Skip to product information
1 of 1

Keerthinatha Kurtakoti

ಕನ್ನಡ ಸಾಹಿತ್ಯ ಸಂಗಾತಿ

ಕನ್ನಡ ಸಾಹಿತ್ಯ ಸಂಗಾತಿ

Publisher - ಮನೋಹರ ಗ್ರಂಥಮಾಲಾ

Regular price Rs. 450.00
Regular price Rs. 450.00 Sale price Rs. 450.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 332

Type - Paperback

ಸಮಗ್ರವಾಗಿ ಹಳಗನ್ನಡ ಸಾಹಿತ್ಯವನ್ನು ಪರಿಚಯಿಸುವ ಉದ್ದೇಶವೇ ಇಲ್ಲಿ ಪ್ರಮುಖವಾಗಿದ್ದರೂ ಬರವಣಿಗೆಯ ಸ್ವರೂಪದಲ್ಲಿ 'ಕನ್ನಡ ಸಾಹಿತ್ಯ ಸಂಗಾತಿ' ಅದನ್ನೂ ಮೀರಿದ ಹೆಚ್ಚಿನ ಆಕಾಂಕ್ಷೆಯನ್ನು ಒಳಗೊಂಡು ಅನೇಕ ಮುಖ್ಯ ಸಂಗತಿಗಳತ್ತ ನಮ್ಮ ಗಮನ ಸೆಳೆಯುತ್ತದೆ. ಕವಿ ಕೃತಿಗಳಲ್ಲಿ ತಾವು ಕಂಡ ವಿಶಿಷ್ಟ ಅಂಶಗಳನ್ನು ಕುರ್ತಕೋಟಿ ಅವರು ಟಿಪ್ಪಣಿಗಳ ರೂಪದಲ್ಲಿ ಇಲ್ಲಿ ಮಂಡಿಸಿದ್ದರೂ, ಹಾಗೆ ಮಂಡಿಸುವಾಗ ಇಡೀ ಸಾಹಿತ್ಯ ಪರಂಪರೆ ಅವರ ಕಣ್ಣ ಮುಂದಿದೆ. ಹೀಗಾಗಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಕುರ್ತಕೋಟಿಯವರು ಇಲ್ಲಿ ಹೊಸದಾಗಿ ಬರೆಯುತ್ತಿದ್ದಾರೆ ಅನ್ನಿಸುತ್ತದೆ. ಆದರೆ ರೂಢಿಯ ಅರ್ಥದ ಸಾಹಿತ್ಯ ಚರಿತ್ರೆಯ ಕ್ರಮ ಇಲ್ಲಿಲ್ಲ. ಮಾಹಿತಿಗಳನ್ನು ನೀಡುವ, ಈಗಾಗಲೇ ಗೊತ್ತಿರುವ ಸಂಗತಿಗಳನ್ನು ಹೇಳುವ ಮತ್ತೊಂದು ವಸ್ತುಗಳು, ಪರಿಕಲ್ಪನೆಗಳು ಬೆಳೆದುಬಂದ ಬಗೆಯನ್ನು ಕುರ್ತಕೋಟಿಯವರು ಇಲ್ಲಿ ಗುರ್ತಿಸುತ್ತಾರೆ. ನಮ್ಮ ಪರಂಪರೆಯನ್ನು ಗುರ್ತಿಸಿಕೊಳ್ಳಲು ಹವಣಿಸುತ್ತಿರುವ ಇಂದಿನ ವಿಮರ್ಶೆಗೆ ಸಾವಿರದ ಐದನೂರು ವರ್ಷಗಳಲ್ಲಿ ಕನ್ನಡ ಮನಸ್ಸು ಹೇಗೆ ಬೆಳೆದು ಬಂದಿದೆ ಎಂಬುದರ ಸೂಕ್ಷ್ಮ ಪರಿಚಯ ಮಾಡಿಕೊಡುತ್ತಾರೆ.

-ನರಹಳ್ಳಿ ಬಾಲಸುಬ್ರಹ್ಮಣ್ಯ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)