Dr. Lokesha Agasanakatti
ಮೀಸೆ ಹೆಂಗಸು ಮತ್ತು ಇತರ ಕಥೆಗಳು
ಮೀಸೆ ಹೆಂಗಸು ಮತ್ತು ಇತರ ಕಥೆಗಳು
Publisher - ವಸಂತ ಪ್ರಕಾಶನ
Regular price
Rs. 130.00
Regular price
Sale price
Rs. 130.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಲೋಕೇಶ ಅಗಸನಕಟ್ಟೆ ನಮ್ಮ ನಡುವಣ ಅಪರೂಪದ ಸೃಜನಶೀಲ ಪ್ರತಿಭೆ ಮತ್ತು ಸಂವೇದನಾಶೀಲ ಮನಸ್ಸುಳ್ಳವರು. ಕಾವ್ಯ, ಕಥೆ, ಕಾದಂಬರಿ, ವಿಮರ್ಶೆ, ಜೀವನ ಚರಿತ್ರೆ ಮತ್ತು ನಾಟಕ - ಹೀಗೆ ಹಲವು ದಾರಿಗಳ ಮೂಲಕ ಬದುಕಿನ ನಿಗೂಢತೆಯನ್ನು ಅರ್ಥವಂತಿಕೆಯನ್ನು ಶೋಧಿಸುತ್ತಿರುವ ವಿನಯವಂತ ಸಾಹಸಿ ಇವರು. ಕನ್ನಡ ಸಾಹಿತ್ಯ ಪರಂಪರೆ ಹಾಗೂ ಅಲಕ್ಷಿತ ಅನುಭಾವ ಪರಂಪರೆಗಳಿಂದ ಲೋಕದ ಗತಿಶೀಲತೆಯನ್ನು ಗ್ರಹಿಸುವ ಮತ್ತು ಅಭಿವ್ಯಕ್ತಿಸುವ ಕಲಾಪರಿಕರಗಳನ್ನು ಪಡೆದುಕೊಂಡವರು. ಮೂರು ದಶಕಗಳ ಕಾಲ ಗುರುವಾಗಿ ಯುವ ಹೃದಯಗಳಿಗೆ ಸಾಹಿತ್ಯದ ಪ್ರೀತಿಯನ್ನು ಧಾರೆ ಎರೆದವರು.
ತಮ್ಮ ಬರಹಗಳನ್ನು ವರ್ತಮಾನದ ಕನ್ನಡ ಜಗತ್ತು ಹಾಗೂ ಬರುತ್ತಿರುವ ಸಂಕ್ರಮಣಗಳನ್ನು ರೂಪಕಾತ್ಮಕವಾಗಿ ನಿರೂಪಿಸುವ ಮೂಲಕ ಕನ್ನಡ ಸಾಹಿತ್ಯದ ನೆಲವನ್ನು ಫಲವತ್ತು ಮಾಡಿದವರು. ಕಣ್ಣ ಮರೆಗಿನ ಸಮುದಾಯಗಳನ್ನು ಹೆಣ್ಣು ಲೋಕದ ತಳಮಳಗಳನ್ನು ನುಡಿಗೌರವದಿಂದ ಮಂಡಿಸಿದವರು. ಲೋಕೇಶರ ಬರಹಗಳು ಕನ್ನಡ ಬದುಕಿನ ಸಮಸ್ಯೆಗಳನ್ನು ಗುರುತಿಸುವಂತೆ ಅವುಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಓದುಗರಲ್ಲಿ ಬೆಳೆಸುವ ಜೀವಶಕ್ತಿ ಪಡೆದುಕೊಂಡಿವೆ.
ಡಾ.ಕೆ.ವೈ. ನಾರಾಯಣಸ್ವಾಮಿ ವಿಮರ್ಶಕ, ನಾಟಕಕಾರ

Share
Subscribe to our emails
Subscribe to our mailing list for insider news, product launches, and more.