1
/
of
1
Vijaya Karnataka
ಕಥಾ ಪಲ್ಲವ - ಟಾಪ್ 25 ಕಥೆಗಳು
ಕಥಾ ಪಲ್ಲವ - ಟಾಪ್ 25 ಕಥೆಗಳು
Publisher - ಸ್ನೇಹ ಬುಕ್ ಹೌಸ್
Regular price
Rs. 195.00
Regular price
Rs. 195.00
Sale price
Rs. 195.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ಕಥನ ಪ್ರಕಾರವು ಕಾವ್ಯ ಪ್ರಕಾರದಷ್ಟೇ ಅನೇಕ ಬಗೆಯ ಪ್ರಯೋಗಗಳಿಗೆ ಒಳಗಾಗುತ್ತಿರುವ ಸಂಕರದ ಕಾಲಘಟ್ಟ ಇದು. ಹಾಗೆ ನೋಡಿದರೆ ಕಾಲದ ಚಲನಗಳನ್ನು ಕಾವ್ಯಕ್ಕಿಂತ ಮೊದಲೇ ಹಿಡಿಯುವ ತವಕದಲ್ಲಿ ಕಥನ ಪ್ರಕಾರವು ಇರುತ್ತದೆ ಎನ್ನುವುದು ಒಪ್ಪಬೇಕಾದ ಮಾತೇ ಅನಿಸುತ್ತದೆ. ಪಠ್ಯವನ್ನು ಕಲಾಪಠ್ಯವಾಗಿಸುವಲ್ಲಿ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕ್ರ್ತಿಕ ನಿರೂಪಣೆಗಳಾಗಿಸುವುದರಲ್ಲಿಯೇ ಹೆಚ್ಚಿನ ಆಸಕ್ತಿ ಇದ್ದುದು ಕಾವ್ಯಜೀವಿಗಳಿಗೆ ತುಸು ನಿರಾಸೆಯನ್ನೇ ಉಂಟುಮಾಡಿತ್ತು. ಈ ವಾಸ್ತವವು ಕಳೆದರಡು-ಮೂರು ದಶಕಗಳಿಂದ ಬದಲಾಗುತ್ತಿರುವುದು ಚೇತೋಹಾರಿಯಾದ ಸಂಗತಿಯಾಗಿದೆ. ಈ ಸ್ವಾಗತಾರ್ಹ ಬೆಳವಣಿಗೆಗೆ ಈ ಬಾರಿ ಕಥಾಸ್ಪರ್ಧೆಗೆ ಬಂದ ಕಥೆಗಳಲ್ಲಿಯೂ ಆಧಾರಗಳಿದ್ದವು ಎನ್ನುವುದು ಸಂತೋಷದ ಸಂಗತಿ, ಬರೆದ ಬರಹಗಳ ಎದುರಿಗೆ ಬರೆಸಿಕೊಂಡ ಬರಹಗಳು ಅಪ್ಪಟವಾಗಿ, ನಿತ್ಯನೂತನವಾಗಿ ಕಾಣುತ್ತವೆ. ಸಮಕಾಲೀನ ಕಥೆಗಾರರು ಈ ಅಂಶದ ಬಗೆಗೆ ತುಸು ಹೆಚ್ಚೇ ಗಮನ ಕೊಡಬೇಕೆಂದು ಅನ್ನಿಸುತ್ತದೆ. ಇದಕ್ಕೆ ಕಾರಣವೆಂದರೆ ಪ್ರಯೋಗಶೀಲತೆಯ ಮೆಚ್ಚುಗೆಯ ಜೊತೆಯಲ್ಲೇ ಒತ್ತಿ ಇಟ್ಟು ಮಾಡಿದ ಹಣ್ಣಿನ ಹಾಗಿರುವ ಅನೇಕ ಕಥೆಗಳು ಇಲ್ಲಿದ್ದವು ಎನ್ನುವುದು. ಕಥೆಯನ್ನು ಕಟ್ಟುವ ಅಸಲು ಕಸುಬುದಾರಿಕೆಯ ಬಗೆಗಿನ ಎಚ್ಚರವೂ ಬರವಣಿಗೆಯನ್ನು ಕುರಿತ ಉತ್ಮಟ ಪ್ರೀತಿಯಷ್ಟೇ ಮುಖ್ಯವಾದುದು ಎನ್ನುವುದನ್ನು ಮರೆಯಲಾಗದು.
Share
Subscribe to our emails
Subscribe to our mailing list for insider news, product launches, and more.