Doddamane Anand
ಕನ್ನಂಬಾಡಿ ಜೋಡಿ ಕೊಲೆ ರಹಸ್ಯ
ಕನ್ನಂಬಾಡಿ ಜೋಡಿ ಕೊಲೆ ರಹಸ್ಯ
Publisher - ಸಪ್ನ ಬುಕ್ ಹೌಸ್
- Free Shipping Above ₹350
- Cash on Delivery (COD) Available*
Pages - 120
Type - Paperback
Couldn't load pickup availability
ಪುಸ್ತಕ ಸಂಸ್ಕೃತಿಗೆ ಮತ್ತೊಂದು ಹೆಸರು ಸಪ್ನ ಬುಕ್ ಹೌಸ್. ಇದರ ಕರ್ಣಧಾರತ್ವವನ್ನು ಮೊದಲಿಗೆ ಕೈಗೆ ತೆಗೆದುಕೊಂಡು ರೂಪಿಸಿ, ಅಭಿವೃದ್ಧಿಪಡಿಸಿ, ಲೋಕೋತ್ತರಕ್ಕೆ ಏರಿಸಿದವರು ಸುರೇಶ್ ಸಿ. ಷಾ. ಅವರ ಪರಂಪರೆಯನ್ನು ಮುಂದುವರಿಸುತ್ತಿರುವವರು ಅವರ ಮಕ್ಕಳು ಮತ್ತು ಮೊಮ್ಮಕ್ಕಳು. ಕನ್ನಡ ಲೇಖಕರ, ವಿದ್ವಾಂಸರ, ಕವಿಗಳ, ನಾಟಕಕಾರರ, ಸಂಶೋಧಕರ ಆಡುಂಬೊಲ ಸಪ್ನ ಬುಕ್ ಹೌಸ್ ಎಂದರೆ ತಪ್ಪಾಗಲಾರದು. ಇದನ್ನು ಪುಸ್ತಕ ಕಾಶಿಯೆಂದು ಕರೆದಿರುವುದು ಅನ್ವರ್ಥಕವಾದುದು. ಇಲ್ಲಿ ಪುಸ್ತಕಗಳು ಹೃದಯ ತೆರೆದು ಮಾತನಾಡುತ್ತವೆ. ಅವು ಬಂದವರನ್ನು ಸ್ವಾಗತಿಸುತ್ತವೆ. ಪ್ರಕಾಶನೋದ್ಯಮದ ಆಧುನೀಕರಣದ ವಿವಿಧ ಮಜಲುಗಳನ್ನು ಇಲ್ಲಿ ಕಾಣಬಹುದು.
ಕನ್ನಡ ಪುಸ್ತಕಗಳ ಪ್ರಕಟನೆಗೆ ನೂತನ ಇತಿಹಾಸವನ್ನು ನಿರ್ಮಿಸಿದ ಕೀರ್ತಿ ಸಪ್ನ ಬುಕ್ ಹೌಸ್ಗೆ ಸಲ್ಲುತ್ತದೆ. ಪ್ರತಿವರ್ಷ ರಾಜ್ಯೋತ್ಸವದ ಸಂದರ್ಭದಲ್ಲಿ ಹೊಸ ಪುಸ್ತಕಗಳು ಲೋಕಾರ್ಪಣೆಗೊಳ್ಳುತ್ತಿರುತ್ತವೆ. ಕರ್ನಾಟಕದ ಪುಸ್ತಕ ಸಂಸ್ಕೃತಿಯ ಚರಿತ್ರೆಯಲ್ಲಿ ಇದೊಂದು ನೂತನ ಅಧ್ಯಾಯವನ್ನು ರೂಪಿಸಿದ ಕೀರ್ತಿ ಸಪ್ನ ಬುಕ್ ಹೌಸ್ಗೆ ಸಲ್ಲುತ್ತದೆ. ಕನ್ನಡದ ಎಲ್ಲಾ ಪ್ರಕಾರಕ್ಕೆ ಸೇರಿದ ಪುಸ್ತಕಗಳು ಇಲ್ಲಿ ಪ್ರಕಟಗೊಳ್ಳುತ್ತವೆ. ಇಂಥ ಪ್ರಕಟನೆಯಲ್ಲಿ ಹಳಬರು ಇರುವಂತೆ, ಹೊಸಬರೂ ಇರುತ್ತಾರೆ. ಇದು ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಕ್ರಮ! ಕನ್ನಡ ಪುಸ್ತಕ ಸಂಸ್ಕೃತಿಯನ್ನು ಅದ್ಯತನಗೊಳಿಸುವ ವಿಶಿಷ್ಟ ಕ್ರಮವೂ ಇದಾಗಿದೆ. ಇಂಥದೊಂದು ನೂತನ ಕಲ್ಪನೆಯ ಫಲವಾಗಿ ನಿಮ್ಮ ಕೈಯಲ್ಲಿ ಪುಸ್ತಕಗಳಿವೆ. ಇವು ನಮ್ಮ ಬದುಕಿಗೆ ಜೀವಸತ್ವವನ್ನೂ ಬುದ್ಧಿಗೆ ನೂತನ ಪ್ರಕಲ್ಪವನ್ನೂ ಹೃದಯಕ್ಕೆ ಸಾಂತ್ವನವನ್ನೂ ನೀಡುತ್ತವೆ. ಇಂಥ ವಿಶಿಷ್ಟ ರೀತಿಯ ಸಹಸ್ರಾರು ಪುಸ್ತಕಗಳನ್ನು ಪ್ರಕಟಿಸುತ್ತಿರುವ ಸಪ್ನ ಬುಕ್ ಹೌಸ್ಗೆ ಷಷ್ಠಿನಮನ!
ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
ವಿಶ್ರಾಂತ ಕುಲಪತಿಗಳು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ
Share

Subscribe to our emails
Subscribe to our mailing list for insider news, product launches, and more.