Madhukar Yakkundi
ಕುಮಾರವ್ಯಾಸ ಭಾರತ
ಕುಮಾರವ್ಯಾಸ ಭಾರತ
Publisher - ಸಾಹಿತ್ಯ ಭಂಡಾರ
- Free Shipping Above ₹400
- Cash on Delivery (COD) Available*
Pages - 176
Type - Paperback
Couldn't load pickup availability
ಕುಮಾರವ್ಯಾಸನ ಭಾರತ ಅವನೇ ಹೇಳುವಂತೆ ಹಲವು ಕಥೆಗಳ ಪ್ರಸಂಗಗಳ ಸುಂದರ ಕಥಾ ಗುಚ್ಚ. ಒಂದೊಂದು ಪ್ರಸಂಗವನ್ನು ಸುಂದರ ಕಥೆಯ ರೂಪದಲ್ಲಿ ಕಟ್ಟಿಕೊಟ್ಟಿರುವನು. ಕವಿ ಕಟ್ಟಿಕೊಟ್ಟ ಕಥಾಗುಚ್ಚದ ಕಥೆಗಳನ್ನು ಆತನ ಮಾತುಗಳನೊಡನೆ ಗದ್ಯದಲ್ಲಿ ಬಿಡಿಬಿಡಿಯಾಗಿ ಹೇಳಲು ಇಲ್ಲಿ ಪ್ರಯತ್ನ ಮಾಡಲಾಗಿದೆ. ಎಂಟೂವರೆ ಸಾವಿರ ಪದ್ಯಗಳ ಬೃಹತ್ ಕಾವ್ಯವನ್ನು ಓದಿ ಆನಂದಿಸುವದು ತುಂಬ ಕಷ್ಟಸಾಧ್ಯ ಸಾಮಾನ್ಯ ಓದುಗರಿಗೆ. ಬಿಡಿಭಾಗದಲ್ಲಿ ಸಮಗ್ರ ಕಾವ್ಯದ ಪರಿಚಯವನ್ನು ಮಾಡಿಕೊಡಲು ಪ್ರಯತ್ನ ಮಾಡಿರುವೆ. ಮೂಲ ಕಾವ್ಯ ಓದುವ ಆಸಕ್ತಿ ಇದರಿಂದ ಬೆಳೆಯಬಹುದೆಂಬ ಆಸೆಯಿಂದ ಈ ಪ್ರಯತ್ನ ಮಾಡಲಾಗಿದೆ. ಕುಮಾರವ್ಯಾಸ ಭಾರತವನ್ನು ಮೆಚ್ಚುವವರು ಈ ನಮ್ಮ ಪ್ರಯತ್ನವನ್ನು ಸ್ವಾಗತಿಸುವರೆಂದು ಆಶಿಸುತ್ತೇವೆ. ಕುಮಾರವ್ಯಾಸ ಭಾರತ ಎಲ್ಲ ರೀತಿಯ ಓದುಗರನ್ನು ಮೊದಲಿನಿಂದಲೂ ಆಕರ್ಷಿಸಿದೆ. ಅದರಂತೆಯೇ ನಮ್ಮ ಈ ಪ್ರಯತ್ನ ಓದುಗರನ್ನು ರಂಜಿಸುವದೆಂದು ನಂಬಿರುವೆವು.
-ಮಧುಕರ ಯಕ್ಕುಂಡಿ
Share

Subscribe to our emails
Subscribe to our mailing list for insider news, product launches, and more.