Yashawantha Chittala
ಕತೆಯಾದಳು ಹುಡುಗಿ
ಕತೆಯಾದಳು ಹುಡುಗಿ
Publisher -
- Free Shipping Above ₹300
- Cash on Delivery (COD) Available
Pages - 100
Type - Paperback
Couldn't load pickup availability
ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ: ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ; ಮಹಾರಾಷ್ಟ್ರದ ಗೌರವ ಪುರಸ್ಕಾರಗಳನ್ನು ಪಡೆದ ಕನ್ನಡದ ಶ್ರೇಷ್ಠ ಕಥಾಸಂಕಲನ
ಚಿತ್ತಾಲರಿಗೇ ವಿಶಿಷ್ಟವಾದ – 'ಚಿತ್ತಾಲತನದ ಮುದ್ರೆ ಬಿದ್ದ' - ಅವರ ಕಥನಕೌಶಲ್ಯದ ಒಂದು ಘಟ್ಟ 'ಸಂದರ್ಶನ', 'ಆಬೋಲಿನ'ಗಳಲ್ಲಿ ಆಕಾರ ಪಡೆಯುತ್ತ 'ಆಟ'ದಲ್ಲಿ ಉಚ್ಚಾಂಕವನ್ನು ಮುಟ್ಟಿತ್ತು. ಆನಂತರದ ಕಾಲದಲ್ಲಿ ಫಲಿಸಿದ ಇಲ್ಲಿಯ ಕತೆಗಳು ಅವರ ಬರವಣಿಗೆಯ ಇನ್ನೊಂದು ಮಹತ್ವದ ಘಟ್ಟದ ಆರಂಭವನ್ನು ಸೂಚಿಸುತ್ತವೆ.
ದಟ್ಟ ಅನುಭವಗಳ ಸೂಕ್ಷ್ಮಾತಿಸೂಕ್ಷ್ಮಗಳನ್ನು ಹಿಡಿಯಲು ತವಕಿಸುವ ಸಂಕೀರ್ಣತೆ ಹಾಗೂ ಜೀವಂತ ಭಾವನೆಗಳಲ್ಲಿ ಹುಟ್ಟಿಬರುವ ಸಾಂಕೇತಿಕತೆ, ಇವುಗಳ ಜೊತೆಗೇ ಚಿತ್ತಾಲರ ಆಸ್ಥೆಗಳ ಕ್ಷಿತಿಜವೂ ಅತ್ಯಂತ ವಿಸ್ತಾರಗೊಂಡದ್ದನ್ನು ಕಾಣಿಸುವ ಈ ಕತೆಗಳು ವೈವಿಧ್ಯಪೂರ್ಣವಾದ, ಕೆಲವು ವಿಷಯಗಳಲ್ಲಿ ಕನ್ನಡಕ್ಕೇ ಹೊಸತೆನ್ನಿಸುವ ಪ್ರಯೋಗಗಳಾಗಿವೆ...
...ಸೃಜನಶೀಲ ಕಲ್ಪಕತೆ ಹಾಗೂ ಚಿಂತನೆಗಳಲ್ಲಿ ದೃಷ್ಟಿಗೋಚರವಾದ ಮನುಷ್ಯ ಸಾಧ್ಯತೆಗಳಿಂದ ಪುಲಕಿತಗೊಂಡ, ಜೊತೆಗೇ ಬದುಕಿನ ಆನಂತ ರಹಸ್ಯಗಳ ಬಗ್ಗೆ ಬೆರಗು ತುಂಬಿದ ಪ್ರೀತಿಯುಳ್ಳ ಮನಸ್ಸೆಂದು ಇಲ್ಲಿ ಕಾರ್ಯಪ್ರವೃತ್ತವಾಗಿದೆ.
ಕನ್ನಡ ಕಥಾಪ್ರಪಂಚದಲ್ಲಿ 'ಆಟ'ದಂತೆ 'ಕತೆಯಾದಳು ಹುಡುಗಿ' ಕೂಡ ಒಂದು ಅತ್ಯಂತ ಗಟ್ಟಿಯಾದ ಮಹತ್ವದ ಕೃತಿ.
-ಡಾ. ಶಾಂತಿನಾಥ ದೇಸಾಯಿ
Share


Subscribe to our emails
Subscribe to our mailing list for insider news, product launches, and more.