Skip to product information
1 of 1

Dr. H. S. Mohan

ಕರೋನಾ ವಿವಿಧ ಮುಖಗಳು

ಕರೋನಾ ವಿವಿಧ ಮುಖಗಳು

Publisher - ರವೀಂದ್ರ ಪುಸ್ತಕಾಲಯ

Regular price Rs. 230.00
Regular price Rs. 230.00 Sale price Rs. 230.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಸಾಮಾನ್ಯ ಜನರ ಜೀವನಕ್ಕೆ ಹತ್ತಿರವಾದ ವೈವಿಧ್ಯಮಯ ವೈದ್ಯಕೀಯ ವಿಷಯಗಳ ಬಗೆಗೆ ಸರಳವಾಗಿ ಸ್ವಾರಸ್ಯವಾಗಿ ಬರೆಯುವುದರಲ್ಲಿ ಡಾ. ಎಚ್. ಎಸ್. ಮೋಹನ್ ಅಗ್ರಗಣ್ಯರು. ಖ್ಯಾತ ನೇತ್ರ ತಜ್ಞರೂ, ನಾಡಿನ ಹಿರಿಯ ವೈದ್ಯಕೀಯ ಲೇಖಕರೂ ಆದ ಇವರ 3000ಕ್ಕೂ ಹೆಚ್ಚಿನ ಲೇಖನಗಳು ಕನ್ನಡದಲ್ಲಿ ಹಾಗೂ 1000ಕ್ಕೂ ಹೆಚ್ಚಿನ ಇಂಗ್ಲೀಷ್ ಲೇಖನಗಳು ಪ್ರಕಟವಾಗಿವೆ. 21 ಪುಸ್ತಕಗಳು ಪ್ರಕಟವಾಗಿವೆ. (ವಿವರಗಳು ಒಳಪುಟದಲ್ಲಿವೆ.) ಅಲ್ಲದೆ ವಿಜಯವಾಣಿ ಪತ್ರಿಕೆಯಲ್ಲಿ ವೈದ್ಯ ವೈವಿಧ್ಯ ಅಂಕಣವನ್ನು 5 ವರ್ಷಗಳ ಕಾಲ ಹಾಗೂ ಈಗ ವಿಶ್ವವಾಣಿ ಪತ್ರಿಕೆಯಲ್ಲಿ ಅದೇ ಹೆಸರಿನ ಅಂಕಣವನ್ನು ಜೂನ್ 2020 ರಿಂದ ಈಗಲೂ ಬರೆಯುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹೊಸಬಾಳೆಯವರಾದ ಇವರು ಎಂ.ಬಿ.ಬಿ.ಎಸ್, ಡಿ.ಓ.ಎಂ.ಎಸ್, ಎಂ.ಎಸ್ . (ಆಫ್ತಲ್ಮಾಲಜಿ) ಪದವೀಧರರು. ಕೆಎಂಸಿ ಮಣಿಪಾಲದಲ್ಲಿ 7 ವರ್ಷಗಳ ಕಾಲ ಉಪನ್ಯಾಸಕರಾಗಿದ್ದರು. ಈಗ ಕಳೆದ 32 ವರ್ಷಗಳಿಂದ ಸಾಗರದಲ್ಲಿ ವಿಜಯ ಕಣ್ಣಿನ ಚಿಕಿತ್ಸಾಲಯ ನಡೆಸುವುದಲ್ಲದೆ ವಿಜಯ ಸೇವಾ ಟ್ರಸ್ಟ್ (ರಿ) ಎಂಬ ಸೇವಾ ಸಂಸ್ಥೆ ಸ್ಥಾಪಿಸಿ ಕಳೆದ 26 ವರ್ಷಗಳಿಂದ ಆರೋಗ್ಯ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ (ಯಕ್ಷಶ್ರೀ) ರಂಗಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. 66 ವರ್ಷದ ಇವರು ಭಾರತೀಯ ವೈದ್ಯಕೀಯ ಸಂಘ, IMA ಕನ್ನಡ ವೈದ್ಯ ಬರಹಗಾರರ ಸಂಘ, ಕರ್ನಾಟಕ ರಾಜ್ಯ ಕಣ್ಣಿನ ವೈದ್ಯರ ಸಂಘಗಳಲ್ಲಿಯೂ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಮಲೆನಾಡು ಕಣ್ಣಿನ ವೈದ್ಯರ ಸಂಘ, ಶಿವಮೊಗ್ಗ ಇದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

View full details