Ranganath Chitradurga
ಮಿಡಲ್ ಕ್ಲಾಸ್ ಮೇನಿಯಾ
ಮಿಡಲ್ ಕ್ಲಾಸ್ ಮೇನಿಯಾ
Publisher -
- Free Shipping Above ₹400
- Cash on Delivery (COD) Available*
Pages - 122
Type - Paperback
Couldn't load pickup availability
'ಮಿಡಲ್ ಕ್ಲಾಸ್ ಮೇನಿಯಾ' ಲೇಖಕ ರಂಗನಾಥ್ ಚಿತ್ರದುರ್ಗ ಅವರ ಅತ್ಯಂತ ಜನಪ್ರಿಯ ಬರಹಗಳ ಸಂಗ್ರಹವಾಗಿದೆ. ಇಂದಿನ ನಾಗಾಲೋಟದ ಬದುಕಿನಲ್ಲಿ ಮಧ್ಯಮ ವರ್ಗದ ಜನರು ಎದುರಿಸುವ ವಿಚಿತ್ರ ಸವಾಲುಗಳು ಮತ್ತು ಅವರ ಮನಸ್ಥಿತಿಯನ್ನು ಈ ಲೇಖನಗಳು ಅತ್ಯಂತ ಮಾರ್ಮಿಕವಾಗಿ ಚಿತ್ರಿಸುತ್ತವೆ.
Share

"ಮಿಡಲ್ ಕ್ಲಾಸ್ ಮೇನಿಯ"ಇದು ಒಟ್ಟು 29 ಲೇಖನಗಳನ್ನ ಒಳಗೊಂಡಿರುವ 'ಲೇಖನಗಳ ಸಂಗ್ರಹ' ಪುಸ್ತಕದ ಶೀರ್ಷಿಕೆಯೇ ಸೂಚಿಸುವಂತೆ ಇದು ಮಿಡಲ್ ಕ್ಲಾಸ್ ಜನರ ನೋವು-ನಲಿವು, ಆಸೆ-ಕನಸು , ಕಷ್ಟ-ಸುಖ ಪ್ರತಿದಿನದ ಪರದಾಟ , ಜನರ ಜೀವನ ಶೈಲಿ, ನನಸಾಗದ ತಿರುಕನ ಕನಸಿನಂತಿರುವ ಆಸೆಗಳು, ಜನರ ಸ್ವಾಭಿಮಾನ, ನಿಸ್ವಾರ್ಥ ಹೃದಯ,ಭಾಷೆ ಜೊತೆಜೊತೆಗೆ ಮಿಡಲ್ ಕ್ಲಾಸ್ ಹುಡುಗ ಹುಡುಗಿಯರ ಪ್ರೀತಿಯ ವ್ಯಥೆ, ಕನಸು ಆಸೆಗಳು ಸೇರಿ ಒಟ್ಟಾರೆಯಾಗಿ 'ಮಿಡ್ಲ್ ಕ್ಲಾಸ್' ಜನರ ಬದುಕಿನ ಸುತ್ತ ಹೆಣದಿರುವ ಸುಂದರ ಲೇಖನಗಳ ಸಂಗ್ರಹವೇ 'ಮಿಡಲ್ ಕ್ಲಾಸ್ ಮೇನಿಯ'
ಪುಸ್ತಕದ ಪ್ರತಿಪುಟವನ್ನು ತಿರುವಿದಾಗ ಲೇಖಕ ರಂಗನಾಥ್ ಅವರು ತಮ್ಮ ಸಹಜ ಬರವಣಿಗೆ, ಸರಳ ಭಾಷೆ ಅದ್ಭುತ ವಿವರಣಾ ಶೈಲಿ, ವಿಚಾರ, ಅನುಭವ ಮಾತುಗಳ , ಮೂಲಕ ಪ್ರತಿ ಓದುಗನ ಬದುಕಿಗೆ ಬಹಳ ಬೇಗ ಹತ್ತಿರವಾಗಿ ಬಿಡುತ್ತಾರೆ.
ಬದುಕಿನಲ್ಲಿ ನೀವು ಕುಗ್ಗಿ ಕೂತಾಗ ಸಂತೈಸುವ ಸ್ನೇಹಿತನಾಗಿ, ತಿಳಿಯದೆ ಮೊಗದಲ್ಲಿ ಕಿರುನಗೆಯನ್ನು ತರಿಸುವ ಆಪ್ತನಾಗಿ, ಜೀವನದ ಮೋಟಿವೇಟರ್ , ಗೆಳೆಯ, ಮತ್ತು ಆತ್ಮೀಯನಾಗಿ ಉಪದೇಶಗಳ ಸಹಿತವಾಗಿ ನೀಡಿರುವ ಉದಾಹರಣೆಗಳ ವಿವರಣೆ ಮತ್ತು ವಿಶಿಷ್ಟ ಬರವಣಿಗೆ , ಲೇಖನಗಳ ಮೂಲಕ ಅತಿ ಬೇಗನೆ ನಿಮ್ಮ ಮನಸ್ಸಿಗೆ ಮತ್ತು ಬದುಕಿಗೆ ಹತ್ತಿರವಾಗುತ್ತಾರೆ.
ಈ ಪುಸ್ತಕದಲ್ಲಿ ಎಲ್ಲಾ ಲೇಖನಗಳು ಒಂದನ್ನು ಮತ್ತೊಂದು ಮೀರಿಸುವಂತೆ ಇದೆ. ಅದರಲ್ಲೂ 'ಒಂದೇ ಲುಕ್ಕಿಗೆ ಬಿದ್ದರೆ ಹೇಗೆ'.?, 'ಡೆಡ್ ಲವ್', 'ತಿಥಿ ಊಟ ಮತ್ತು ಅವಳು', 'ಹಣೆ ಬರಹದ ಮೇಲೆ ಭಾರ ಹಾಕಬೇಡಿ' ಮತ್ತು ' 'ಲೈಫ್ ನಲ್ಲಿ ರಿಸ್ಕ್ ತಗೋಬೇಕು' ಎಂಬಂತ ಈ ಐದು ಲೇಖನಗಳು ವಿಶೇಷವಾಗಿ ನನ್ನ ಹಾರ್ಟ್ ಫೇವರೆಟ್! ನೀವು ಈ ಪುಸ್ತಕವನ್ನು ಎಲ್ಲಿಂದ ಬೇಕಾದರೂ ಓದುವುದಕ್ಕೆ ಪ್ರಾರಂಭಿಸಿ ಮುಕ್ತಾಯಗೊಳಿಸಬಹುದು ಹಾಗಾಗಿ ಸಾಧ್ಯವಾದ್ರೆ ಮೊದಲು ಈ ಲೇಖನಗಳನ್ನು ಓದಿ ಆಯ್ತಾ.!
ಈ ಪುಸ್ತಕದಲ್ಲಿ ಬಂದು ಹೋಗುವ ವೆಂಕಟ್ ಸುಬ್ಬಿ, ಚರಣ್, ಪಾಪಣ್ಣ, ಕುಶಾಲ್, ಮನೋಜ, ಕೃಷ್ಣ, ಸಣ್ಣಜ್ಜಿ, ನಿವೇದಿತಾ, ನವೀನ, ಸಮೀರ್ ಈ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕವೋ ಅಥವಾ ನಿಜವೋ ಗೊತ್ತಿಲ್ಲ! ಆದರೆ ಈ ಪ್ರತಿ ಪಾತ್ರಗಳು ಬದುಕಿಗೊಂದು ಹೊಸ ಪಾಠವನ್ನು ಕಲಿಸಿಕೊಡುತ್ತೆ. ನಮ್ಮ ಸುತ್ತಮುತ್ತಲಿನ ನೋವುಗಳನ್ನು, ನೈಜತೆಯನ್ನು ಸಾರುತ್ತದೆ. ಮುಖ್ಯವಾಗಿ ಪಾತ್ರಗಳು ನಮ್ಮ ಸುತ್ತಮುತ್ತಲೇ ಇರುವಂತೆ ಖಂಡಿತವಾಗಿಯೂ ನಿಮಗೆ ಭಾಸವಾಗುತ್ತದೆ ಎಂದರೆ ತಪ್ಪಾಗದು.
ಪುಸ್ತಕದಲ್ಲಿ ಲೇಖಕರು ವಿವರಿಸಿರುವ ಕೆಲವು ಸನ್ನಿವೇಶ ಘಟನೆಗಳು ನಿಮ್ಮನ್ನ ನಗಿಸಿ ಮತ್ತೊಮ್ಮೆ ಮೌನವಾಗಿಸಿ ನಮ್ಮ ಸಮಾಜ ಬದುಕಿನ ಕಹಿ ವಾಸ್ತವವನ್ನು ಹೊರ ಹಾಕುತ್ತಾ ಮೊದಲ ಪುಟದಿಂದ ಕೊನೆತನಕ ಓದಿಸಿಕೊಂಡು ಹೋಗುತ್ತದೆ ಎನ್ನುವ ಆಶ್ವಾಸನೆಯನ್ನು ನಾನು ಕೊಡಬಲ್ಲೆ!
ಪುಸ್ತಕವನ್ನು ಓದುತ್ತಿರುವಾಗ ಯಾರೋ ನಮ್ಮದೇ ಬದುಕಿನ ನೋವು ನಲಿವು ಕಥೆಗಳಿಗೆ ಅಕ್ಷರ ರೂಪ ನೀಡಿ ಬರೆದಿದ್ದಾರೆ, ಲೇಖಕರು ನಮ್ಮ ಬದುಕಿನ ಕಥೆಯನ್ನೇ ಪುಸ್ತಕದ ಮೂಲಕ ವಿವರಿಸಿದ್ದಾರೆ ಆದ್ದರಿಂದ ನಿಮ್ಮ ಬದುಕಿನ ಕಥೆಯನ್ನ ನೀವೇ ಓದುವುದಕ್ಕೆ ಸಿದ್ಧವಿದ್ದರೆ ,ನೀವು ಕೂಡ ಮಿಡ್ಲ್ ಕ್ಲಾಸ್ ಬದುಕನ್ನ ಬದುಕುತ್ತಿದ್ದರೆ ''ಮಿಡಲ್ ಕ್ಲಾಸ್ ಮೇನಿಯಾ '' ಈ ಪುಸ್ತಕ ನಿಮಗಾಗಿ!
ಕವನಾ ಚಾರ್ಮಾಡಿ
Subscribe to our emails
Subscribe to our mailing list for insider news, product launches, and more.