Necati oziri translated by Harsha Raghuram
ಹುಟ್ಟು ಮಚ್ಚೆ
ಹುಟ್ಟು ಮಚ್ಚೆ
Publisher - ಛಂದ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 200
Type - Paperback
Couldn't load pickup availability
ಹುಟ್ಟುಮಚ್ಚೆ
ಆರ್ದಾ ಜರ್ಮನಿಯ ತನ್ನ ಹುಟ್ಟೂರಿನ ಆಸ್ಪತ್ರೆಯ ಐಸಿಯು ವಾರ್ಡಿನಲ್ಲಿ ಮಲಗಿದ್ದಾನೆ. ತಾನು ಇನ್ನೂ ಎಷ್ಟು ದಿನ ಬದುಕಲಿದ್ದೇನೆ ಎಂದು ಅವನಿಗೆ ತಿಳಿದಿಲ್ಲ. ದಿನವೂ ಭೇಟಿಯ ಸಮಯಕ್ಕೆ ಆರ್ದಾನ ತಾಯಿ ಉಮ್ರಾನ್ ಅಥವಾ ಅಕ್ಕ ಐಲೀನ್ ಆಸ್ಪತ್ರೆಗೆ ಬಂದು ಹಾಸಿಗೆ ಬದಿಯ ಕುರ್ಚಿಯಲ್ಲಿ ಸ್ವಲ್ಪ ಹೊತ್ತು ಕೂತು ಹೋಗುತ್ತಾರೆ. ಆದರೆ, ಅವರು ಒಟ್ಟಿಗೆ ಬರುವುದಿಲ್ಲ. ಅವರಿಬ್ಬರು ಮಾತು ಬಿಟ್ಟು ಹತ್ತು ವರ್ಷಗಳೇ ಕಳೆದಿವೆ. ಆರ್ದಾ ವಾರ್ಡಿನಲ್ಲಿ ಒಬ್ಬನೇ ಇದ್ದಾಗ ಕಂಡೇ ಇರದ ತನ್ನ ತಂದೆಗಾಗಿ ತನ್ನ ಜೀವನದ ಬಗ್ಗೆ ಬರೆದಿಡುತ್ತಾನೆ. ಪರದೇಶಿ ಇಲಾಖೆಯ ಕಛೇರಿಯಲ್ಲಿ ಕಾಯುತ್ತಾ ಕೂತ ದಿನಗಳ ಬಗ್ಗೆ, ಯೌವನದಲ್ಲಿ ರೈಲು ನಿಲ್ದಾಣದ ಬಳಿ ಗೆಳೆಯರ ಜೊತೆ ಪಟ್ಟಂಗ ಹೊಡೆದ ದಿನಗಳ ಬಗ್ಗೆ ಹೇಳುತ್ತಾನೆ. ಪೋಲಿಸರಿಂದ ತಪಾಸಣೆಗೆ ಒಳಪಟ್ಟದ್ದನ್ನು, ಸಾಕ್ಸ್ನಲ್ಲಿ ಗಾಂಜಾ ಬಚ್ಚಿಟ್ಟುಕೊಂಡದ್ದನ್ನು, ಹಾಗೆಯೇ ಮೊದಲ ಪ್ರೇಮದ ಬಗ್ಗೆ ಕೂಡ ಹೇಳುತ್ತಾನೆ. ಆರ್ದಾ ತನ್ನ ಜೀವನದ ಕತೆಯನ್ನಷ್ಟೇ ಅಲ್ಲದೆ, ಅವನ ಅಕ್ಕ ಹೇಗೆ ಮನೆಬಿಟ್ಟು ಹೋದಳೆಂದು, ತಾಯಿ ತನ್ನ ಜೀವನವನ್ನು ಹೇಗೆ ಬೇರೆಯದ್ದೇ ರೀತಿಯಲ್ಲಿ ಕಲ್ಪಿಸಿಕೊಂಡಿದ್ದಳು ಎಂದೂ ವಿವರಿಸುತ್ತಾನೆ.
2023ರ ಜರ್ಮನ್ ಪುಸ್ತಕ ಪ್ರಶಸ್ತಿಯ ಕಿರುಪಟ್ಟಿಗೆ ಆಯ್ಕೆಯಾದ 'ಹುಟ್ಟುಮಚ್ಚೆ' ಕಾದಂಬರಿಯಲ್ಲಿ ನೆಜಾತಿ ಒಝೀರಿ ಜರ್ಮನಿಯಲ್ಲಿ ವಾಸಿಸುವ ಟರ್ಕಿಶ್ ಹಿನ್ನೆಲೆಯ ಕುಟುಂಬವೊಂದರ ಕತೆಯನ್ನು ಹೇಳುತ್ತಾರೆ. ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿಗಳು ಕುಟುಂಬದವರ ನಿರ್ಧಾರಗಳ ಮೇಲೆ ಬೀರುವ ಪ್ರಭಾವವನ್ನು ಮನಮುಟ್ಟುವಂತೆ ರೂಪಿಸುತ್ತಾರೆ. ಕನ್ನಡದಲ್ಲಿ ಅಷ್ಟಾಗಿ ಪರಿಚಯವಿರದ ವಲಸೆಯೋತ್ತರ (post-migrant) ಸಾಹಿತ್ಯ ಪ್ರಕಾರಕ್ಕೆ ಸೇರಿದ ಜರ್ಮನಿಯ ಪ್ರಮುಖ ಸಮಕಾಲೀನ ಕಾದಂಬರಿ ಇದು.
Share

Subscribe to our emails
Subscribe to our mailing list for insider news, product launches, and more.