Viveka Shanabhaga
ಮತ್ತೊಬ್ಬನ ಸಂಸಾರ
ಮತ್ತೊಬ್ಬನ ಸಂಸಾರ
Publisher - ಅಕ್ಷರ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 112
Type - Paperback
Couldn't load pickup availability
ಯಾವುದೇ ವಸ್ತುವನ್ನು ಕುರಿತು, ಹಲವು ರೀತಿಯ ಕಥನಗಳನ್ನು ಕಟ್ಟುವುದು ಸಾಧ್ಯ; ಆದರೆ, ಒಂದೇ ಕಥನದಲ್ಲಿ ಹಲವು ಕಥಾಸಾಧ್ಯತೆಗಳನ್ನು ಒಳಗೊಳ್ಳುವುದು ಕಷ್ಟದ ಹಾದಿ. ವಿವೇಕ ಶಾನಭಾಗ ಅವರ ಈಚಿನ ಕಥೆಗಳು, ಈ ಎರಡನೆಯ ಜಾತಿಯ ದುರ್ಗಮ ದಾರಿಗಳನ್ನು ಹುಡುಕಲು ಹೊರಟಂತಿವೆ. ಉದಾಹರಣೆಗೆ, ಈ ಸಂಕಲನದ ಒಂದು ಕಥೆಯಲ್ಲಿ 'ಒಬ್ಬ'ನ ಸಾದಾ ಸಂಸಾರದೊಳಗೆ, ಇದ್ದಕ್ಕಿದ್ದಂತೆ 'ಮತ್ತೊಬ್ಬ'ನ ನೆರಳು ಕಾಣಿಸತೊಡಗುತ್ತದೆ. ಅದಕ್ಕಿಂತ ಭಿನ್ನವಾದ ಇನ್ನೊಂದು ಕಥೆಯಲ್ಲಿ ಊರಿಗೆಲ್ಲ 'ನಿಗೂಢ'ವೆನ್ನಿಸುವಾಕೆ, ಮತ್ತೊಮ್ಮೆ ಏನೂ ವಿಶೇಷವಿಲ್ಲದ ಸಾಧಾರಣ ಹೆಂಗಸೂ ಆಗಿ ಕಾಣಿಸಿಕೊಳ್ಳುತ್ತಾಳೆ. ಅದೇ ರೀತಿ ಮಾಸ್ತರ, ಕಿರಾಣಿ ಅಂಗಡಿಯಾತ - ಇಂಥ ಪರಿಚಿತರು ಇಲ್ಲಿ ತಟ್ಟನೆ ಅಪರಿಚಿತರೂ ಆಗಿ ಗೋಚರಿಸತೊಡಗುತ್ತಾರೆ. ಶಿರಸಿ, ಕುಮಟಾ, ಅಂಕೋಲಾದ ಸುತ್ತಮುತ್ತಲೇ ಚಿಗುರುವ ಇಲ್ಲಿಯ ಹಲವು ಕಥನಗಳು, ಹಠಾತ್ತನೆ ತಮ್ಮ ಅದೃಶ್ಯ ಬೇರುಗಳನ್ನು ದೂರದೂರದ ಪುಣೆ-ರಂಗೂನಿನವರೆಗೂ ಹಬ್ಬಿಸಿಕೊಳ್ಳತೊಡಗುತ್ತವೆ. ಇಂಥ ಎಲ್ಲ ಕಥನಕ್ರಮಗಳ ಮೂಲಕ ವಿವೇಕರು ಪ್ರಯತ್ನಿಸುತ್ತಿರುವುದಾದರೂ ಏನನ್ನು? ಮೇಲ್ನೋಟಕ್ಕೆ ಒಂದಾಗಿ ಕಾಣುವ ಗ್ರಹೀತ-ವಾಸ್ತವದಲ್ಲಿ ಕಾಲು ನೆಟ್ಟುಕೊಂಡೇ, ಅದರೊಳಗೆ ಹುದುಗಿರುವ ಸಾಧ್ಯ-ವಾಸ್ತವಗಳನ್ನು ಹುಡುಕುವುದು ಈ ಕಥನದ ಪ್ರೇರಣೆಯಾಗಿರಬಹುದೆ? ಅಥವಾ ಇನ್ನೊಂದು ನೆಲೆಯಿಂದ, ದೇಶದೇಶಗಳ ವ್ಯಾಪಾರೋದ್ಯಮಗಳನ್ನು ಜೋಡಿಸತೊಡಗಿರುವ ಇವತ್ತಿನ ತಥಾಕಥಿತ 'ಜಾಗತಿಕ' ವ್ಯವಸ್ಥೆಗೆ ಪ್ರತಿಯಾಗಿ, ಇನ್ನೊಂದು ನೆಲೆಯಲ್ಲಿ ನಡೆಯಬಹುದಾದ ಕಾಲಸಂಶ್ಲೇಷಣೆ ಮತ್ತು ಸ್ಮೃತಿಸಂಶ್ಲೇಷಣೆಗಳನ್ನು ಸೂಚಿಸುವುದು ಈ ಕಥೆಗಳ ಆಶಯವಿದ್ದೀತೆ? ಇಂಥ ಹಲವಾರು ತಾತ್ವಿಕ ಪ್ರಶ್ನೆಗಳನ್ನು ಓದುಗರಲ್ಲಿ ಹುಟ್ಟಿಸಬಲ್ಲ ಸಾಮರ್ಥ ಈ ಕಥಾಸಂಕಲನಕ್ಕಿದೆ.
-ಅಕ್ಷರ ಕೆ.ವಿ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.