Sandhyarani
ಜೋಗಿ ರೀಡರ್
ಜೋಗಿ ರೀಡರ್
Publisher -
- Free Shipping Above ₹400
- Cash on Delivery (COD) Available*
Pages -
Type -
Couldn't load pickup availability
ಜೋಗಿ ಕನ್ನಡ ಸಾರಸ್ವತ ಲೋಕದ ವಿಸ್ಮಯ, ಕುಡ್ಲಸೀಮೆಯ ಗಿರೀಶ್ ರಾವ್ ಎಂಬ ಹೆಸರಿನ ಈ ಗೆಳೆಯ ತಮ್ಮ ಪತ್ನಿ ಜ್ಯೋತಿಯ ಹೆಸರನ್ನು ತಮ್ಮ ನಾಮವಾಚಕದೊಂದಿಗೆ ಸಾಂಕೇತಿಕವಾಗಿ ಅಲಂಕರಿಸಿಕೊಂಡವರು, ಆ ಕಾವ್ಯನಾಮದೊಂದಿಗೆ ನಿರಂತರವಾಗಿ ಸವೆಯದೇ ಬರೆಯುತ್ತಿರುವವರು. ಇವರು ಒಂದು ಕಡೆ ನಿಂತವರಲ್ಲ, ಕುಂತವರಂತೂ ಮೊದಲೇ ಅಲ್ಲ. ಈ ಬಹುಪದಿಯ ಸೃಜನಶೀಲ ಕೆಲಸಗಳು ಒಂದಲ್ಲ ಎರಡಲ್ಲ, ಹತ್ತಾರು. ಕಾರಣ ಇವರು ಕವಿ, ಕಥೆಗಾರ, ಕಾದಂಬರಿಕಾರ, ವಾಗ್ಮಿ ಮತ್ತು ಹಲವು ಧಾರವಾಹಿಗಳ ಸ್ಕ್ರಿಪ್ಟ್ ರೈಟರ್, ಅಲ್ಲದೆ ಹಲವು ಪತ್ರಿಕೆಗಳಲ್ಲಿ ರೆಗ್ಯುಲರ್ ಅಂಕಣಕಾರ. ಈ ಎಲ್ಲಾ ಸೃಜನಶೀಲ ಅವತಾರಗಳ ನಡುವೆ ದಣಿವರಿಯದ ಲೇಖಕ ಕೂಡ.
ತಮ್ಮ ಬರಹಗಳಿಂದ ಅಪಾರ ಜನಪ್ರಿಯತೆ ಸಂಪಾದಿಸಿರುವ ಈತ ಕಣ್ಣಿಗೆ ಸಿಕ್ಕ ಕೃತಿಯನ್ನು ಓದಿ ಅರಗಿಸಿಕೊಳ್ಳುವ ವಾತಾಪಿ, ಈ ಅಪ್ರತಿಮ ಸೃಜನಶೀಲ ಸಾಹಸಿ ಸಾವಿರಾರು ಕೃತಿಗಳನ್ನು ಓದಿರಬಹುದು, ಅಷ್ಟೇ ಸಂಖ್ಯೆಯ ಜಗದ್ವಿಖ್ಯಾತ ಚಲನಚಿತ್ರಗಳನ್ನು ನೋಡಿರಲೂಬಹುದು. ಸದಾ ನೂರಾರು ಗೆಳೆಯರಿಂದ ಅಲಂಕೃತಗೊಂಡಿರುವ ಜೋಗಿ ಸರ್ವಋತು ಸ್ನೇಹಶೀಲ ವ್ಯಕ್ತಿ.
ಈಗ ಜೋಗಿ ಬರಹಗಳಿಗೆ ದಿಕ್ಕೂಚಿಯಾಗುವ 'ಜೋಗಿ ವಾಚಿಕೆ' ಹೊರಬರುತ್ತಿದೆ. ಈ ಜೋಗಿ ಜೋಳಿಗೆಯೊಳಗೆ ನೀವು ಕೈ ಹಾಕಲೇಬೇಕು. ಕನ್ನಡದ ಉತ್ತಮ. ಓದುಗರಲ್ಲಿ ಒಬ್ಬರಾದ ಎನ್ ಸಂಧ್ಯಾರಾಣಿ ಅವರು ಈ ವಾಚಿಕೆಯನ್ನು ಸಂಪಾದಿಸಿದ್ದಾರೆ. ಕನ್ನಡದ ಸತ್ವವನ್ನು ಸರಿಯಾಗಿ ಮೊಗೆದು ಕೊಡುವ ಇವರು ಇಲ್ಲೂ ಯಶಸ್ವಿಯಾಗಿದ್ದಾರೆ.
-ಕುಂವಿ
ಪ್ರಕಾಶಕರು - ಅಂಕಿತ ಪುಸ್ತಕ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.