Yandamoori Veerendranath | Kannada: Indira Prasada
ಮನೆಯ ಹಿತ್ತಲಲ್ಲಿ ಲಕ್ಷ್ಮೀಗಿಡ
ಮನೆಯ ಹಿತ್ತಲಲ್ಲಿ ಲಕ್ಷ್ಮೀಗಿಡ
Publisher - Sahithya Prakashana
- Free Shipping Above ₹350
- Cash on Delivery (COD) Available*
Pages - 312
Type - Paperback
Couldn't load pickup availability
ಹಣ ಸಂಪಾದಿಸಬೇಕೆಂದರೆ, ಅದೃಷ್ಟ ಇರಬೇಕು. ಒಳ್ಳೆಯ ಶಿಕ್ಷಣ ಇರಬೇಕು. ಹೆಚ್ಚಿನ ತಿಳುವಳಿಕೆ, ಜ್ಞಾನ ಆವಶ್ಯಕ. ಒಬ್ಬ ಗಾಡ್ ಫಾದರ್ ಇರಬೇಕು. ದಯೆ ದಾಕ್ಷಿಣ್ಯಗಳನ್ನು ದೂರ ಇಡಬೇಕು. ಕಟುವಾಗಿರಬೇಕು. ಕೆಲವರಿಗಾದರೂ ಮೋಸಮಾಡಬೇಕು, ಲಂಚಕೊಡಬೇಕು ಅಥವಾ ಲಂಚ ತೆಗೆದುಕೊಳ್ಳಬೇಕು. ನೈತಿಕ ಮೌಲ್ಯಗಳನ್ನು ಬಿಟ್ಟುಬಿಡಬೇಕು, ಭಾವನಾತ್ಮಕವಾಗಿ ಇರಕೂಡದು. ಆತ್ಮೀಯರಿಂದ ದೂರವಾಗಿ ದಿನಕ್ಕೆ 26 ಗಂಟೆ ಕಷ್ಟಪಡಬೇಕು, - ಎನ್ನುವ ಅಭಿಪ್ರಾಯಗಳು ನಿಮಗಿದ್ದರೆ ಅದು ತಪ್ಪು, ಹಣ ಸಂಪಾದನೆಗೆ ಮೇಲಿನ ಯಾವುವೂ ಅಗತ್ಯವಿಲ್ಲ. ಒಂದು ಮಾತ್ರ ಬೇಕೇಬೇಕು. ಅದು ಏನು ಅನ್ನುವುದು ಈ ಪುಸ್ತಕದಲ್ಲಿದೆ.
ಹಣ ಇರುವವರೆಲ್ಲರೂ ಕೆಟ್ಟವರು, ಇಲ್ಲದವರು ಒಳ್ಳೆಯವರು, ಮನಸ್ಸು ಒಳ್ಳೆಯದಾಗಿದ್ದರೆ ಚಿಕ್ಕ ಗುಡಿಸಿಲಿನಲ್ಲಾದರೂ ಗಂಜಿ ಕುಡಿದು ಬದುಕಿರಬಹುದು- ಎನ್ನುವುದು ನಿಮ್ಮ ಅಭಿಪ್ರಾಯವಾಗಿದ್ದರೆ, ಈ ಪುಸ್ತಕವನ್ನು ಓದುವುದರಿಂದ ನಿಮಗೆ ಯಾವ ಉಪಯೋಗವೂ ಇಲ್ಲ. ಹಣ ಖರ್ಚು ಮಾಡಿಕೊಳ್ಳುವ ಅವಶ್ಯಕತೆ ಇಲ್ಲ.
ಯಾರೋ ಕಳ್ಳತನದಿಂದ ಕಾಪಿ ಮಾಡಿದ ಪಿಡಿಎಫ್ ಓದುವುದು ಒಳ್ಳೆಯದು.
ತಲತಲಾಂತರದಿಂದ ಬಡತನದಲ್ಲಿ ಬೆಂದುಹೋಗಿರುವ ಕುಟುಂಬದಲ್ಲಿ ಹುಟ್ಟುವುದು ನಿಮ್ಮ ಕೈಯಲ್ಲಿಲ್ಲ. ನಿಮ್ಮಿಂದಲೇ ಒಂದು ಶ್ರೀಮಂತ ಪರಪಂರೆಯನ್ನು ಪ್ರಾರಂಭಿಸುವುದು ನಿಮ್ಮ ಕೈಯಲ್ಲಿಯೇ ಇದೆ.
Don't Become Old Without Becoming Rich.
ಸಿಂಗಲ್ ಬೆಡ್ರೂಮಿನಿಂದ ಸ್ವಿಮ್ಮಿಂಗ್ ಪೂಲ್ ಇರುವ ಬೆಡ್ ರೂಮಿಗೆ.
ಯಂಡಮೂರಿ ವೀರೇಂದ್ರನಾಥ ಅವರಿಂದ ಒಂದು ಸ್ಫೂರ್ತಿದಾಯಕ, ಸಂವೇದನಾಶೀಲ ಕೃತಿ.
Share

Subscribe to our emails
Subscribe to our mailing list for insider news, product launches, and more.