Medini Kesavinamane
ಮಿಸ್ಸಿನ ಡೈರಿ
ಮಿಸ್ಸಿನ ಡೈರಿ
Publisher - ವೀರಲೋಕ ಬುಕ್ಸ್
- Free Shipping Above ₹400
- Cash on Delivery (COD) Available*
Pages - 148
Type - Paperback
Couldn't load pickup availability
ಬದುಕು ಹಕ್ಕಲ್ಲ; ಕೃತಜ್ಞತೆ. ಹಕ್ಕು ಋಣ, ಕೃತಜ್ಞತೆ ಶಾ೦ತಿ ಮತ್ತು ನೆಮ್ಮದಿ. ಹಕ್ಕಲ್ಲಿ ಹಸಿವು, ಬರ. ಕೃತಜ್ಞತೆಯಲ್ಲಿ ತೃಪ್ತಿ. ಯಾವುದೂ ಹಕ್ಕಾಗದೇ ಎಲ್ಲವನ್ನೂ ಕೃತಜ್ಞತಾ ಭಾವದಲ್ಲಿ ಸ್ವೀಕರಿಸಿರುವ ಈ ಲೇಖಕಿಯ ಮನಸ್ಥಿತಿ ಪ್ರಬುದ್ಧವಾದರೂ ಜೀವರಸ ಬಾಲ್ಯದ ಮುಗ್ಧತೆಯೇ..
ಹಾಗಾಗಿ ಒಂದು ಪ್ರೈಮರಿ ಶಾಲೆಯ ಹತ್ತು ಮತ್ತಷ್ಟು ವರ್ಷಗಳ ಬಾಲಿಶವಾಗಿ ಕಳೆದುಹೋಗಬಲ್ಲಂತಹ ಅನುಭವಗಳು ಪ್ರಬುದ್ಧವಾಗಿ ದಾಖಲಾಗಿವೆ. ಮಕ್ಕಳೊಟ್ಟಿಗೆ ಮಕ್ಕಳಾಗುವುದು ಸುಲಭ. ಘಟನೆಗಳನ್ನು ಮಕ್ಕಳ ಆಟಿಕೆಯೆನಿಸದೇ ಪ್ರಬುದ್ಧವಾಗಿ ಓದುಗರಿಗೆ ತಲುಪಿಸುವುದು ಕಷ್ಟ. ಮೇದಿನಿ ಕೆಸವಿನಮನೆಯವರು ಈ ನಾಡಿನ ಒಂದು ಗ್ರಾಮೀಣ ಪ್ರದೇಶದ ದೈನಂದಿನ ಬದುಕಿನ ಸ್ಥಿತಿಗತಿಗಳನ್ನು ಪ್ರೈಮರಿ ಶಾಲೆಯ ಮಕ್ಕಳ ದೃಷ್ಟಿಕೋನದಲ್ಲಿ ಪ್ರಬುದ್ಧವಾಗಿ ಬಿ೦ಬಿಸಿದ್ದಾರೆ. ಭಾಷೆ ಇಷ್ಟವಾಗತ್ತೆ, ಭಾವ ಮನಸ್ಸು ಮುಟ್ಟುತ್ತೆ.
ಅವರದ್ದೇ ಮಾತು; "ಬಾಲ್ಯವೆ೦ಬುದು ಸಮೃದ್ಧವಾಗಿದ್ದರೆ ಬದುಕಿನಲ್ಲಿ ಭಾವ ಎ೦ದೂ ಬತ್ತುವುದಿಲ್ಲ" - ಬಡತನದ ಮನೆಗಳಲ್ಲಿ ಹಸಿವಿನದ್ದೇ ತಾಂಡವ. ಅದು ಲಯಬದ್ಧವಾದಾಗ ಭಾವದ ಚಿಲುಮೆ. ಮುಳುಗಡೆಯ ಭೀತಿ, ಕೈಚಾಚಲಾಗದ ಮನಸ್ಥಿತಿ. ಇಲ್ಲಿ ಒಡಲ ಹಸಿವನ್ನು ತಣಿಸಿ, ಭಾವ ಸಮೃದ್ಧಿಯನ್ನು ಜಿನುಗಿಸಿದ ಅದೊಂದು ತಲೆಮಾರಿಗೆ ಶರಣು.
ಕೊನೆಯ ಮಾತಲ್ಲಿ ಮಂಗಳ ಹಾಡಿದ್ದೀರಿ? ಇದು ನಾಂದಿ; ಮಂಗಳಕ್ಕಿನ್ನೂ ಸಮಯವಿದೆ!
-ಸೇತುರಾಮ್ ಎಸ್ ಎನ್
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.