Skip to product information
1 of 1

Dr. Gajanana Sharma

ಗೋಮುಖ

ಗೋಮುಖ

Publisher - ಅಂಕಿತ ಪುಸ್ತಕ

Regular price Rs. 295.00
Regular price Rs. 295.00 Sale price Rs. 295.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ಗಜಾನನ ಶರ್ಮ ಅವರ ಅನುಭವವನ್ನು ನಮ್ಮದಾಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಅನ್ನುವುದೇ ನನ್ನ ಸಂತೋಷಕ್ಕೆ ಕಾರಣ. ಅವರು ತಮ್ಮ ಪ್ರವಾಸದ ವಿವರಗಳನ್ನು ಹೇಳುತ್ತಲೇ ಪುರಾಣ, ಇತಿಹಾಸಗಳಿಗೆ ಆಯಾ ಪ್ರದೇಶದ ಐತಿಹ್ಯವನ್ನು ಬೆಸೆಯುತ್ತಾ ಹೋಗುತ್ತಾರೆ. ಒಂದು ಪ್ರದೇಶದ ಕತೆಯನ್ನು ಅಪ್ಪಟ ಕತೆಗಾರನಂತೆ ಹೇಳುತ್ತಾರೆ. ಈ ವಿವರಗಳ ಜೊತೆಗೆ ಅವರು ತಮ್ಮನ್ನೂ ತೆರೆದುಕೊಳ್ಳುತ್ತಾ ಹೋಗುತ್ತಾರೆ. ಗಂಗೆಯಲ್ಲಿ ಮುಳುಗಬೇಕೇ ಬೇಡವೇ ಎಂಬ ಅವರೊಳಗಿನ ಜಿಜ್ಞಾಸೆ, ಪ್ರವಾಸದಲ್ಲಿ ಭಕ್ತಿಯೆಷ್ಟು, ಕುತೂಹಲ ಎಷ್ಟು ಎಂಬುದರ ಸ್ಪಷ್ಟ ಅರಿವು ಇರುವ ಮನಸ್ಸು, ಕಂಡದ್ದನ್ನು ಉತ್ಪ್ರೇಕ್ಷೆಯೂ ಇಲ್ಲದ, ನಿರಾಶಾದಾಯಕವೂ ಅಲ್ಲದಂಥ ಭಾಷೆಯಲ್ಲಿ ಓದುಗನಿಗೆ ದಾಟಿಸುವ ಸೂಕ್ಷ್ಮಜ್ಞ ಗ್ರಹಿಕೆ, ಹೊರನೋಟದೊಂದಿಗೆ ಒಳನೋಟವನ್ನೂ ಬೆಸೆಯಬಲ್ಲ ಪಾಂಡಿತ್ಯ- ಇವೆಲ್ಲವೂ ಅವರಿಗೆ ಸಿದ್ಧಿಸಿದೆ.

ಗಜಾನನಶರ್ಮರ ಓದು ಎಷ್ಟು ವಿಸ್ತಾರವಾಗಿದೆ ಎನ್ನುವುದನ್ನೂ 'ಗೋಮುಖ' ತೋರಿಸಿಕೊಟ್ಟಿದೆ. ದೇಶ ನೋಡು, ಇಲ್ಲ, ಕೋಶ ಓದು ಎಂಬ ಗಾದೆಯಲ್ಲಿ ಎರಡನ್ನೂ ಮಾಡಿದವರು ಅವರು. ನೋಡಿದ್ದನ್ನು ಮತ್ತು ಓದಿದ್ದನ್ನು ಅವರು ಹದವಾಗಿ ಮಿಶ್ರಣ ಮಾಡಿ ನಮ್ಮಮುಂದಿಡುವುದರಿಂದ, ನಾವೊಂದು ಕಾಲಪ್ರವಾಹದಲ್ಲಿ ಆ
ಕಾಲದ ಎಲ್ಲ ಘಟನಾವಳಿಗಳ ಭಾಗವಾಗಿ ಮುಂದಕ್ಕೆ ಸಾಗುತ್ತಿರುವ ಅನುಭವವಾಗುತ್ತದೆ.

-ಜೋಗಿ
View full details