Roopa Pai
ಮಕ್ಕಳಿಗಾಗಿ ವೇದಗಳು ಮತ್ತು ಉಪನಿಷತ್ತುಗಳು
ಮಕ್ಕಳಿಗಾಗಿ ವೇದಗಳು ಮತ್ತು ಉಪನಿಷತ್ತುಗಳು
Publisher - ಸಪ್ನ ಬುಕ್ ಹೌಸ್
- Free Shipping Above ₹250
- Cash on Delivery (COD) Available
Pages - 443
Type - Paperback
ಮೂರು ಸಾವಿರ ವರುಷಗಳ ಹಿಂದೆ, ಭಾರತದ ದಟ್ಟ ಅರಣ್ಯಗಳ ನಡುವೆ ಮಹಾನ್ 'ವಿಚಾರ ಕ್ರಾಂತಿ'ಯೊಂದು ಬಲ ಪಡೆಯುತ್ತಿತ್ತು.
ಅರಣ್ಯದ ಆ ಪ್ರಯೋಗಾಲಯ'ಗಳಲ್ಲಿಧೀಮಂತ ಚಿಂತಕರು- ತತ್ವಜ್ಞಾನಿಗಳು ವಿಶ್ವದ ಬಗ್ಗೆ ಆಳವಾದ ಚಿಂತನೆ ನಡೆಸಿದರು, ವೇದಗಳು ಎಂದು ಕರೆಯಲ್ಪಡುವ ಪ್ರಾಚೀನ ಶಾಸ್ತ್ರಗಳ ಬಗ್ಗೆ ವಿಚಾರಮಂಥನ ನಡೆಸಿದರು. ತನ್ಮೂಲಕ ಇಂದಿಗೂ ಸ್ಪಷ್ಟ ಉತ್ತರ ದೊರೆಯದ ಹಲವಾರು ಪ್ರಶ್ನೆಗಳಗೆ ವಿಸ್ಮಯಕಾರಿ ಒಳನೋಟ ಕಂಡುಕೊಂಡರು. ಆ ಪ್ರಶ್ನೆಗಳಾದರೋ ಯಾವುವು?
-ಈ ವಿಶ್ವವು ಯಾವುದರಿಂದ ಮಾಡಲ್ಪಟ್ಟದೆ?
-ವೃಕ್ಷವೊಂದನ್ನು ಕಂಡಾಗ ಅದನ್ನು ನೋಡುತ್ತಿರುವೆನೆಂದು ನನಗೆ ಗೊತ್ತಾಗೋದು ಹೇಗೆ?
ನಾನು ಯಾರು? ನನ್ನ ಶರೀರವೇ, ನನ್ನ ಮನಸ್ಸೇ, ನನ್ನ ಬುದ್ಧಿಶಕ್ತಿಯೇ, ನನ್ನ ಭಾವನೆಗಳೇ ಅಥವಾ ಇವು ಯಾವುವೂ ಅಲ್ಲವೇ?
ತಾವು ಕಂಡುಕೊಂಡ ಈ ಸೋಜಿಗದ ವಿಚಾರಗಳನ್ನು ಆ ಧೀಮಂತರು ಸಾದರಪಡಿಸಿದ್ದಾದರೂ ಹೇಗೆ?
ಉಪನಿಷತ್ತುಗಳೆಂಬ ವಿಸ್ತಾರವಾದ ರೋಮಾಂಚಕಾರಿ ಸಾಹಿತ್ಯದಲ್ಲಿ ಮತ್ತು ಚಿತ್ತಾಕರ್ಷಕ ಮೌಖಿಕ ಸಾಹಿತ್ಯದಲ್ಲ! ಗೊಂದಲವೆನಿಸುತ್ತಿದೆಯೇ? ಅಂಥ ಭಯ ಬೇಡ! ಏಕೆಂದರೆ, ಇದೇ ಮೊದಲ ಬಾರಿ ಓದುವವರಿಗೆ ಅರ್ಥವಾಗುವ ರೀತಿಯಲ್ಲಿ ರೂಪಾ ಪೈ ಅವರು ವೇದಗಳು ಮತ್ತು ಉಪನಿಷತ್ತುಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಲೇಖಕಿ ರಾಜೇಶ್ವರಿ ಜಯಕೃಷ್ಣ ಅವರು ಇಂಗ್ಲಿಷ್‌ನಿಂದ ಕನ್ನಡಕ್ಕೆ ಸರಳವಾಗಿ ಅನುವಾದಿಸಿದ್ದಾರೆ. ಎಲ್ಲರನ್ನೂ ಓದಿಸಿಕೊಂಡು ಹೋಗುವಂತಿದೆ ಈ ಕೃತಿ.
ನೀವಿನ್ನೂ ಓದಿಲ್ಲವೇ? ಇನ್ನೇಕೆ ತಡ?
Share
Swamy
Subscribe to our emails
Subscribe to our mailing list for insider news, product launches, and more.