Seenu Ramasamy, To Kannada : Dr. Malarvili. K, Madhumita
ಮಳೆ ಕುಡಿವ ನಗರ
ಮಳೆ ಕುಡಿವ ನಗರ
Publisher - ಪಂಚಮಿ ಪಬ್ಲಿಕೇಷನ್ಸ್
- Free Shipping Above ₹250
- Cash on Delivery (COD) Available
Pages - 376
Type - Paperback
Couldn't load pickup availability
ಸೀನು ರಾಮಸಾಮಿ ಅವರ ಕವಿತೆಗಳು ಈಗಿನ ಆಧುನಿಕ ಕಾವ್ಯ ನಿರೂಪಣೆಯ ಚೌಕಟ್ಟಿನಲ್ಲಿ ರಚಿಸಲ್ಪಟ್ಟಿವೆ. ಕವಿತೆಗಳನ್ನು ಈ ಮಾನದಂಡ, ಅಳತೆಯಲ್ಲಿಯೇ ಬರೆಯಬೇಕು ಎಂಬ ಯಾವ ವಿಧಾನಗಳನ್ನು ಅಂಟಿಸಿಕೊಳ್ಳದೇ ತಮಗನಿಸಿದ ರೀತಿಯಲ್ಲಿಯೇ ಕವಿತೆಗಳನ್ನು ಸಹಜವಾಗಿ ಕಟ್ಟುವ ಪ್ರಯತ್ನ ಮಾಡಿರುವುದನ್ನು ಇಲ್ಲಿ ಕಾಣಬಹುದಾಗಿದೆ. ಅವರ ರಚನೆಯಲ್ಲಿ ತಮಿಳುನಾಡಿನ ಪ್ರಸ್ತುತ ವಾತಾವರಣ, ಅಲ್ಲಿನ ರಾಜಕೀಯ ಚಿಂತನೆಗಳು, ಅವುಗಳೊಂದಿಗಿನ ಜನಸಾಮಾನ್ಯರ ಬದುಕು ಜೊತೆಗೆ ವೈರುಧ್ಯದ ಹೋರಾಟ, ತಾವಿರುವ ಸಿನಿಮಾ ಕ್ಷೇತ್ರ, ಎಲ್ಲವೂ ಅವರ ಕವಿತೆಗಳ ವಸ್ತುಗಳಾಗಿವೆ. ಆಯಾ ಕಾಲಘಟ್ಟದ ಸಾಮಾಜಿಕ ಚಿತ್ರಣಕ್ಕೂ ಅವರದ್ದೇ ಆದ ನಿಲುವುಗಳಿವೆ. ಸಂಘರ್ಷದಲ್ಲಿ ಉದ್ಭವಿಸಿದ ಪ್ರಶ್ನೆಗಳು ಅವರ ಕವಿತೆಯಲ್ಲಿ ಉತ್ತರಗಳಾಗಿವೆ. ಪ್ರಸಿದ್ಧ ಆಂಗ್ಲಕವಿ ಪಿಬಿ ಶೆಲ್ಲಿ"Poets are the unacknowledged legislators of the world' ಎಂದು ಹೇಳುತ್ತಾನೆ. ಅದರಂತೆಯೇ ತಮ್ಮ ಕವಿತೆಯ ಮೂಲಕ ತಾವಿರುವ ನಗರ ಕೇಂದ್ರಿತ ಬದುಕು, ಇಂದಿನ ಹೋರಾಟ, ಸಮಾಜವನ್ನು ದಾಖಲಿಸುವ ಕವಿಗಳಲ್ಲಿ ಸೀನು ರಾಮಸಾಮಿ ಕೂಡ ಒಬ್ಬರಾಗಿ ಗಮನ ಸೆಳೆಯುತ್ತಾರೆ.
-ಶ್ರೀಧರ ಬನವಾಸಿ
Share


Subscribe to our emails
Subscribe to our mailing list for insider news, product launches, and more.