ಗೌತಮ ಬುದ್ಧನಿಗೆ ಜ್ಞಾನೋದಯವಾದ ಕೂಡಲೇ ತನ್ನನ್ನು ನೋಡಿ ತಾನೇ ನಕ್ಕನು. 'ಇದು ಹಾಸ್ಯಾಸ್ಪದ' ಎಂದು ತನಗೆ ತಾನೇ ಹೇಳಿಕೊಂಡನು, ಸಾವಿರಾರು ಜನ್ಮಗಳಿಂದ ನಾನು ಹುಡುಕಾಡುತಿದ್ದ ಸಂಗತಿಯೂ ನನ್ನೊಳಗೇ ಇದೆ ಎಂದು ಹೇಳಿಕೊಂಡನು.
ಹುಡುಕುವವನಲ್ಲಿಯೇ ಹುಡುಕುತ್ತಿರುವುದು ಇದೆ. ಅದನ್ನ ಹುಡುಕುವ ಪದ್ಧತಿಗೆ ಉಪನಿಷತ್ತುಗಳು ನೇತಿ, ನೇತಿ ಎನ್ನುತ್ತೇವೆ. ನೇತಿ ಎಂದರೆ ಇದೂ ಅಲ್ಲ ಅಥವಾ ಅದೂ ಅಲ್ಲ, ಕೇವಲ ತೆಗೆಯುವ ಪ್ರಕ್ರಿಯೆ, ನಿರಾಕರಣೆಯೇ, ವರ್ಜಿಸುವುದೇ ಪದ್ಧತಿ ಕಡೆಗೆ, ವರ್ಜಿಸಲು ಏನೂ ಇಲ್ಲದಾದಾಗ, ನಿಮ್ಮನ್ನು ನೀವು ಖಾಲಿ ಮಾಡಿಕೊಂಡಾಗ, ಅದು ದೊರಕುತ್ತದೆ.