Skip to product information
1 of 1

Rangaraju Nagavara

ಕವಿತೆಯ ಕಥೆ

ಕವಿತೆಯ ಕಥೆ

Publisher - ಸಪ್ನ ಬುಕ್ ಹೌಸ್

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
ರಂಗರಾಜು ಕವಿತೆಯನ್ನು ಬರೆಯುವ ಆಸೆ ಉಳ್ಳವರು, ಎಲ್ಲ ಒಳ್ಳೆಯ ಕವಿಗಳಂತೆ ಒಳ್ಳೆಯ ಕವಿತೆ ಬರೆಯಲು ಅವರಿಗೆ ಆಸೆ... ಆದರೆ ಅವರ ಆಸೆ ತೀರುವಳಿ ಆಗುತ್ತಿಲ್ಲ. ಇದರಿಂದ ಅವರು ತುಂಬಾ ನೊಂದಿದ್ದಾರೆ. ರಂಗರಾಜು ಕನ್ನಡ ಚೆನ್ನಾಗಿ ಬಲ್ಲರು, ಭಾಷೆಯನ್ನು ಅವರು ಸುಂದರವಾಗಿ ಬಳಸುತ್ತಾರೆ... ತಪ್ಪು ಭಾಷೆ ಬಳಸುವುದಿಲ್ಲ. ಜೀವನದಲ್ಲಿ ಒಳ್ಳೆಯ ಹುದ್ದೆಯಲ್ಲಿ ದುಡಿದು ಒಳ್ಳೆಯ ಹೆಸರು ಮಾಡಿದ್ದಾರೆ. ಆದರೆ ಅವರಿಗೆ ಒಳ್ಳೆಯ ಕವಿತೆ ಬರೆಯಬೇಕೆಂಬ ಆಸೆ. ಅದು ಆಗಿಲ್ಲವಲ್ಲ ಎಂಬುದು ಅವರ ದುಃಖ,

ಕವಿತೆ ಬರೆಯುವ ಯಾವ ಸುಲಭ ಮಾರ್ಗವೂ ಇಲ್ಲ. ಅದು ರಂಗರಾಜು ಅವರಿಗೆ ಗೊತ್ತಿದೆ. ಅವರು ಬರೆಯಬೇಕಾದ ಕವಿತೆಯನ್ನು ಈ ಮೊದಲೇ ಯಾರೂ ಬರೆದಿರುವುದಿಲ್ಲ. ಅದು ತೀರ ಹೊಸದಾಗಿ ಮೈತಾಳ ಬೇಕಾಗಿದೆ. ಅದಕ್ಕೆ ಬೇಕಾದ ಪೂರ್ವತಯಾರಿಗಳನ್ನು ರಂಗರಾಜು ನಡೆಸಿಕೊಂಡು ಬಂದಿದ್ದಾರೆ.

'ಕವಿತೆಯ ಕಥೆ' ಎಂಬ ಈ ಸಂಗ್ರಹದಲ್ಲಿ ಅಂತಹ ಕೆಲವು ತಯಾರಿಗಳಿವೆ. ನನ್ನ ನಿರೀಕ್ಷೆಯಂತೆ ಬೇಗ ರಂಗರಾಜು ಒಂದು ಸೊಗಸಾದ ಕವಿತೆ ಬರೆಯುತ್ತಾರೆ. ಇದು ನಿಮ್ಮ ಬಹು ಸುಂದರ ಕವಿತೆ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ಯಶಸ್ಸು ಸಫಲತೆಗಳನ್ನು ಹೃತ್ತೂರ್ವಕವಾಗಿ ಹಾರೈಸುತ್ತೇನೆ.

- ಎಚ್. ಎಸ್. ವಿ.
View full details

Talk about your brand

Share information about your brand with your customers. Describe a product, make announcements, or welcome customers to your store.