N. Narasimhaiah
ಮಾಯಾವಿ ಮಾರ್ಜಾಲ
ಮಾಯಾವಿ ಮಾರ್ಜಾಲ
Publisher - Sapna Book House
- Free Shipping Above ₹350
- Cash on Delivery (COD) Available*
Pages - 177
Type - Paperback
Couldn't load pickup availability
ಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.
ನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.
60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...
Share

Subscribe to our emails
Subscribe to our mailing list for insider news, product launches, and more.