Skip to product information
1 of 2

Kanaada Raghava

ಮೊದಲ ಮಳೆಯ ಮಣ್ಣು

ಮೊದಲ ಮಳೆಯ ಮಣ್ಣು

Publisher - ಛಂದ ಪ್ರಕಾಶನ

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 95

Type - Paperback

Gift Wrap
Gift Wrap Rs. 15.00

ಇವರ ಕತೆಗಳನ್ನು ನಾನು ಮೆಚ್ಚಲು ಕಾರಣ ಬರಹದ ವಸ್ತು ಮತ್ತು ಅನುಭವ ವೈವಿಧ್ಯ. ಈ ವೈವಿಧ್ಯವನ್ನು ಕತೆಗಾರಿಕೆಯಲ್ಲಿ ಮೀಯಿಸಿ, ಹೊಸತೇನನ್ನೋ ಹೊಳೆಯಿಸಬಹುದೆ ಎಂಬುದರ ಬಗ್ಗೆ ಇರುವ ಪ್ರಯತ್ನಶೀಲತೆ. ಸಾಮಾನ್ಯವಾಗಿ ಕತೆಗಾರರ ಬರವಣಿಗೆ ಅವರ ಸಾಮಾಜಿಕ ಹಿನ್ನೆಲೆಗೆ, ಇಲ್ಲಾ ಸೀಮಿತ ಪ್ರತ್ಯಕ್ಷ ಘಟನಾವಳಿಗಳಿಗೆ ಸೀಮಿತವಾಗಿರುತ್ತದೆ. ಇಲ್ಲಾ ಈ ನೆಲೆಗಳಿಂದಲೇ ಸ್ಫೂರ್ತಿ ಪಡೆದಿರುತ್ತದೆ. ತನ್ನ ಹಿನ್ನೆಲೆ, ತನ್ನ ವಯಸ್ಸು, ತನ್ನ ಮನೋಧರ್ಮಕ್ಕೆ ಭಿನ್ನವಾದ, ಹೊರತಾದ ವಸ್ತುಗಳಿಗೆ, ಪದಾರ್ಥಗಳಿಗೆ ಕತೆಗಾರರು ಲಗ್ಗೆ ಹಾಕುವುದು ನಮ್ಮಲ್ಲಿ ಕಡಿಮೆ, ಮಾಸ್ತಿಯವರನ್ನು ಬಿಟ್ಟರೆ. ರಾಘವರು ವೃತ್ತಿಯಲ್ಲಿ ವೈದ್ಯರಾಗಿರುವುದು ಕೂಡ ಸ್ಪಂದನಶೀಲತೆಯ ವೈಶಾಲ್ಯಕ್ಕೆ ಕಾರಣವಾಗಿರಬಹುದು. ಯಾವುದೇ ಕತೆಯಾದರೂ, ಕಥಾವಸ್ತುವಾದರೂ ಸರಿಯೇ ಯಶಸ್ಸಾಗಿಬಿಡಬೇಕು. ಆಕರ್ಷಕವಾಗಿ ಕಾಣಬೇಕು ఎంబ ಆಸೆಯನ್ನು ಗೆದ್ದು, ತಮ್ಮ ಸ್ವಭಾವ ಪ್ರತಿಭೆಗೆ ಅನುಗುಣವಾಗುವಷ್ಟು ಪ್ರಾಮಾಣಿಕತೆಯಿಂದ ಕತೆ ಬರೆಯುವ ರಾಘವರ ಬರವಣಿಗೆಯ ಸ್ವಭಾವದ ಬಗ್ಗೆ ನನಗೆ ಮೆಚ್ಚುಗೆಯಾಗಿದೆ. ಈ ರೀತಿಯ ಪ್ರಾಮಾಣಿಕತೆ ರಾಘವರ ಕಥನದ ಪ್ರಯಾಣದುದ್ದಕ್ಕೂ ಇರಲಿ ಎಂಬುದೇ ನನ್ನ ನಮ್ರ ಸೂಚನೆ.

-ಕೆ. ಸತ್ಯನಾರಾಯಣ

View full details