Mahabala Seetalabhavi
ಮೇಘದೂತ
ಮೇಘದೂತ
Publisher - ಅಂಕಿತ ಪುಸ್ತಕ
- Free Shipping Above ₹250
- Cash on Delivery (COD) Available
Pages - 178
Type - Paperback
Couldn't load pickup availability
ಕಾಳಿದಾಸನನ್ನು ಓದುವುದೇ ಒಂದು ಅನನ್ಯ ಖುಷಿ. ಸಂಸ್ಕೃತದ ಕವಿಕುಲಗುರು ಎನಿಸಿರುವ ಈ ಮಹಾಕವಿಯ ಮೇಘದೂತ ಖಂಡಕಾವ್ಯ, ಸಾಹಿತ್ಯ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಕೃತಿಗಳಲ್ಲೊಂದು. 'ಉಪಮಾ ಕಾಳಿದಾಸಸ್ಯ' ಮಾತನ್ನು ಇನ್ನೊಂದು ಎತ್ತರಕ್ಕೆ ಏರಿಸಿದ ಕೃತಿಯಿದು. ಅದಕ್ಕೆ ಕಲಶಪ್ರಾಯವೆಂಬಂತೆ ಮಲ್ಲಿನಾಥಸೂರಿಯ ವ್ಯಾಖ್ಯಾನ. ಕಾಳಿದಾಸನ ಕಾವ್ಯ ಎಷ್ಟು ಶ್ರೇಷ್ಠವೋ ಅಷ್ಟೇ ಶ್ರೇಷ್ಠ ಮಲ್ಲಿನಾಥನ ವ್ಯಾಖ್ಯಾನ ಎಂಬ ಮಾತಿದೆ. ಇವೆರಡನ್ನೂ ಸೇರಿಸಿ ಕನ್ನಡಕ್ಕೆ ಸರಳವಾದ ಒಂದು ಅನುವಾದ ಬಂದಿರಲಿಲ್ಲ. ಈಗ ಅದು ನಿಮ್ಮ ಕೈಲಿದೆ. ಪೂರ್ವಮೇಘ ಮತ್ತು ಉತ್ತರಮೇಘವನ್ನು ಕಾವ್ಯಾಸ್ವಾದನೆಗೆ, ಅಧ್ಯಯನಾಸಕ್ತಿಯಿಂದ ಅಥವಾ ಕಾಲೇಜಿನ ಪಠ್ಯಕ್ಕಾಗಿ ಹೀಗೆ ಯಾವ ಉದ್ದೇಶಕ್ಕೆ ಓದುವುದಿದ್ದರೂ ಮಹಾಬಲ ಸೀತಾಳಭಾವಿಯವರ ಈ ಅನುವಾದ ನಿಮಗೆ ಅನುಕೂಲಕರವಾಗಿ ಒದಗಿಬರುತ್ತದೆ.
Share


Subscribe to our emails
Subscribe to our mailing list for insider news, product launches, and more.