Nowshad Jannath
ಕಾಡು ಕಾಯುವವರು
ಕಾಡು ಕಾಯುವವರು
Publisher -
- Free Shipping Above ₹400
- Cash on Delivery (COD) Available*
Pages - 160
Type - Paperback
Couldn't load pickup availability
ಇಲ್ಲಿರುವುದು ಪುಸ್ತಕಕ್ಕಾಗಿ ಬರೆದ ಕಥೆಗಳಲ್ಲ. ನಾಲ್ಕಾರು ವರ್ಷಗಳಲ್ಲಿ ಹೃದಯ ತಟ್ಟಿದ ಹಲವು ವಿಚಾರಗಳ ಕಥೆಗಳು. ಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡ ಈ ಕಥೆಗಳು ಆಗಲೇ ಜನಮೆಚ್ಚುಗೆ ಗಳಿಸಿದ್ದವು. ನದೀಸಮ್ಮನ ಬೆಳ್ಳಿಯ ಅರಂಞಾನ, ಕಾರ್ತುಂಬಿ ಮತ್ತು ಪರಿಮಳ ಲಾಡ್ಜ್, ನಡುರಾತ್ರಿ ರೈಫಲ್ ಮತ್ತು ಡಾನ್, ನಿದ್ದೆ ಮಹದೇವ ಹೀಗೆ ಎಲ್ಲಾ ಕಥೆಗಳ ತಲೆ ಬರಹಗಳೇ ಪುಸ್ತಕದ ಹಾಳೆಗಳನ್ನು ರಪರಪನೆ ಬಿಡಿಸಿ ಕೊನೆಯವರೆಗೂ ಓದಿಸಿಕೊಂಡು ಹೋಗುವ ಕೌತುಕ ಸೃಷ್ಟಿಸುತ್ತವೆ.
ಬಾಲ್ಯದಲ್ಲಿ ಲೇಖಕರು ಕಂಡ ಬಡತನ, ಬೇಗುದಿಗಳೆಲ್ಲವೂ ಇಂದು ಕಥೆಗಳಾಗಿ ಮಾರ್ಪಾಟಾಗಿವೆ. 2019-20ರಲ್ಲಿ "ಕಡಮ್ಮ ಕಲ್ಲು ಎಸ್ಟೇಟ್ ಕಾದಂಬರಿಯೊಂದಿಗೆ ಆರಂಭಗೊಂಡ ಇವರ ಸಾಹಿತ್ಯ ಪಯಣ ಸದ್ಯ ನಾಲೈದು ಕೃತಿಗಳನ್ನು ಸಾರಸ್ವತ ಲೋಕಕ್ಕೆ ಒದಗಿಸಿದೆ. ಜೀವನದ ಸಿಹಿಕಹಿಗಳನ್ನು ಗ್ರಹಿಸಬಲ್ಲ ಲೇಖಕನ ಕಥೆಗಳು ಹೃದಯಕ್ಕೆ ಹತ್ತಿರವಾಗುತ್ತವೆ. ಕಾಡು ಕಾಯುವವರು" ಕೂಡ ಉತ್ತಮ ರೀತಿಯಲ್ಲಿ ಸ್ವೀಕಾರ ಹೊಂದುವುದರಲ್ಲಿ ಸಂಶಯವಿಲ್ಲ.
Share

Subscribe to our emails
Subscribe to our mailing list for insider news, product launches, and more.