Skip to product information
1 of 1

Sunanda Belagavankara

ಕಾಯಕ ಕೈಲಾಸ

ಕಾಯಕ ಕೈಲಾಸ

Publisher - ಅಂಕಿತ ಪುಸ್ತಕ

Regular price Rs. 450.00
Regular price Rs. 450.00 Sale price Rs. 450.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ಧಾರವಾಡದಲ್ಲಿ ಹುಟ್ಟಿಬೆಳೆದು ವಿದೇಶಗಳಲ್ಲಿ ಉದ್ಯೋಗ ಮಾಡಿ, ಕುಟುಂಬ ನಿರ್ವಹಣೆ ಮಾಡಿ, ಈಗ ಬೆಂಗಳೂರಲ್ಲಿ ಬಂದು ನೆಲಸಿ ಧಾರವಾಡದ ಮೃದ್ಗಂಧವನ್ನು ಅಂತರ್ನಿಹಿತವಾಗಿಸಿಕೊಂಡಿರುವ ಅಪರೂಪದ ಲೇಖಕಿ ಸುನಂದಾ ಬಿಂದು ಬೆಳಗಾಂವಕರ, ಅವರ ಸಾಹಿತ್ಯದಲ್ಲಿ ಅನಗತ್ಯ ಆಕ್ರೋಶವಿಲ್ಲ, ಘೋಷಣೆಗಳ ಅಬ್ಬರವಿಲ್ಲ. ಮಹಿಳಾ ಸಾಹಿತ್ಯಕ್ಕೆ ಅವರು ಪ್ರತ್ಯೇಕತೆಯನ್ನಾಗಲೀ ವಿಶೇಷ ಪ್ರಾಶಸ್ತ್ರವನ್ನಾಗಲೀ ನೀಡಲು ಬಯಸುವುದಿಲ್ಲ. ಸುನಂದಾರವರು ಅಪ್ಪಟ ಪ್ರಾದೇಶಿಕ ಸಂವೇದನೆಯ ನೆಲೆಯಲ್ಲಿ ವಿಶಾಲ ಪ್ರಪಂಚವನ್ನು ಅಳೆದಿದ್ದಾರೆ. ಧಾರವಾಡ ಅವರ ಜನ್ಮಭೂಮಿ ಮತ್ತು ಕರ್ಮಭೂಮಿ. ಅವರೊಳಗೆ ಒಂದು ಹಿಡಿ ಧಾರವಾಡವಿದೆ. ಅದರ ಮೃದ್ಗಂಧ ಅವರ ಎಲ್ಲ ಸಾಹಿತ್ಯ ಕುಸುಮಗಳಲ್ಲಿ ಹೊರಸೂಸಿದೆ. ಅವರ ಬರಹದಲ್ಲಿ ವೈಶಾಲ್ಯ ಆಳಗಳೆರಡೂ ಇವೆ. ಕಪ್ಪು ಲೇಖಕಿಯೊಬ್ಬಳು ಹೇಳುವಂತೆ ಅವರ ಮಹಾಪ್ರಸ್ಥಾನ ಮನೆಯೊಳಗಿನದು. ಅವರು ನಿಗಳದೊಳಗಿನ ನಿರಾಳವನ್ನು ಅರಸಿ ಕಂಡ ಮುಗ್ಧವಿದುಷಿ.
View full details