Nadahalli Vasanth
ಮಹಿಳೆಯರಿಗೆ ಮಾತ್ರವಲ್ಲ!
ಮಹಿಳೆಯರಿಗೆ ಮಾತ್ರವಲ್ಲ!
Publisher - ವೀರಲೋಕ ಬುಕ್ಸ್
- Free Shipping Above ₹300
- Cash on Delivery (COD) Available
Pages - 146
Type - Paperback
Couldn't load pickup availability
ಮಹಿಳೆಯ ಮನಸ್ಸು ಮತ್ತು ಆ ಮನಸ್ಸನ್ನು ರೂಪಿಸುವ ಸಾಮಾಜಿಕ ನೆಲೆ ಎರಡನ್ನೂ ಒಂದರೊಡನೊಂದು ಬೆಸೆದು ಬರೆದ ಹೊತ್ತಗೆ ಇದಾಗಿದೆ. ತಮ್ಮ ವೃತ್ತಿಯಲ್ಲಿ ಇದಿರಾದ ಹಲವಾರು ಸವಾಲುಳ್ಳ ಸಮಸ್ಯೆಗಳ ಸಿಕ್ಕುಗಳನ್ನು ಸಾವಧಾನದಿಂದ ಬಿಡಿಸುತ್ತಲೇ, ಇದೇಕೆ ಹೀಗೆ? ಎಂದು ಚಿಂತಿಸಿದ ಸೂಕ್ಷ್ಮ ಮನಸ್ಸಿನ ಫಲವೂ ಇದಾಗಿದೆ. ಈ ಕೃತಿಯುದ್ದಕ್ಕೂ ಮಹಿಳೆಯನ್ನು ನಿರ್ಬಂಧಿಸಿದ ಸಾಮಾಜಿಕ ರಚನೆಯಿಂದಾಗಿ ಅವಳ ಮನಸ್ಪೂ ಕೂಡಾ ಹೇಗೆ ನಿರ್ಬಂಧಕ್ಕೆ ಒಳಗಾಗಿದೆ ಮತ್ತು ಆಕೆಯೇ ಹೇಗೆ ಅದರಿಂದ ಹೊರಬರುವ ದಾರಿಯಿದ್ದರೂ ಸಂಕೋಲೆಯೊಳಗೇ ಅಡಗಿ ಕುಳಿತುಕೊಳ್ಳುತ್ತಾಳೆ ಎಂಬುದನ್ನು ಅನಾವರಣ ಮಾಡಲಾಗಿದೆ.
-ಡಾ. ಸಬಿತಾ ಬನ್ನಾಡಿ
ನಡಹಳ್ಳಿಯವರು ಅಂಗರಾಜಕಾರಣ ಹಾಗೂ ಸಾಂಸ್ಕೃತಿಕ ರಾಜಕಾರಣದ ವರಸೆಗಳನ್ನು ಅರಿತವರು. ಹೆಣ್ಣು ಗಂಡಿನ ನಡುವಿನ ಅಧಿಕಾರ ಹಾಗೂ ಅಧೀನತೆಯ ಸಂಬಂಧಗಳ ಚಾರಿತ್ರಿಕ ವಿನ್ಯಾಸವನ್ನು ಗುರುತಿಸುವ ಅಧ್ಯಯನಪೂರ್ಣತೆ ಅವರಲ್ಲಿದೆ. ಇಂದು ಮನೋಚಿಕಿತ್ಸಕರಿಗೆ ಬೇಕಾಗುವ ಅಂತರಶಿಸ್ತೀಯ ಜ್ಞಾನದ ನೆಲೆಗಳು ಅವರಲ್ಲಿವೆ. ಆದ್ದರಿಂದಲೇ ಅವರು ಪೂರ್ವಗ್ರಹಗಳನ್ನು ಕಳಚುವಂತೆ ಬರೆಯಬಲ್ಲರು. ಅವರಲ್ಲೊಂದು ಹೆಣ್ಣು ನೋಟವಿದೆ. ಅದರೆ ಅದು ಪಾರ್ಶಿಕವಾದದ್ದಲ್ಲ. ಅವಳ ಮೌನವನ್ನು, ಅವಳ ದ್ವಂದ್ವಗಳನ್ನು ಸಹಾನುಭೂತಿಯಿಂದ ಹಾಗೂ ನಿಖರವಾಗಿ ಅರಿಯಬಲ್ಲ ಒಳನೋಟದಿಂದ ಕಟ್ಟಿಕೊಂಡ ನೋಟವದು. ತನ್ನ ಸುತ್ತ ತಾನೇ ಕಟ್ಟಿಕೊಂಡ ಕೋಟೆಗಳನ್ನು ದಾಟಿ ಹೊರಬರಲು ಅವಳನ್ನು ಹೋರಾಡುವಂತೆ ಮಾಡುವ ಬರಹವಿದು. ಈ ಬರಹವು ನೊಂದ ಹೆಣ್ಣು ಜೀವಗಳಿಗೆ ಇದು ನಮ್ಮದೇ ಸುಯ್ಲು ಎಂದು ಅನಿಸುವಷ್ಟು ಅಧಿಕೃತವಾಗಿದೆ. ಸಮಸ್ಯೆಗಳನ್ನು ಚರ್ಚಿಸಿ ಚರ್ಚಿಸಿ ಸೋತ ವಾದಗಳಿಗೆ ಪರಿಹಾರದ ಬೆಳಕನ್ನು ಒಳಗಿನಿಂದ ಹುಟ್ಟಿಸಿಕೊಳ್ಳುವ ದಾರಿಯೊಂದನ್ನು ಇವು ತೆರೆಯುತ್ತಿರುವುದರಿಂದ ಅನನ್ಯವಾಗಿವೆ.
-ಡಾ. ಗೀತಾ ವಸಂತ
Share


Subscribe to our emails
Subscribe to our mailing list for insider news, product launches, and more.