“ಜಿನ್ನ್ ಹೇಳಿದ ಬಳಿಕ ಸುಳ್ಳಾಗಿದ್ದೇ ಇಲ್ಲ. ಮನುಷ್ಯನಂತೆ ಬದುಕುವ ಪ್ರಕೃತಿಯ ಅಗೋಚರ ಶಕ್ತಿಯದು. ಕ್ಷಣಮಾತ್ರದಲ್ಲಿ ಯಾರ ಕಣ್ಣಿಗೂ ಬೀಳದೆ ಸಂಚರಿಸುವ ತಾಕತ್ತು ಜಿನ್ನ್ಗಳಿಗಿದೆಯ೦ತೆ.. ತನಿಯನ ಖುಷಿಗೆ ಪಾರವಿರಲಿಲ್ಲ. ಪ್ರೀತಿಯ ದನ ಸದ್ಯ ಜೀವಂತವಾಗಿದೆ ಎಂದು ತಿಳಿದ ಮೇಲೆ ಅವನಿಗೆ ಕತ್ತಲಿನ ಭಯ ಸಣ್ಣಗೆ ದೂರವಾಗಿ, ಕಣ್ಣ ಮುಂದೆ ಗುಡ್ಡದ ತಪ್ಪಲಿನ ಗೇರು ಮರದ ಕೆಳಗೆ ದನ ಕರುವನ್ನು ನೆಕ್ಕುತ್ತಿರುವ ದೃಶ್ಯ ತೇಲಿ ಬಂತು”