. S. Anupama

ಮೋಟಾರ್ ಸೈಕಲ್ ಡೈರೀಸ್

ಮೋಟಾರ್ ಸೈಕಲ್ ಡೈರೀಸ್

Publisher - ನವಕರ್ನಾಟಕ ಪ್ರಕಾಶನ

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 108

Type - Paperback

ನಾನು ಈ ಟಿಪ್ಪಣಿಗಳನ್ನು ಮೊದಲ ಬಾರಿ ಅವು ಪುಸ್ತಕ ರೂಪ ತಳೆವ ಮೊದಲೇ ಓದತೊಡಗಿದಾಗ ಅವು ಯಾರದೆಂದು ತಿಳಿದಿರಲಿಲ್ಲ. ಆದರೆ ತನ್ನ ಸಾಹಸಗಳನ್ನು ಮನಮುಟ್ಟುವಂತೆ ವರ್ಣಿಸಿದ್ದ ಬರೆದವನೊಡನೆ ಏನೋ ಸಂಬಂಧ ಉಂಟಾಗಿತ್ತು. ಓದುತ್ತ ಹೋದಂತೆ ಅದನ್ನು ಬರೆದವನ ಗುರುತು ಹತ್ತಿ ನಾನು ಅವನ ಮಗಳು ಎಂದು ತಿಳಿದಾಗ ತುಂಬ ಹೆಮ್ಮೆಯೆನಿಸಿತು.

ಮೋಟಾರ್ ಬೈಕಿನಲ್ಲಿ ನಾನು ಗ್ರೆನಾಡೋನ ಜಾಗದಲ್ಲಿ ಕುಳಿತು ಅಪ್ಪನ ಭುಜ ಹಿಡಿದು ಪರ್ವತಗಳನ್ನು, ಸರೋವರಗಳನ್ನು ಸುತ್ತಿದಂತೆ ಕಲ್ಪಿಸಿಕೊಂಡ ಕ್ಷಣಗಳಿದ್ದವು. ನಿಜ ಹೇಳಬೇಕೆಂದರೆ ಮತ್ತೆಮತ್ತೆ ಓದುತ್ತ ಹೋದಂತೆ ನನ್ನಪ್ಪ ಎಂಥ ಹುಡುಗನಾಗಿದ್ದನೋ ಅವನೊಂದಿಗೆ ಪ್ರೇಮಕ್ಕೆ ಬಿದ್ದೆ. ನಿಮಗೇನನಿಸುವುದೋ ಗೊತ್ತಿಲ್ಲ, ನನಗಂತೂ ಇದನ್ನು ಓದುತ್ತ ಹೋದಂತೆ ಎಳೆಯ ಅರ್ನೆಸ್ಟೋನನ್ನು ನಾನು ಮತ್ತಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಂತೆನಿಸಿತು. ಸಾಹಸ ಯಾತ್ರೆಯ ಸಲುವಾಗಿ ಹೊರಟ ಅರ್ನೆಸ್ಟೋ, ಮಹಾನ್ ಕೆಲಸ ಮಾಡುವ ಕನಸಿನ ಅರ್ನೆಸ್ಟೋ ನಮ್ಮ ಖಂಡದ ವಾಸ್ತವಕ್ಕೆದುರಾದೊಡನೆ ಮನುಷ್ಯನಾಗಿ ಅರಳಿದ. ಸಾಮಾಜಿಕ ವ್ಯಕ್ತಿಯಾಗಿ ಪರಿವರ್ತನೆಗೊಂಡ.

ನಿಧಾನವಾಗಿ ಅವನ ಕನಸುಗಳು, ಗುರಿಗಳೂ ಬದಲಾದವು. ಉಳಿದವರ ನೋವುಗಳನ್ನು ಅರ್ಥ ಮಾಡಿಕೊಳ್ಳುತ್ತ ಅವನ್ನು ತನ್ನವೇ ಆಗಿಸಿಕೊಂಡ.

- ಅಲಿಡಾ ಗವಾರಾ ಮಾರ್ಚ್
View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಅಮರೇಶ ಕರ್ನಾಟ
ನಾನೇ ಬೈಕ್ ತಗೊಂಡು ಓಡಾಡಿದಂಗಾಯ್ತು !!

ಮೊದಲಿಗೆ ಈ ರೀತಿಯ ಟಿಪ್ಪಣಿ ಬರಹಗಳನ್ನು ಓದಿದ್ದೇ ಇಲ್ಲ...
ನನ್ನ ಭಾಷೆ ಕನ್ನಡಕ್ಕೆ ಅದ್ಬುತವಾಗಿ ಭಾವಾನುವಾದವಾಗಿದೆ...
ನನ್ನ ಡಿಗ್ರಿ ಪರೀಕ್ಷೆಗಳು ನಡೆಯಿತ್ತಿದ್ದರೂ, ಮೂರೇ ದಿನಗಳಲ್ಲಿ ಓದಿ ಮುಗಿಸಿದ್ದೇನೆ...
ಜೊತೆಗೆ ಇರುವ ಚೆ ಗುವೆರಾ ಭಾವಚಿತ್ರಗಳು ಸ್ಪೂರ್ತಿ ಸಂಕೇತವಾಗಿವೆ...

ಧನ್ಯವಾದಗಳು