Maithreyi
ಹೆತ್ತವರ ನೆರಳು
ಹೆತ್ತವರ ನೆರಳು
Publisher -
- Free Shipping Above ₹400
- Cash on Delivery (COD) Available*
Pages - 410
Type - Paperback
Couldn't load pickup availability
ವಂದೂರಾಗ ವಬ್ಬಾಕಿ ಹುಡಿಗಿರತಾಳಂತ. ಅಕಿ ಕಡೆ ವಂದು ಬೆಕ್ಕಿರತದಂತ. ಅದು ಆವಾಗಾವಾಗ ದಿಂಗ ಬಡಧಾಂಗ ಅಂತರದಾಗ ದೃಷ್ಟಿ ನೆಟ್ಟು ದಿಟ್ಟಿಸಿ ನೋಡತಿರತದಂತ. ಅದಕ್ಕೇನ ಕಾಣಸ್ತಿತ್ತು? ಆ ಹುಡುಗಿ ಅವ್ವಗ ಯಾವುದೋ ವಿಚಿತ್ರ ಥಂಡಿ ಹಿಡದಿತ್ತಂತ. ಅವರ ಸುತ್ತಮುತ್ತಲಿದ್ದ ಮಂದಿ-ಗಿಂದಿ - ಸಾಲದಕ್ಕ ವಂದು ಹಂದಿ - ಯಲ್ಲಾ ಕೂಡಿ ಘಾಳ್ಯಾಗ ತೂರಿಧಾಂಗ ಕಥಿ ಆದರಂತ. ಆಕಾರಿಲ್ಲದೆ ತೇಲ್ಯಾಡುವ ಈ ಕಥಿಗಳು ಭಾಷಾದಾಗ ಸೆರಿ ಹಿಡದರ ಹೆಂಗ ಕಾಣಸಬಹುದು? ಅವು ಏನು ತೋರಸಬಹುದು? ಏನು ಕಳಕೊಬಹುದು?
ಹೆತ್ತವರ ನೆರಳು ಮೈತ್ರೇಯಿಯವರ ಮೂರನೆಯ ಪುಸ್ತಕ, ಎರಡನೆಯ ಕಾದಂಬರಿ, ಹಾಗೂ ಮೊದಲ ಕನ್ನಡ ಕೃತಿ. ಅವರ ಇಂಗ್ಲಿಷ್ ಕಾದಂಬರಿ ಸಿಲ್ವಿಯಾ ಭಾರತ, ಬ್ರಿಟನ್, ಮತ್ತು ಅಮೇರಿಕಾಗಳಲ್ಲಿ ಪ್ರಕಟವಾಗಿದೆ. ಗುಡ್ಡೆ ನಗರ್ ಅವರ ಇಂಗ್ಲಿಷ್ ಕಥಾ ಸಂಕಲನ. ಹಳ್ಳ ಬಂತು ಹಳ್ಳ ಮತ್ತು ತೇಜೋ ತುಂಗಭದ್ರಾ ಕಾದಂಬರಿಗಳ ಇಂಗ್ಲಿಷ್ ಅನುವಾದಗಳಿಗೆ ಮೈತ್ರೇಯಿಯವರಿಗೆ ಎರಡು ಬಾರಿ ಕುವೆಂಪು ಭಾಷಾ ಭಾರತಿ ಅನುವಾದಿತ ಪುಸ್ತಕ ಬಹುಮಾನ ಬಂದಿದೆ. ಅವರ ಬರಹ ಮತ್ತು ಅನುವಾದಗಳಿಗೆ ಲಿಟರೇಚರ್ ಅಕ್ರಾಸ್ ಫ್ರಾಂಟಿಯರ್ಸ್ ಮತ್ತು ವೇಲ್ಸ್ ವಿಶ್ವವಿದ್ಯಾಲಯಗಳಿಂದ ಚಾರ್ಲ್ಸ್ ವೊಲಸ್ ಫೆಲೊಶಿಪ್ ಬಂದಿದೆ. ಮೈತ್ರೇಯಿ ಹುಟ್ಟಿದ್ದು ಹುಬ್ಬಳ್ಳಿಯಲ್ಲಿ. ಅವರು ಹೈದರಾಬಾದಿನಲ್ಲಿ ಎಮ್.ಎ. ಓದಿ, ಈಗ ಬ್ರಿಟನ್ನಿನಲ್ಲಿ ಪಿಎಚ್.ಡಿ. ಅಧ್ಯಯನದಲ್ಲಿ ತೊಡಗಿದ್ದಾರೆ.
Share

Subscribe to our emails
Subscribe to our mailing list for insider news, product launches, and more.