Skip to product information
1 of 2

Dr. Archana Athani

ಮೋಹಕ ಮಾಲ್ಡೀವ್ಸ್

ಮೋಹಕ ಮಾಲ್ಡೀವ್ಸ್

Publisher -

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 184

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಡಾ. ಅರ್ಚನಾ ಅಥಣಿ ಗಡಿಭಾಗದ ಮಹಿಳಾ ಸಾಹಿತಿಗಳಲ್ಲಿ ಪ್ರಮುಖರು, ವೃತ್ತಿಯಲ್ಲಿ ಅಧ್ಯಾಪಕರು ಈಗಾಗಲೇ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹಲವು ಕೃತಿಗಳ ಕೊಡುಗೆ ನೀಡಿದ್ದಾರೆ. ಸಂಶೋಧನೆ, ಸಂಪಾದನೆ, ವಿಮರ್ಶಾ ಕೃತಿಗಳ ಮೂಲಕ ಗುರುತಿಸಿಕೊಂಡಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಸಂಶೋಧನ ಲೇಖನಗಳು ಪ್ರಕಟಗೊಂಡಿವೆ.

ಅಧ್ಯಯನ ಅಧ್ಯಾಪನಗಳೊಂದಿಗೆ ಪ್ರವಾಸ ಕೈಕೊಳ್ಳುವುದು ಡಾ. ಅರ್ಚನಾ ಅಥಣಿ ಅವರ ಹವ್ಯಾಸಗಳಲ್ಲೊಂದು. ತಾವು ಪಡೆದ ಪ್ರವಾಸ ಅನುಭವಗಳನ್ನು ಶಿಸ್ತುಬದ್ದವಾಗಿ ಹೆಣೆದು ಪ್ರವಾಸ ಕಥನ ರಚಿಸಿದ್ದಾರೆ. ಮಾಲೀನ್ಸ್ ಕನ್ನಡ ಸಂಸ್ಕೃತಿ ಉತ್ಸವದ ಪ್ರಯುಕ್ತ ಮಾಲ್ಮೀಮ್ಸ್ ದ್ವೀಪರಾಷ್ಟ್ರಕ್ಕೆ ಪಯಣಿಸಿದ ಅನುಭವಗಳನ್ನೊಳಗೊಂಡ ಕೃತಿಯೇ 'ಮೋಹಕ ಮಾಲ್ಮೀನ್ಸ್ ಪ್ರವಾಸ ಕಥನ'.

ಮಾಲ್ಮೀಮ್ಸ್ ದ್ವೀಪಮಾಲೆ ನವಜೋಡಿಗಳ ಮಧುಚಂದ್ರದ ಮೆಚ್ಚಿನ ತಾಣ. ಪ್ರೇಮಿಗಳ ಸ್ವರ್ಗ, ಸಾಹಸಿಗರಿಗೆ ರೋಚಕ ಕ್ರೀಡೆಗಳ ಆಡೊಂಬಲ ಕಡಲು. ಹವಳ ದಿಬ್ಬಗಳ ಒಡಲು ಮಾಲ್ಮೀಮ್ಸ್ ಸೌಂದರ್ಯವನ್ನು ಶಬ್ದಗಳಲ್ಲಿ ಸೆರೆಹಿಡಿದು ಪ್ರವಾಸ ಕಥನವಾಗಿ ರೂಪಿಸಿದವರು ಡಾ. ಅರ್ಚನಾ ಅಥಣಿಯವರು.

ಮೋಹಕ ಮಾಲ್ಮೀಮ್ಸ್ ಡಾ. ಅರ್ಚನಾ ಅಥಣಿ ಅವರ ಪ್ರವಾಸೀ ಅನುಭವಗಳ ಆಗರ. ಅದು ಮಾಲೀಮ್ಸ್, ಸಾಗರದಂತೆ ಮನೋಹರ? 'ಮಾಲ್ಮೀಮ್ಸ್ ದ್ವೀಪರಾಷ್ಟ್ರದ ಪ್ರಾಚೀನತೆ, ಅನನ್ಯತೆ, ವಿಶಿಷ್ಟತೆ ಕೃತಿಯುದ್ದಕ್ಕೂ ಗೋಚರಿಸುತ್ತದೆ. 'ಮಾಲ್ಮೀಮ್ಸ್ ಮೋಹಕತೆ ಕೃತಿ ಓದುಗರಿಗೆ ಪ್ರತಿ ಅಧ್ಯಾಯಗಳಲ್ಲಿ ಅನುಭವಕ್ಕೆ ಬರುತ್ತದೆ. ಜಾಗತಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಿದ ಮಾಲ್ಮೀಮ್ಸ್ನ ಮೂಲ ಭಾರತವೆಂಬುದು ಗಮನಾರ್ಹ ಸಂಗತಿ.

ಮಾಲ್ಮೀಮ್ಸ್ ಪ್ರಕೃತಿ ಸೌಂದರ್ಯ, ಇತಿಹಾಸ, ವಿಶ್ವದೊಂದಿಗೆ ಅದರ ಬಾಂಧವ್ಯ, ಕಡಲ ಜೀವವೈವಿಧ್ಯತೆ, ದ್ವೀಪರಾಷ್ಟ್ರದ ಭವಿಷ್ಯತ್ತಿನ ಬಗೆಗಿನ ವಿಚಾರಗಳನ್ನು ಸ್ವಾರಸ್ಯಪೂರ್ಣವಾಗಿ ಮೇಳವಿಸಿ ರಚಿಸಿದ 'ಮೋಹಕ ಮಾಲ್ಮೀವ್' ಪ್ರವಾಸ ಕಥನ. ಡಾ. ಅರ್ಚನಾ ಅಥಣಿಯವರು ಪ್ರವಾಸ, ಪ್ರವಾಸ ಕಥನಗಳ ಪಯಣ ಮುಂದುವರಿಯಲಿ, ಕನ್ನಡ ಭಾಷೆ, ಸಾಹಿತ್ಯಕ್ಕೆ ಅನನ್ಯ ಕೊಡುಗೆಯಾಗಲಿ

View full details