Skip to product information
1 of 1

Lokesha Agasanakatti

ಹಟ್ಟಿಯೆಂಬ ಭೂಮಿಯ ತುಣುಕು

ಹಟ್ಟಿಯೆಂಬ ಭೂಮಿಯ ತುಣುಕು

Publisher - ಛಂದ ಪ್ರಕಾಶನ

Regular price Rs. 180.00
Regular price Rs. 120.00 Sale price Rs. 180.00
Sale Sold out
Shipping calculated at checkout.
1st Edition

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
ಈ ಕತೆಗಳ ಅಂಗ ಸಂಗ ಪಲ್ಲಂಗ ಕ್ರಿಯೆಗಳಲ್ಲಿ ಆಸೆಯಿದೆ; ಅದಕ್ಕಿಂತ ಹೆಚ್ಚಿನ ಭಯವಿದೆ. ನಡುವೆ ನುಸುಳುವ ತಮಾಷೆಯಿದೆ, ಎಲ್ಲವನ್ನೂ ನುಂಗಿ ಹಾಕುವ ಕ್ರೌರ್ಯವಿದೆ; ಜತೆ ಮಲಗುವಾಗಲೂ ಕಾಡುವ ಜಾತಿ ಮೀಸಲಾತಿ, ಒಳಮೀಸಲಾತಿಗಳ ಸುಳಿವೂ ಇದೆ. ಇಲ್ಲಿಯ ಬಹುಪಾಲು ಕತೆಗಳ ಮೂಲದ್ರವ್ಯ ಜಾತಿ, ಹಾಗೆಂದು ಈ ಕತೆಗಳು ಜಾತಿಯನ್ನು ಪ್ರತಿಬಿಂಬಿಸುತ್ತಿಲ್ಲ, ಗತಿಬಿಂಬಿಸುತ್ತಿವೆ.

-ಬೊಳುವಾರು ಮಹಮದ್‌ ಕುಂಞ

ಒಟ್ಟು ಸಮಾಜವು ಚಲಚಿತ್ರವೇ ವಿನಾ ಐಡಿಯಾಲಜಿಗಳ ಕನ್ನಡಿಯಲ್ಲಿ ನಿಂತುಹೋಗಿರುವ ಸ್ಥಿರಚಿತ್ರವಲ್ಲವೆಂಬ ಸಂಗತಿಯನ್ನು ಸರಿಯಾಗಿ ಗ್ರಹಿಸಿರುವ ಲೋಕೇಶ್ ಅವರು ಕಾಲದ ಹಕ್ಕಿಯ ರೆಕ್ಕೆಬಡಿತಗಳನ್ನು ತಮ್ಮ ಬರವಣಿಗೆಯ ಬೀಸಿನಲ್ಲಿ ಹಿಡಿಯಲು ಯಶಸ್ವಿಯಾಗಿ ಪ್ರಯತ್ನಿಸಿದ್ದಾರೆ. ಒಂದೇ ಹಳ್ಳಿಯ ಚಿತ್ರಭಿತ್ತಿಯ ಮೇಲೆ, ಹಲವು ಪಾತ್ರಗಳ ವರ್ಣಪಟಲದಲ್ಲಿ ಹಿಡಿದಿರುವ ಬಿಂಬಗಳು, ಸಾತತ್ಯ ಮತ್ತು ಪರಿವರ್ತನೆಗಳನ್ನು ಒಟ್ಟಿಗೆ ಹಿಡಿಯುವ ಬಹಳ ಹುನ್ನಾರವಾಗಿ ಉಪಯುಕ್ತವಾಗಿವೆ. ಈ ಕಥೆಗಳ ಹಿಂದಿರುವ ವ್ಯವಧಾನ ಮತ್ತು ಪರಿಶ್ರಮಗಳು ಗಮನೀಯ.

- ಎಚ್ ಎಸ್ ರಾಘವೇಂದ್ರ ರಾವ್
View full details

Talk about your brand

Share information about your brand with your customers. Describe a product, make announcements, or welcome customers to your store.