Padachihna
ಮನಸು ಜೋಪಾನ
ಮನಸು ಜೋಪಾನ
Publisher - ಸಾವಣ್ಣ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 164
Type - Paperback
Couldn't load pickup availability
ಕೆಲವೊಮ್ಮೆ ಅಂದುಕೊಂಡಿದ್ದು ಅಂದುಕೊಂಡಂತೆ ಆಗುವುದಿಲ್ಲ. ಯಾರೋ ಹೇಳಿದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇನ್ಯಾರೋ ಹೇಳಿದ ಮಾತು ಮುಖ್ಯ ಎಂದೆನಿಸುವುದಿಲ್ಲ. ನೋಡಿದ ಸಿನಿಮಾ, ಓದಿದ ಕಥೆ, ಜೊತೆಯಾಗಿ ನಡೆವ ಸಂಗಾತಿ, ತಟ್ಟೆಗೆ ಹಾಕಿದ ಕೇಸರಿಬಾತ್, ಚರವಾಣಿಗೆ ಬಂದ ಸಂದೇಶ, ಜೋರಾಗಿ ಕೇಳಿಸುವ ಹಾಡು, ಸುರಿವ ಮಳೆ, ಸುಡುವ ಬಿಸಿಲು, ಕವಿದ ಮೋಡ, ಬೆಳಗಿನ ಮಂಜು, ಇರುಳಿನ ಕನಸು, ಇಟ್ಟ ಹೆಜ್ಜೆ, ನಡೆವ ದಾರಿ ಯಾವುದೂ ಮನಸ್ಸಿಗೆ ಹಿಡಿಸುವುದಿಲ್ಲ. ಇಡೀ ಪ್ರಕೃತಿ, ಕಾಲ ನನ್ನ ವಿರುದ್ಧ ಇದೆ ಎಂದೆನಿಸುತ್ತದೆ. ಆಗ ಕಾಡುವ ಭಯ, ಕುಗ್ಗುವ ಆತ್ಮವಿಶ್ವಾಸ, ಆಡದ ಮಾತು, ಉಳಿಯುವ ಕಣ್ಣೀರು ಎಲ್ಲವೂ ಇನ್ನಷ್ಟು ನೋವು ನೀಡುತ್ತವೆ. ಸುತ್ತಲೂ ಕರ್ಕಶ ಗಲಾಟೆ ಇರುವಾಗ ಕಣ್ಮುಚ್ಚಿ ನಿಟ್ಟುಸಿರು ಬಿಟ್ಟಾಗ ಒಂದು ಪಿಸು ಧ್ವನಿ ಕೇಳಿಸುತ್ತದೆ.
ಮನಸ್ಸು ಮಾತನಾಡುತ್ತದೆ.
ಆ ಮಾತು ಕೇಳಿಸಿಕೊಳ್ಳಬೇಕು.
ಅದರ ಜೊತೆ ಸಮಯ ಕಳೆಯಬೇಕು.
ಅದು ಸೂಕ್ಷ್ಮ, ನಾಜೂಕು.
ಯಾರೂ ಇಲ್ಲದಾಗ ಜೊತೆ ಇರುವುದು ಅದೇ.
ಆಪ್ತ ಸ್ನೇಹಿತ ಹಾಗೂ ಬದ್ಧ ವೈರಿ ಎರಡೂ ಅದೇ.
ನೋವು ಮತ್ತು ನೆಮ್ಮದಿ ಎರಡೂ ನೀಡುವುದು ಅದೇ ಮನಸ್ಸು.
ಆ ಮನಸ್ಸು ಜೋಪಾನ!
Share

Subscribe to our emails
Subscribe to our mailing list for insider news, product launches, and more.