Skip to product information
1 of 1

Cheemanahalli Rameshbabu

ಜೀವರೇಶಿಮೆ

ಜೀವರೇಶಿಮೆ

Publisher -

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ನಾನು ಮತ್ತೆ ಮತ್ತೆ ಪ್ರಸ್ತಾಪಿಸುವ, ಕೃತಿಯೊಂದರ ಒಟ್ಟಂದಕ್ಕೆ ಮುಖ್ಯ ಭೂಮಿಕೆಯಾಗಿರುವ ಸ್ಥಳೀಯತೆ-ಪ್ರಾದೇಶಿಕತೆ ಮತ್ತು ವೈವಿಧ್ಯತೆಗಳು ಬಾಬು ಅವರ ಪ್ರತಿಭೆಯ ಅನಾಯಾಸ ಅಂಶಗಳಾಗಿವೆ. ಸೂಕ್ಷ್ಮ ಒಳನೋಟ, ಪೂರ್ವಗ್ರಹಗಳಿಂದ ಮುಕ್ತವಾದ ಮನಸ್ಸು, ನಿರ್ಧಾರ ತೆಗೆದುಕೊಳ್ಳುವ ಆತುರತೆಯಿಂದ ಬಿಡುಗಡೆ ಪಡೆದಿರುವುದು, ಬದುಕಿನ ಕಹಿಯನ್ನು ಬೊಗಸೆಯಲ್ಲಿ ಸ್ವೀಕರಿಸಿ ರುಚಿ ನೋಡುವ ತೆರೆದ ಮನಸ್ಸು ಅವರ ದತ್ತ ಪ್ರತಿಭೆಗೆ ಗಟ್ಟಿ ಆಸರೆ ಒದಗಿಸಬಲ್ಲ ಪರಿಕರಗಳಾಗಿವೆ. ಕಥಾವಸ್ತು ನಿರ್ವಹಣೆ, ತೆಲುಗು ಮಿಶ್ರಿತ ಗಡಿಕನ್ನಡ ಭಾಷಾ ಬಳಕೆಯಲ್ಲಿನ ಪರಿಣತಿ, ಕಥನ ವಿನ್ಯಾಸವನ್ನು ನಿರ್ವಹಿಸುವಲ್ಲಿ ಬಾಬುಗಿರುವ ಕುಶಲತೆ ಕಥೆಗಳ ಸೊಬಗನ್ನು ಹೆಚ್ಚಿಸಿವೆ. ಕಥಾವಸ್ತುವಿನಲ್ಲಿನ ವೈವಿಧ್ಯತೆ ಕಥನದ ಹರಹು-ವ್ಯಾಪ್ತಿಯನ್ನು ಹೆಚ್ಚಿಸಿ, ಕಥೆಗಾರನಿಗಿರುವ ಕಳಕಳಿಯ ಅಂಶಗಳಾವುದು ಎಂಬುವತ್ತ ಓದುಗನ ಗಮನ ಸೆಳೆಯುತ್ತವೆ.

-ಕೇಶವ ಮಳಗಿ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)