1
/
of
2
V. Krishna
ಕನ್ನಡ-ಕನ್ನಡ-ಇಂಗ್ಲಿಷ್ ಸಂಕ್ಷಿಪ್ತ ನಿಘಂಟು
ಕನ್ನಡ-ಕನ್ನಡ-ಇಂಗ್ಲಿಷ್ ಸಂಕ್ಷಿಪ್ತ ನಿಘಂಟು
Publisher - ವಸಂತ ಪ್ರಕಾಶನ
Regular price
Rs. 350.00
Regular price
Rs. 350.00
Sale price
Rs. 350.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages - 636
Type - Paperback
Gift Wrap
Rs. 15.00
Gift Box
Rs. 225.00
Couldn't load pickup availability
ಕನ್ನಡ ಸಾರಸ್ವತ ಲೋಕಕ್ಕೆ ವಿವರಣಾತ್ಮಕವಾಗಿರುವ, ಮೂರು ಸಂಪುಟಗಳ ಒಂದು ಬೃಹತ್ ಕನ್ನಡ-ಇಂಗ್ಲಿಷ್ ನಿಘಂಟನ್ನು ನೀಡಿರುವ ಶ್ರೀ ವಿ. ಕೃಷ್ಣ ಅವರು ವಿದ್ಯಾರ್ಥಿಗಳು, ಅನುವಾದಕರು, ಸಾಮಾನ್ಯ ಭಾಷಾಭ್ಯಾಸಿಗಳು ಹಾಗೂ ಕನ್ನಡ ಮತ್ತು ಇಂಗ್ಲಿಷನ್ನು ಕಲಿಯಬಯಸುವ ಅನ್ಯಭಾಷಿಕರಿಗಾಗಿ ಈ ಕನ್ನಡ-ಕನ್ನಡ-ಇಂಗ್ಲಿಷ್ ಸಂಕ್ಷಿಪ್ತ ನಿಘಂಟನ್ನು ರಚಿಸಿದ್ದಾರೆ. ಇದು ವಿವರಣಾತ್ಮಕವಾಗಿರುವುದರಿಂದ ಕನ್ನಡ ಪದಗಳ ಅರ್ಥ ಹಾಗೂ ಅದರ ಛಾಯೆಗಳನ್ನು ನಿಖರವಾಗಿ ತಿಳಿಯಲು ಸಹಾಯಕವಾಗಿದೆ. ವಿವರಣೆಗೆ ಸಾಧ್ಯವಾದಷ್ಟೂ ಸರಳ ಇಂಗ್ಲಿಷ್ ಪದಗಳನ್ನು ಬಳಸಲಾಗಿದೆ.
ಈ ನಿಘಂಟಿಗಾಗಿ ಪದಗಳನ್ನು ಆಯ್ಕೆಮಾಡುವಾಗ ಪ್ರಸ್ತುತ ಬಳಸುತ್ತಿರುವ ಹಾಗೂ ನಡುಗನ್ನಡದ ಪದಗಳನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಳ್ಳಲಾಗಿದೆ. ಇದು 18,300 ಮುಖ್ಯೋಲ್ಲೇಖಗಳನ್ನೂ, ಅವುಗಳಿಗೆ 30,000ಕ್ಕೂ ಹೆಚ್ಚು ಅರ್ಥವಿವರಣೆಗಳನ್ನೂ ಒಳಕೊಂಡಿದ್ದು, ಈಗ ಮಾರುಕಟ್ಟೆಯಲ್ಲಿ ದೊರೆಯುವ ಕನ್ನಡ-ಇಂಗ್ಲಿಷ್ ನಿಘಂಟುಗಳಿಗಿಂತ ದೊಡ್ಡದೂ, ವಿಶಾಲಾರ್ಥಗಳನ್ನು ನೀಡುವಂತಹುದೂ ಆಗಿದೆ.
ಸಮಾನಾರ್ಥವನ್ನು ನೀಡುವ ಮುಖ್ಯೋಲ್ಲೇಖಗಳು ಪರಸ್ಪರ ಹತ್ತಿರದಲ್ಲಿದ್ದಾಗ ಮಾತ್ರ ಅವುಗಳಲ್ಲಿ ಒಂದಕ್ಕೆ ಅರ್ಥಗಳನ್ನು ನೀಡಿ, ಉಳಿದವುಗಳಿಗೆ ಅರ್ಥವನ್ನು ನೀಡಿರುವ ಮುಖ್ಯೋಲ್ಲೇಖವನ್ನು ನೋಡಿ ಎಂಬ ಸೂಚನೆಯನ್ನು ಕೊಡಲಾಗಿದೆ. ಎರಡು ಪುಟಗಳಿಗೂ ಹೆಚ್ಚು ದೂರದಲ್ಲಿದ್ದರೆ ಅರ್ಥಗಳನ್ನು ಆ ಎಲ್ಲಾ ಪದಗಳಿಗೂ ಅವುಗಳ ಮುಂದೆಯೇ ನೀಡಲಾಗಿದೆ. ಈ ಮೂಲಕ ನಿಘಂಟಿನ ಪುಟಗಳನ್ನು ತಿರುಗಿಸಿ ಹುಡುಕುವ ಶ್ರಮವನ್ನು ತಪ್ಪಿಸಿ ಇದನ್ನು ಬಳಕೆದಾರರ ಸ್ನೇಹಿಯನ್ನಾಗಿಸಲಾಗಿದೆ.

Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.