Skip to product information
1 of 2

Geetha B U

ಮಿಥ್ಯ

ಮಿಥ್ಯ

Publisher - ಅಂಕಿತ ಪುಸ್ತಕ

Regular price Rs. 95.00
Regular price Rs. 95.00 Sale price Rs. 95.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 160

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಗೀತಾರವರ ಕತೆ-ಕಾದಂಬರಿಗಳ ಜೀವಾಳವೇ ಸೊಗಸಾದ ನಿರೂಪಣೆ ಮತ್ತು ವಸ್ತು ವೈವಿಧ್ಯ. ದಿನಪತ್ರಿಕೆಗಳಲ್ಲಿ ನಾವು ಓದಿದ ಎಷ್ಟೋ ವಿಷಯಗಳು ನಮ್ಮ ಮನಸ್ಸನ್ನು ಕಲಕಿದರೂ ಅಲ್ಲಿ ನಿಲ್ಲದೇ ಹೋದಂತವು. ಗೀತಾರವರ ಕತೆಗಳಲ್ಲಿ ಅವು ಮನಮಿಡಿಯುವ ರೂಪ ಪಡೆದು ಮನಸ್ಸಿನಲ್ಲಿ ಅಚ್ಚೊತ್ತುತ್ತವೆ ಎಂಬುದು ಅಚ್ಚರಿ. ಕೇಳಿದ, ನೋಡಿದ, ಓದಿದ ಘಟನೆಗಳನ್ನು ಕತೆಯಾಗಿಸುವ ಕಲೆ ಅವರಲ್ಲಿದೆ. ಮಹತ್ತರವಾದುದನ್ನು ಹೇಳುವಾಗಲೂ ಗೀತಾ ಆ ಭ್ರಮೆ ಇಲ್ಲದೆ ಬಹಳ ಸರಳವಾಗಿ ಹೇಳಿಬಿಡುತ್ತಾರೆ. ಮನುಷ್ಯ ಸಂಬಂಧದ ಹಲವು ಸೂಕ್ಷ್ಮಗಳನ್ನು ಪ್ರಶ್ನಿಸುತ್ತಾರೆ. ಮನುಷ್ಯ ಸ್ವಭಾವದ ಮೂಲವನ್ನು ಅರಿಯಲು ಪ್ರಯತ್ನಿಸುತ್ತಾರೆ. ಸ್ತ್ರೀವಾದದ ಲೇಬಲ್ ಇಲ್ಲದೆ ಸ್ತ್ರೀ ಸಂವೇದನೆಗಳನ್ನು ಬಿಚ್ಚಿಡುತ್ತಾರೆ.

ಪಾರಂಪರಿಕ ನಿಲುವನ್ನು ದಾಟಿ ಮಹಿಳೆಯರನ್ನು ಚಿತ್ರಿಸುವಂತೆ ಸ್ತ್ರೀವಾದದ ಗುಂಗಿನಿಂದ ಹೊರ ಬಂದು ಪುರುಷರನ್ನು ಅರ್ಥೈಸಿಕೊಳ್ಳುವುದು ಈ ಹೊತ್ತಿನ ಜರೂರತ್ತು ಹೌದು. ಗೀತಾ ಅವರ ಪ್ರಯತ್ನ ಆ ದಿಸೆಯಲ್ಲಿದೆ.

-ಶಾಂತಾ ಕುಮಾರಿ

View full details