Skip to product information
1 of 2

Yashawantha Chittala

ಕಮಟೆಗೆ ಬಂದ ಕಿಂದರಿಜೋಗಿ

ಕಮಟೆಗೆ ಬಂದ ಕಿಂದರಿಜೋಗಿ

Publisher -

Regular price Rs. 145.00
Regular price Rs. 145.00 Sale price Rs. 145.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 172

Type - Paperback

ಚಿತ್ತಾಲರ ಕಥಾಜಗತ್ತು ಒಂದು ದಟ್ಟವಾದ ಅನುಭವಗಳ ಜಗತ್ತು. ಕ್ರಿಯೆಯ ಭೌತಿಕ ಆವರಣ ಯಾವಾಗಲೂ ಮೂರ್ತ. ನೂರು ವಿವರಗಳೊಂದಿಗೆ ಅದು ಗಟ್ಟಿಯಾಗಿ, ಮೂರ್ತವಾಗಿ ನಮ್ಮ ಕಣ್ಣಮುಂದೆ ರೂಪ ತಾಳುತ್ತದೆ. ಪಾತ್ರಗಳೂ ಹಾಗೆಯೇ. ಪಾತ್ರದ ಎತ್ತರ, ದಪ್ಪ ಚಲನವಲನದ ವೈಖರಿ, ಮಾತಿನ ವೈಶಿಷ್ಟ್ಯ, ದನಿಯ ಜೋರು, ಬಟ್ಟೆ ಮುಖಭಾವನೆಯ ಬದಲಾವಣೆಗಳು ಎಲ್ಲ ಸ್ಪಷ್ಟ. ಈ ಸ್ಪಷ್ಟವಾದ ಆವರಣದಲ್ಲಿ ಸ್ಪಷ್ಟವಾದ ಪಾತ್ರಗಳು ಮುಖಾಮುಖಿಯಾಗಿ ಮಾತಿನಲ್ಲಿ ಕ್ರಿಯೆಯಲ್ಲಿ ತೊಡಿಗಿದುವೆಂದರೆ, ಸೃಷ್ಟಿಯಾಗುವ ಒಳಜಗತ್ತು, ಆ ಜಗತ್ತಿನ ಕ್ರಿಯೆ, ಅಸ್ಪಷ್ಟ ನಿಗೂಢ. ಈ ನಿಗೂಢತೆಯನ್ನು ಇನ್ನೂ ಗಾಢಗೊಳಿಸುತ್ತದೆ. - ಬದುಕಿನ ಹಿಂದೆಯೇ ಹೆಜ್ಜೆ ಇಡುವ ಸಾವು. ಇದು ಒಟ್ಟಿನಲ್ಲಿ ನೋವಿನ, ಯಾತನೆಯ ಜಗತ್ತು..... ಈ ಸಾವು ಕಮಾನಿನಂತೆ ಮೇಲೆ ಬಾಗಿದ ಈ ನಿಗೂಢ ಬದುಕಿನಲ್ಲಿ ಸೂಕ್ಷ್ಮತೆ ಇದ್ದಷ್ಟೂ ಅಂತಃಕರಣ ಇದ್ದಷ್ಟೂ ಯಾತನೆಗೆ ಆಹ್ವಾನವೇ, ಚಿತ್ತಾಲರ ಕೆಲವು ಕಥೆಗಳನ್ನು ಓದುವಾಗ ನನಗೆ ಒಂದು ಇಂಗ್ಲೀಷ್ ಪಂಕ್ತಿ ನೆನಪಿಗೆ ಬರುತ್ತದೆ. Some infinitely gentle, Infinitely suffering thing".

-ಡಾ. ಎಲ್.ಎಸ್. ಶೇಷಗಿರಿ ರಾವ್

("ಐವತ್ತೊಂದು ಕಥೆಗಳು" ಈ ಸಂಗ್ರಹದ ವಿಮರ್ಶೆಯಲ್ಲಿ)

"ಮೊದಲಿನಿಂದಲೂ ತಮ್ಮದೇ ಆದ ಆಸಕ್ತಿಗಳು ಮತ್ತು ಜೀವನ ದೃಷ್ಟಿಯನ್ನು ಹೊಂದಿರುವ ಚಿತ್ತಾಲರು, ಸಮಕಾಲೀನ ಸಾಹಿತ್ಯಕ ಸನ್ನಿವೇಶದ ತುಡಿತಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಆದರೆ ಅವುಗಳ ಒತ್ತಡಕ್ಕೆ ಬಾಗದೆ ತಮ್ಮದೇ ಆದ ರೀತಿಯಲ್ಲಿ ಹೊಸ ಆಯಾಮಗಳನ್ನು ಸೇರಿಸಿದ್ದಾರೆ... ಚಿತ್ತಾಲರ ಬರವಣಿಗೆಯ ಮತ್ತೊಂದು ಲಕ್ಷಣವೆಂದರೆ ಸಾಹಿತ್ಯ ಮಾಧ್ಯಮದ ಸಾಧ್ಯತೆ ಹಾಗೂ ಪರಿಮಿತಿಗಳ ಖಚಿತವಾದ ತಿಳುವಳಿಕೆ. ಸಾಹಿತ್ಯವು ಕ್ರಾಂತಿಯನ್ನು ಮಾಡಲಾರದೆಂದು ಅರಿತಾಗಲೇ ಸಾಹಿತ್ಯ ಮಾತ್ರ ಮಾಡಬಹುದಾದ್ದನ್ನು ಮಾಡಲು ಸಾಧ್ಯವೆಂದು ಅವರ ನಿಲವು. ಈ ತಿಳುವಳಿಕೆಯಿಂದ, ಕನ್ನಡದಲ್ಲಿ ಸಣ್ಣಕಥೆಗೆ "ಇಷ್ಟೆಲ್ಲ ಸಾಧ್ಯವೇ" ಎಂಬ ಬೆರಗು ಮೂಡಿಸುವಂತೆ ಬರೆಯಲು ಅವರಿಗೆ ಸಾಧ್ಯವಾಗಿದೆ."

- ಡಾ. ಎಚ್.ಎಸ್. ರಾಘವೇಂದ್ರ ರಾವ್ ("ಸಾಲು ದೀಪಗಳು" ಎಂಬ ಗ್ರಂಥದಲ್ಲಿ)..

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)