Skip to product information
1 of 2

Sumangala

ಕಾಲಿಟ್ಟಲ್ಲಿ ಕಾಲುದಾರಿ

ಕಾಲಿಟ್ಟಲ್ಲಿ ಕಾಲುದಾರಿ

Publisher - ಛಂದ ಪ್ರಕಾಶನ

Regular price Rs. 80.00
Regular price Rs. 80.00 Sale price Rs. 80.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 150

Type - Paperback

Gift Wrap
Gift Wrap Rs. 15.00

ಈ ನೀರಲ್ಲಿ ಮೂವತ್ತೈದು ವರ್ಷಗಳ ಹಿಂದಿನ ನೀರಿನ ಕಣಗಳೂ ಇರಬಹುದೇ.. ಈ ನೀರಿನ ಕಣಗಳಲ್ಲಿ ಆಗಿನ ಅಪ್ಪನನ್ನು ನೋಡಿದ ನೀರ ಕಣಗಳೂ ಇರಬಹುದೇ.. ಅವಳಿಗೆ ಕಣ್ಣು ತುಂಬಿ ಬರತೊಡಗಿತ್ತು. ಕಣ್ಣಿನಿಂದ ನೀರಹನಿಗಳು ಕಾಲ ಕೆಳಗಿನ ನೀರಿಗೆ ಬಿದ್ದು ಕಣ್ಣೀರು ಹಿನ್ನೀರಿಗೇರುತ್ತಿರುವ ಗಳಿಗೆಯಲ್ಲಿ ಸಂಜೆಯಾಗುತ್ತಿದೆ. ನೀರ ಮೇಲೆ ಮೃದುವಾಗಿ ಹಾಯ ತೊಡಗಿದ ತಂಗಾಳಿ.. ಆಗಸದಂಚಿನಿಂದ ಮೆಲ್ಲಮೆಲ್ಲಗೆ ಹಸಿರು ಕಾಡಿಗೆ ಇಳಿಯತೊಡಗಿದ ಕತ್ತಲು.. ಕಣ್ಣೆದುರಿನ ಅಗಾಧ ಹಿನ್ನೀರು.. ಹಿನ್ನೀರಿನಲ್ಲಿ ಮುಳುಗಿದ ಕಣ್ಣಳತೆಗೆ ಸಿಗದ ಸಂಗತಿಗಳು.. ಕಾಡಿನಾಚೆ ದೂರದಲ್ಲೆಲ್ಲೋ ಉಸಿರಾಡುತ್ತಿರುವ ನಾಗರಿಕ ಜಗತ್ತಿನಿಂದ ಆ ಕ್ಷಣದಲ್ಲಿ ಪ್ರತ್ಯೇಕಗೊಂಡಂತೆ ದಡದಲ್ಲಿ ನಿಂತ ತಾವು ಮೂವರು.. ಅವಳಿಗೇಕೋ ವಿಚಿತ್ರ ಅಚ್ಚರಿಯೆನ್ನಿಸಿತು. ಹಿನ್ನೀರಿನೆಡೆಯಿಂದ ಬಸ್ಸು ಬರುವ ಟಾರ್ ರಸ್ತೆಯತ್ತ ಇವರನ್ನ ಕರೆದೊಯ್ಯಲಿರುವ ಕಾಲುದಾರಿ ಮಲಗಿದೆ ಸದ್ದಿಲ್ಲದೆ. ಮರಳ ದಡದಿಂದ ಕಾಲುದಾರಿಯತ್ತ ಸಾಗಿದ ಅಪ್ಪ, ಅಣ್ಣಯ್ಯನ ಹಿಂದೆ ಹೆಜ್ಜೆ ಹಾಕತೊಡಗಿದಳು. ಗಾಢವಾಗುತ್ತಿರುವ ನಸುಗತ್ತಲಲ್ಲೂ ಇವರ ಕಣ್ಣಿಗಷ್ಟೇ ಕಾಣುವಂತೆ ಇವರು ಕಾಲಿಟ್ಟಲ್ಲಿ ಕಾಲುದಾರಿ ತೆರೆದುಕೊಳ್ಳತೊಡಗಿತು.

View full details