Title : Mattomme Sikkona Mudaviddare..., Collection of Short Stories, Author : Jogi & Gopalakrishna Kuntini, Publisher : Sawanna Enterprises.

ಮತ್ತೊಮ್ಮೆ ಸಿಕ್ಕೋಣ ಮುದವಿದ್ದರೆ...

Rs. 270.00
Skip to product information
Title : Mattomme Sikkona Mudaviddare..., Collection of Short Stories, Author : Jogi & Gopalakrishna Kuntini, Publisher : Sawanna Enterprises.
ಮತ್ತೊಮ್ಮೆ ಸಿಕ್ಕೋಣ ಮುದವಿದ್ದರೆ...
Jogi and Gopalakrishan Kuntini
Publisher - ಸಾವಣ್ಣ ಪ್ರಕಾಶನ
Type - Paperback
Pages - 216
- Free Shipping Above ₹400

- Cash on Delivery (COD) Available*
Rs. 270.00
Shipping calculated at checkout.

Pickup available at Harivu Books New Shop

Usually ready in 24 hours

View store information

ಮತ್ತೊಮ್ಮೆ ಸಿಕ್ಕೋಣ ಮುದವಿದ್ದರೆ...

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಸಣ್ಣಕತೆಗಳನ್ನು ಬರೆಯುವ, ಓದುವ, ಸಂಭ್ರಮಿಸುವ ಪುಟ್ಟದೊಂದು ವಾಟ್ಸ್ಯಾಪ್ ಗ್ರೂಪು ಕಳೆದ ಹತ್ತು ವರ್ಷಗಳಲ್ಲಿ ಕಥೆಗಳ ಜತೆ ನಡೆಸಿದ ಪ್ರಯೋಗಗಳ ಫಲಶ್ರುತಿ ಇಲ್ಲಿದೆ. ಹಲವು ಕತೆಗಾರರು ಕಥೆಕೂಟದಲ್ಲಿ ಪಳಗಿದ್ದಾರೆ, ಅತ್ಯುತ್ತಮ ಸಣ್ಣಕತೆಗಳನ್ನು ಬರೆದಿದ್ದಾರೆ. ಅನೇಕ ಓದುಗರು ಕತೆಗಳ ಕುರಿತ ಒಳನೋಟಗಳನ್ನು ಪಡೆದುಕೊಂಡಿದ್ದಾರೆ.

ದೊಡ್ಡವರು, ಸಣ್ಣವರು, ಹೊಸ ಕತೆಗಾರ, ಹಳೆಯ ಕತೆಗಾರ, ಜನಪ್ರಿಯ, ಮೊದಲಿಗ ಎಂಬ ಯಾವ ಭೇದವೂ ಇಲ್ಲದೇ ಕತೆಗಾರರಿಗೆ ಮುಕ್ತ ಅವಕಾಶ ಒದಗಿಸುತ್ತಾ ಬಂದಿರುವ ಕಥೆಕೂಟ ಮಾಡಿರುವ ಮೌನಕ್ರಾಂತಿ ಅದರ ಫಲಾನುಭವಿಗಳಿಗೆ ಮಾತ್ರ ಗೊತ್ತು.

ಹತ್ತು ವರ್ಷಗಳ ಕಾಲ ಕಥೆಗಳನ್ನೇ ಉಸಿರಾಗಿಸಿಕೊಂಡ ಕಥೆಕೂಟ ಮೂರು ಕಥಾಸಂಕಲನಗಳನ್ನು ಪ್ರಕಟಿಸಿದೆ. ಕನ್ನಡದ ಅತ್ಯುತ್ತಮ ಕತೆಗಳಿರುವ `ಮಳೆಯಲ್ಲಿ ನೆನೆದ ಕತೆಗಳು', `ಒಲವು ತುಂಬುವುದಿಲ್ಲ' ಮತ್ತು `ಲೈಫ್ ಈಸ್ ಶಾರ್ಟ್' ಓದುಗರ ಮೆಚ್ಚುಗೆ ಮತ್ತು ಮನ್ನಣೆ ಗಳಿಸಿವೆ.

ಇದೀಗ ಕಥೆಕೂಟಕ್ಕೆ ಹತ್ತು ವರ್ಷ ತುಂಬುತ್ತಿರುವ ಹೊತ್ತಲ್ಲಿ ಹಲವು ಲೇಖಕರ ಸೊಗಸಾದ 26 ಕತೆಗಳಿರುವ ಈ ಕಥಾ ಸಂಕಲನ ಹೊರಬರುತ್ತಿದೆ. ಇದು ಹೊಸತಾಗಿ ಬರೆಯುವವರಿಗೆ ಕೈಪಿಡಿ, ಓದುಗರಿಗೆ ರಸದೌತಣ ಮತ್ತು ಕತೆಗಳು ನಡೆದು ಬಂದ ಹಾದಿಯನ್ನು ಅಧ್ಯಯನ ಮಾಡುವವರಿಗೆ ಕೈಪಿಡಿ.

ಇಲ್ಲಿರುವ ಕತೆಗಳನ್ನು ಓದಿದ ನಂತರ ನೀವು ಕತೆಗಳನ್ನು ನೋಡುವ, ಓದುವ, ಗ್ರಹಿಸುವ ರೀತಿ ಬದಲಾಗುತ್ತದೆ ಅನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.

You may also like

Subscribe to our emails

Be the first to know about new collections and special offers.