1
/
of
1
Maasti Venkatesha Iyyangar
ಹಾಸ್ಯಮೂರ್ತಿ ಫಾಲ್ ಸ್ಟಾಫ್
ಹಾಸ್ಯಮೂರ್ತಿ ಫಾಲ್ ಸ್ಟಾಫ್
Publisher -
Regular price
Rs. 150.00
Regular price
Rs. 150.00
Sale price
Rs. 150.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages -
Type -
Gift Wrap
Rs. 15.00
Gift Box
Rs. 225.00
Couldn't load pickup availability
ಇದು ನಾನು ಷೇಕ್ಸ್‌ಪಿಯರ್ ಮಹಾಕವಿಯ ನಾಟಕಗಳಿಂದ ಆರಿಸಿ, ಭಾಷಾಂತರಿಸಿರುವ ದೃಶ್ಯಗಳ ಎರಡನೆಯ ಪುಸ್ತಕ, ಇದರಲ್ಲಿ ಹೆನ್ರಿ IV, ಹೆನ್ರಿ V ನಾಟಕಗಳಲ್ಲಿಯ ಫಾಲ್ ಸ್ಟಾಫ್ ದೃಶ್ಯಗಳ ಬಹುಭಾಗವನ್ನು ತಂದಿದೆ. The Merry Wives of Windsor (ವಿಂಡ್ಕರ್ ಆಟಕಾತಿ ಗರತಿಯರು) ನಾಟಕದಲ್ಲಿ ಫಾಲ್‌ಸ್ಟಾಫ್ ಪ್ರಣಯದಲ್ಲಿ ಪರಾಭವವನ್ನುಂಡದ್ದರ ಚಿತ್ರ ಇದೆ - ಇದು ಒಂದು ಕೃತಕ ಚಿತ್ರ: ಇದರ ಫಾಲ್‌ಸ್ಟಾಫ್ ಬೇರೊಬ್ಬ ಫಾಲ್‌ಸ್ಟಾಪ್. ಅದನ್ನು ಈ ಪುಸ್ತಕದಲ್ಲಿ ಗಣನೆಗೆ ತೆಗೆದುಕೊಂಡಿಲ್ಲ.
ಫಾಲ್‌ಸ್ಟಾಫ್ ವಿಷಯವಾಗಿ ಪ್ರಸ್ತಾವನೆಯ ರೂಪದ ಒಂದು ಲೇಖನವನ್ನು ನಮ್ಮ ಆಂಗ್ಲ ಸಾಹಿತ್ಯ ವಿದ್ವಾಂಸರೊಬ್ಬರಿಂದ ಬರೆಸೋಣ' ಎಂದು ಆಸೆಯಾಗಿ ನಾನು ಶ್ರೀ ಎಲ್.ಎಸ್. ಶೇಷಗಿರಿರಾಯರನ್ನು ಬೇಡಿದೆನು. ಅವರು ವಿಶ್ವಾಸದಿಂದ ಒಪ್ಪಿ ಸುಂದರವಾದ ಒಂದು ಲೇಖನವನ್ನು ಒದಗಿಸಿದ್ದಾರೆ. ಅದನ್ನು ಈ ಪುಸ್ತಕದಲ್ಲಿ ಸೇರಿಸಿದೆ. ಈ ಉಪಕಾರಕ್ಕಾಗಿ ನಾನು ಶ್ರೀಯುತರಿಗೆ ವಂದನೆ ಸಲ್ಲಿಸುತ್ತೇನೆ.
ಭಾಷಾಂತರದ ಕ್ರಮ ತಿಳಿಯಲಿ ಎಂದು, ಕವಿಯ ವಾಕ್ಯಗಳ ಭಾವ ವಿಶದವಾಗಲಿ ಎಂದು, ಈ ಮೊದಲ ನಾಲ್ಕು, ಪುಸ್ತಕಗಳಲ್ಲಿ ಟಿಪ್ಪಣಿಗಳನ್ನು ಕೊಟ್ಟಿತ್ತು. ಈ ಪುಸ್ತಕದಲ್ಲಿ ಅವುಗಳ ಕ್ರಮವನ್ನೇ ಅನುಸರಿಸಿದೆಯಾಗಿ, ಟಿಪ್ಪಣಿಗಳು ಅನವಶ್ಯಕ ಎಂದು ತೋರಿ ಅವನ್ನು ಬಿಟ್ಟಿದೆ.
-ಮಾಸ್ತಿ ವೆಂಕಟೇಶ ಅಯ್ಯಂಗಾರ್

Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.